ಚಿತ್ರದುರ್ಗ. ಜುಲೈ04: ರಾಜ್ಯ ಜಲಸಂಪನ್ಮೂಲ ಸಚಿವರಾದ ರಾಮಲಿಂಗಾರೆಡ್ಡಿ ಅವರು ಇದೇ ಜುಲೈ 5ರಂದು ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಸಚಿವರ ಪರಿಷ್ಕøತ ಪ್ರವಾಸ ಕಾರ್ಯಕ್ರಮದನ್ವಯ ಜುಲೈ 05ರಂದು ಬೆಳಿಗ್ಗೆ 7ಕ್ಕೆ ಬೆಂಗಳೂರಿನಿಂದ ಹೊರಟು, ಮಧ್ಯಾಹ್ನ 12ಕ್ಕೆ ತರೀಕೆರೆ ಮಾರ್ಗ ಮಧ್ಯೆದಲ್ಲಿ ಭದ್ರಾ ಜಲಾಶಯ ಮತ್ತು ಭದ್ರಾ ಮೇಲ್ದಂಡೆ ಯೋಜನೆ ಇನ್ಟೇಕ್ ಕಾಮಗಾರಿ ಪರಿವೀಕ್ಷಣೆ ಮಾಡುವರು. ಮಧ್ಯಾಹ್ನ 1ಕ್ಕೆ ಭದ್ರಾ ಜಲಾಯಶದಿಂದ ಹೊರಟು, ಮಧ್ಯಾಹ್ನ 1.30ಕ್ಕೆ ತರೀಕೆರೆ-ಕಡೂರು ಕೆರೆ ತುಂಬಿಸುವ ಯೋಜನೆಯ ಪಂಪ್ ಹೌಸ್-2 ಕಾಮಗಾರಿ ಪರಿವೀಕ್ಷಣೆ ಮಾಡುವರು. ಮಧ್ಯಾಹ್ನ 2ಕ್ಕೆ ಕಡೂರು ಪಂಪ್ಹೌಸ್ನಿಂದ ಹೊರಟು ಮಧ್ಯಾಹ್ನ 2.30ಕ್ಕೆ ಅಜ್ಜಂಪುರಕ್ಕೆ ಆಗಮಿಸಿ, ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯಕಾಲುವೆ ವೈ-ಜಂಕ್ಷನ್ ಮತ್ತು ಚಿತ್ರದುರ್ಗ ಶಾಖಾ ಕಾಲುವೆ ಪ್ಯಾಕೇಜ್-4ರ ಬಾಟಲ್ನೆಕ್ಸ್ ಕಾಮಗಾರಿ ಪರಿವೀಕ್ಷಣೆ ಮಾಡುವರು. ಮಧ್ಯಾಹ್ನ 3.30ಕ್ಕೆ ಚಿತ್ರದುರ್ಗ ಶಾಖಾ ಕಾಲುವೆ ಹೊಸದುರ್ಗ ಮಾರ್ಗ ಗೋನೂರು ಅಕ್ವೆಡಕ್ಟ್ನಿಂದ ನಿರ್ಗಮಿಸಿ, ಸಂಜೆ 4.30ಕ್ಕೆ ಗೋನೂರು ಅಕ್ವೆಡಕ್ಟ್ಗೆ ಆಗಮಿಸಿ, ಚಿತ್ರದುರ್ಗ ಶಾಖಾ ಕಾಲುವೆಯ ಪ್ಯಾಕೇಜ್-11ರ ಕಾಮಗಾರಿ ವೀಕ್ಷಣೆ ಮಾಡುವರು. ಸಂಜೆ 5.30ಕ್ಕೆ ಚಿತ್ರದುರ್ಗ ಭದ್ರಾ ಮೇಲ್ದಂಡೆ ಯೋಜನೆ ವಲಯ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.


















