ಸುದ್ದಿಒನ್, ಚಿತ್ರದುರ್ಗ, ಜುಲೈ. 04 : ರೋಟರಿ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 3160ನ 2026-27 ನೇ ಸಾಲಿನ ಡಿಸ್ಟ್ರಿಕ್ಟ್ ಗವರ್ನರ್ ದೀಕ್ಷಾ ಸ್ವೀಕಾರ ಕಾರ್ಯಕ್ರಮ “ಭಾಸ್ಕರ” ಆಂಧ್ರಪ್ರದೇಶದ ಅನಂತಪುರದ ದ್ವಾರಕಾ ಫಂಕ್ಷನ್ ಹಾಲ್ ನಲ್ಲಿ ಜುಲೈ 1 ಬುಧವಾರದಂದು ಯಶಸ್ವಿಯಾಗಿ ನೆರವೇರಿದ್ದು, ನೂತನ ಡಿಸ್ಟ್ರಿಕ್ಟ್ ಗವರ್ನರ್ ರೋ. ಪಿ. ಕೇಶವರೆಡ್ಡಿ, ಝೋನಲ್ ಅಸಿಸ್ಟೆಂಟ್ ಗವರ್ನರ್ ರೋ. ಸವಿತಾ ಶಿವಕುಮಾರ್ ಸೇರಿದಂತೆ ಝೋನ್ ಅಸಿಸ್ಟೆಂಟ್ ಗವರ್ನರ್ ಗಳು ಸೇವಾದೀಕ್ಷೆ ಸ್ವೀಕರಿಸಿದರು.
2026-27ನೇ ಸಾಲಿನ ರೋಟರಿ ಕ್ಲಬ್ ಆಫ್ ಚಿನ್ಮೂಲಾದ್ರಿ ಚಿತ್ರದುರ್ಗ ಅಧ್ಯಕ್ಷರಾಗಿ ತಂತ್ರಜ್ಞಾನ ಹಾಗೂ ಉನ್ನತ ಶಿಕ್ಷಣ ಕ್ಷೇತ್ರಗಳ ತಜ್ಞರೂ ಮತ್ತು ಈ ಕ್ಷೇತ್ರಗಳ ಅನೇಕ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿರುವ ರೋ. ಶಶಿಧರ್ ರಾವ್, ರೋಟರಿ ಕ್ಲಬ್ ಆಫ್ ಚಿತ್ರದುರ್ಗ ಅಧ್ಯಕ್ಷರಾಗಿ ಸ್ಪೋಕನ್ ಇಂಗ್ಲಿಷ್ ಹಾಗೂ ಶಿಕ್ಷಣ ಕ್ಷೇತ್ರಗಳ ತಜ್ಞರು ರೋ. ಯೋಗೀಶ್ ಸಹ್ಯಾದ್ರಿ, ರೋಟರಿ ಕ್ಲಬ್ ಆಫ್ ಚಿತ್ರದುರ್ಗ ಫೋರ್ಟ್ ಅಧ್ಯಕ್ಷರಾಗಿ ಚಾರ್ಟರ್ಡ್ ಅಕೌಂಟೆಂಟ್ ಹಾಗೂ ಆಡಿಟಿಂಗ್ ತಜ್ಞರು ರೋ. ಜಗನ್ನಾಥ್ ಶೆಟ್ಟಿ ಇವರುಗಳು ಕ್ಲಬ್ ಗಳ ಅಧ್ಯಕ್ಷರಾಗಿ ಸೇವಾದೀಕ್ಷೆ ಸ್ವೀಕರಿಸಿದರು.
