Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಫ್ರೆಶ್ ಪನೀರ್  ಸೇರಿ ತಪ್ಪು ಮಾಹಿತಿ ನೀಡುವ ಆಹಾರ ಲೇಬಲ್‌ ಗಳಿಗೆ ‍FSSAIನಿಂದ ನೋಟಿಸ್ ಜಾರಿ!

---Advertisement---

ದೆಹಲಿ.ಜುಲೈ.07: ಗ್ರಾಹಕರು ಆರೋಗ್ಯಕರ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಲು ಹೆಚ್ಚಾಗಿ ಆಹಾರದ ಪ್ಯಾಕೆಟ್‌ ಗಳ ಮೇಲಿರುವ ಲೇಬಲ್‌ ಗಳನ್ನು ನಂಬುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಆಕರ್ಷಕ ಹಾಗೂ ತಪ್ಪು ದಾರಿಗೆಳೆಯುವ ಲೇಬಲ್‌ ಗಳ ಮೂಲಕ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಇಂತಹ ದಾರಿಗೆಳೆಯುವ ಆರೋಗ್ಯ ಹಕ್ಕುಗಳು ಮತ್ತು ಲೇಬಲಿಂಗ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಮೂರು ಪ್ರಮುಖ ಆಹಾರ ಬ್ರ್ಯಾಂಡ್‌ ಗಳಿಗೆ ನೋಟಿಸ್ ಜಾರಿ ಮಾಡಿದೆ.

ಜಾಹೀರಾತು ಮತ್ತು ಲೇಬಲಿಂಗ್ ನಿಯಮಗಳನ್ನು ಉಲ್ಲಂಘಿಸಿರುವ ಆಹಾರ ಉದ್ಯಮ ಸಂಸ್ಥೆಗಳಿಗೆ ಎಫ್‌ಎಸ್‌ಎಸ್‌ಎಐ ಎಚ್ಚರಿಕೆ ನೀಡಿದ್ದು, ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಮತ್ತು ತಕ್ಷಣವೇ ಸರಿಪಡಿಸುವ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ. ನೋಟಿಸ್ ಪಡೆದ ಮೂರು ಪ್ರಮುಖ ಉತ್ಪನ್ನಗಳ ವಿವರಗಳು ಈ ಕೆಳಗಿನಂತಿವೆ.

ಹೆರಿಟೇಜ್ ಸಂಸ್ಥೆಯ ಪನೀರ್ ಉತ್ಪನ್ನಕ್ಕೆ ಎಫ್‌ಎಸ್‌ಎಸ್‌ಎಐ ನೋಟಿಸ್ ನೀಡಿದೆ. ಈ ಉತ್ಪನ್ನದಲ್ಲಿ “ಫ್ರೆಶ್ ಪನೀರ್” ಎಂಬ ಪದವನ್ನು ಬಳಸಿರುವುದು ನಿಯಮಾವಳಿಗಳಿಗೆ ಬದ್ಧವಾಗಿಲ್ಲ ಎಂದು ಪ್ರಾಧಿಕಾರ ಹೇಳಿದೆ. ಅಲ್ಲದೆ, ಬ್ರ್ಯಾಂಡ್‌ ನ ಹೆಸರಿನಲ್ಲಿರುವ “ಹೆಲ್ತಿ ಹ್ಯಾಪಿನೆಸ್” ಎಂಬ ಪದವು ಗ್ರಾಹಕರಿಗೆ ಈ ಉತ್ಪನ್ನದಿಂದ ನೈಸರ್ಗಿಕವಾಗಿಯೇ ಹೆಚ್ಚಿನ ಆರೋಗ್ಯ ಪ್ರಯೋಜನಗಳಿವೆ ಎಂಬ ತಪ್ಪು ಕಲ್ಪನೆಯನ್ನು ಮೂಡಿಸುತ್ತದೆ ಎಂದು ಎಫ್‌ಎಸ್‌ಎಸ್‌ಎಐ ಆಕ್ಷೇಪಿಸಿದೆ.

‘ಲಾ ಕಾಸಾ ವೆಗಾನ್ ಹ್ಯಾಝೆಲ್‌ ನಟ್ ಚಾಕೊಲೇಟ್ ಸ್ಪ್ರೆಡ್’ ಉತ್ಪನ್ನವು ತನ್ನ ಪ್ಯಾಕೇಜಿಂಗ್‌ನಲ್ಲಿ “ಸಂಪೂರ್ಣ ನೈಸರ್ಗಿಕ”, “100 ಪ್ರತಿಶತ ಸಾವಯವ” ಮತ್ತು “ವೆಗಾನ್” ಎಂದು ಬರೆದುಕೊಂಡಿತ್ತು. ಆದರೆ, ಇವುಗಳಿಗೆ ಎಫ್‌ಎಸ್‌ಎಸ್‌ಎಐ ಪರವಾನಗಿಯಲ್ಲಿ ಯಾವುದೇ ಪೂರ್ವ ಅನುಮೋದನೆ ಇಲ್ಲದಿರುವುದು ಬೆಳಕಿಗೆ ಬಂದಿದೆ. ನಿಯಮಾವಳಿಗಳ ಪ್ರಕಾರ “100 ಪ್ರತಿಶತ” ಎಂಬ ಪದಕ್ಕೆ ಯಾವುದೇ ಸ್ಪಷ್ಟ ವ್ಯಾಖ್ಯಾನವಿಲ್ಲದ ಕಾರಣ, ಇದು ಗ್ರಾಹಕರನ್ನು ದಾರಿ ತಪ್ಪಿಸುವ ತಂತ್ರ ಎಂದು ಪ್ರಾಧಿಕಾರ ತಿಳಿಸಿದೆ.

ಸಿಪ್ಜರ್ ನ್ಯೂಟ್ರಾಸ್ಯುಟಿಕಲ್ಸ್‌ನ ಜ್ಯೂಸ್ ಕ್ಯಾಪ್ಸೂಲ್‌ ಗಳು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲದೆ ಎಫ್‌ಎಸ್‌ಎಸ್‌ಎಐ ಅನುಮೋದಿಸಿದೆ, ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಮತ್ತು ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ ಎಂಬ ಸುಳ್ಳು ಭರವಸೆಗಳನ್ನು ನೀಡುತ್ತಿರುವುದು ಪತ್ತೆಯಾಗಿದೆ. ಎಫ್‌ಎಸ್‌ಎಸ್‌ಎಐ ಯಾವುದೇ ವೈಯಕ್ತಿಕ ಉತ್ಪನ್ನಗಳನ್ನು ಈ ರೀತಿ ಪ್ರತ್ಯೇಕವಾಗಿ ಅನುಮೋದಿಸುವುದಿಲ್ಲ ಮತ್ತು ಈ ಕ್ಲೈಮ್‌ ಗಳಿಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ. ಅಲ್ಲದೆ, ಪ್ಯಾಕೆಟ್‌ ನ ಮೇಲೆ ಟೊಮೆಟೊ, ಸೌತೆಕಾಯಿ ಮತ್ತು ಕೊತ್ತಂಬರಿ ಚಿತ್ರಗಳನ್ನು ಹಾಕಲಾಗಿದ್ದರೂ, ಒಳಗಿನ ಪದಾರ್ಥಗಳ ಪಟ್ಟಿಯಲ್ಲಿ ಇವುಗಳ ಉಲ್ಲೇಖವೇ ಇರಲಿಲ್ಲ. ವಿಟಮಿನ್ ಸಿ ಮತ್ತು ಇ ಗೆ ಸಂಬಂಧಿಸಿದ ಪೌಷ್ಟಿಕಾಂಶದ ಮಾಹಿತಿಯೂ ಅಪೂರ್ಣವಾಗಿತ್ತು.

ಆಹಾರದ ಪ್ಯಾಕೆಟ್‌ಗಳ ಮೇಲೆ “ನೈಸರ್ಗಿಕ”, “ಆರೋಗ್ಯಕರ”, “ಸಾವಯವ” ಅಥವಾ “ರೋಗನಿರೋಧಕ ಶಕ್ತಿ ಹೆಚ್ಚಿಸುವ” ಎಂಬ ಆಕರ್ಷಕ ಪದಗಳನ್ನು ನೋಡಿ ಗ್ರಾಹಕರು ಸುಲಭವಾಗಿ ಆಕರ್ಷಿತರಾಗುತ್ತಾರೆ. ಆದರೆ, ಇಂತಹ ಮಾರ್ಕೆಟಿಂಗ್ ಪದಗಳನ್ನು ಕುರುಡಾಗಿ ನಂಬುವ ಬದಲು, ಪ್ಯಾಕೆಟ್‌ನ ಹಿಂಭಾಗದಲ್ಲಿರುವ ಪದಾರ್ಥಗಳ ಪಟ್ಟಿ, ಪೌಷ್ಟಿಕಾಂಶದ ಮಾಹಿತಿ ಮತ್ತು ಅಧಿಕೃತ ಪ್ರಮಾಣೀಕರಣಗಳನ್ನು ಪರಿಶೀಲಿಸುವುದು ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.

Join WhatsApp

Join Now

Join Telegram

Join Now