ರೋಟರಿ ಕ್ಲಬ್ ಆಫ್ ಚಿನ್ಮೂಲಾದ್ರಿ ಚಿತ್ರದುರ್ಗ ಕಾರ್ಯದರ್ಶಿಗಳಾಗಿ ನವೀಕರಿಸಬಹುದಾದ – ಸುಸ್ಥಿರ ಇಂಧನ ಬಳಕೆ ಅನುಷ್ಠಾನ ತಜ್ಞರು ರೋ. ಮಂಜುನಾಥ್ ಭಾಗವತ್, ರೋಟರಿ ಕ್ಲಬ್ ಆಫ್ ಚಿತ್ರದುರ್ಗ ಇದರ ಕಾರ್ಯದರ್ಶಿಗಳಾಗಿ ಉದ್ಯಮಿ ರೋ. ಮಂಜುನಾಥ್ ಕೆ.ಜಿ., ರೋಟರಿ ಕ್ಲಬ್ ಆಫ್ ಚಿತ್ರದುರ್ಗ ಫೋರ್ಟ್ ಕಾರ್ಯದರ್ಶಿಗಳಾಗಿ ಉದ್ಯಮಿ ರೋ. ರವಿ ಎಂ.ವಿ. ಇವರುಗಳು ಕ್ಲಬ್ ಗಳ ಕಾರ್ಯದರ್ಶಿಗಳಾಗಿ ಸಾಮಾಜಿಕ ಸೇವಾ ಕಾರ್ಯನಿರ್ವಹಿಸುತ್ತಿದ್ದಾರೆ. ಮೂರೂ ಕ್ಲಬ್ ಗಳ ಕಾರ್ಯಕಾರಿ ನಿರ್ದೇಶಕ ಮಂಡಳಿ ಹಾಗೂ ಕ್ಲಬ್ ಗಳ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಮೂರೂ ಕ್ಲಬ್ ಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಸೇವೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ರೋಟರಿ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 3160ನ 70ಕ್ಕೂ ಹೆಚ್ಚು ಕ್ಲಬ್ ಗಳ ಅಧ್ಯಕ್ಷರು ಈ ಸಂದರ್ಭದಲ್ಲಿ ಸೇವಾ ದೀಕ್ಷೆಯನ್ನು ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 3160ನ 2025-26 ನೇ ಸಾಲಿನ (ನಿಕಟಪೂರ್ವ) ಡಿಸ್ಟ್ರಿಕ್ಟ್ ಗವರ್ನರ್ ರೋ. ಎಂ.ಕೆ. ರವೀಂದ್ರ, ರೋ. ವೇದಾ ರವೀಂದ್ರ, ಡಿಸ್ಟ್ರಿಕ್ಟ್ ಲರ್ನಿಂಗ್ ಫೆಸಿಲಿಟೇಟರ್ ರೋ. ಚಿನ್ನಪ್ಪರೆಡ್ಡಿ, ಪೂರ್ವ ಡಿಸ್ಟ್ರಿಕ್ಟ್ ಗವರ್ನರ್ ರೋ. ಕೆ. ಮಧುಪ್ರಸಾದ್, ಪೂರ್ವ ಡಿಸ್ಟ್ರಿಕ್ಟ್ ಗವರ್ನರ್ ರೋ. ಜಾನ್ ಡೇನಿಯಲ್, ಡಿಸ್ಟ್ರಿಕ್ಟ್ ಗವರ್ನರ್ ಎಲೆಕ್ಟ್ ರೋ. ತ್ರಿವಿಕ್ರಮ ಜೋಶಿ, ಪೂರ್ವ ಅಸಿಸ್ಟೆಂಟ್ ಗವರ್ನರ್ ರೋ. ಗಾಯತ್ರಿ ಶಿವರಾಮ್, ರೋ. ವಿಶ್ವನಾಥ್ ಜಿ.ಎ., ರೋ. ಪಿ.ಬಿ. ಶಿವರಾಮ್, ರೋ. ದಿಲ್ಷದ್ ಉನ್ನೀಸಾ, ರೋ. ಬಿ.ಎಸ್. ಕನಕರಾಜ್, ರೋ. ಟಿ. ವೀರಭದ್ರಸ್ವಾಮಿ, ರೋ. ಎಸ್. ವೀರೇಶ್, ರೋ. ಶಂಕರಪ್ಪ, ರೋ. ಶಿವಕುಮಾರ್, ರೋ. ಗೌರಮ್ಮ, ರೋ. ಮನು, ಶ್ರೀ ನಂಜುಂಡರಾವ್, ಖ್ಯಾತ ಭರತನಾಟ್ಯ ಕಲಾಗುರುಗಳಾದ ವಿದುಷಿ ಶ್ರೀಮತಿ ಶ್ವೇತಾ ಭಟ್, ಶ್ರೀ ರವೀಶ್ ಸೇರಿದಂತೆ ರೋಟರಿಯ ಅಭಿಮಾನಿಗಳು – ಹಿತೈಷಿಗಳು ಮತ್ತು ರೋಟರಿ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 3160ನ 70ಕ್ಕೂ ಹೆಚ್ಚು ರೋಟರಿ ಕ್ಲಬ್ ಗಳ ಸಾವಿರಾರು ಸದಸ್ಯರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.



















