ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂನ್. 30 : ಉಪ್ಪಾರ ಜನಾಂಗ ಸಂಘಟನೆಗೆ ಹೆಚ್ಚಿನ ಒತ್ತು ಕೊಡಬೇಕು. ಪರಸ್ಪರ ವೈಷಮ್ಯ, ಭಿನ್ನಾಭಿಪ್ರಾಯ ಸರಿಯಲ್ಲ ಎಂದು ಹೊಸುದುರ್ಗ ಬ್ರಹ್ಮವಿದ್ಯಾನಗರ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಕರೆ ನೀಡಿದರು.
ಹಂಪಯ್ಯನಮಾಳಿಗೆಯಲ್ಲಿ ಇತ್ತೀಚೆಗೆ ನಡೆದ ಭಗೀರಥ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಈ ಗ್ರಾಮದಲ್ಲಿರುವ ಉಪ್ಪಾರ ಜನಾಂಗದ ಮಹಿಳೆಯರು ವಿಚಾರವಂತರಿದ್ದಾರೆ. ಸಮಾಜದ ಕುಂದು ಕೊರತೆಗಳೇನಾದರೂ ಇದ್ದರೆ ಸರ್ಕಾರದ ಗಮನಕ್ಕೆ ತಂದು ಪರಿಹರಿಸಿಕೊಳ್ಳುವತ್ತ ಗಮನ ಕೊಡಬೇಕು. ಒಗ್ಗಟ್ಟಿನಿಂದ ಇದ್ದಾಗ ಮಾತ್ರ ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ಪಡೆದುಕೊಳ್ಳಬಹುದು. ಗ್ರಾಮದ ಪಕ್ಕದಲ್ಲಿ ನಗರಸಭೆಯವರು ಕಸ ತ್ಯಾಜ್ಯಗಳನ್ನು ಸುರಿಯುತ್ತಿರುವುದರಿಂದ ಸುತ್ತಮುತ್ತಲಿನ ಪರಿಸರ ಹಾಳಾಗುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿಯಿದೆ ಎಂದು ನನ್ನ ಗಮನಕ್ಕೆ ತಂದಿದ್ದೀರ. ಈ ಸಂಬಂಧ ಜನಪ್ರತಿನಿಧಿಗಳ ಜೊತೆ ಚರ್ಚಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.
ಉಪ್ಪಾರ ಸಮಾಜದ ನಿಕಟಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ್ ಹಂಪಯ್ಯನಮಾಳಿಗೆ ಮಾತನಾಡಿ ನಗರಸಭೆಯವರು ಕಸ ತ್ಯಾಜ್ಯಗಳನ್ನು ತಂದು ಸುರಿಯುತ್ತಿರುವುದರಿಂದ ಪ್ರತಿ ಮನೆಗಳ ಮುಂದೆ ನೊಣಗಳು ಮುತ್ತಿಕೊಳ್ಳುತ್ತವೆ. ಇಲ್ಲಿ ಓಡಾಡಬೇಕಾದರೆ ದುರ್ವಾಸನೆ ತಡೆಯಲು ಆಗುವುದಿಲ್ಲ. ಈ ವಿಚಾರವನ್ನು ನಗರಸಭೆ ಗಮನಕ್ಕೆ ತಂದು ಸುತ್ತಮುತ್ತಲಿನ ಎಲ್ಲಾ ಹಳ್ಳಿಗಳ ಜನರಿಗೆ ಅನುಕೂಲ ಮಾಡುವಂತೆ ಸ್ವಾಮೀಜಿಯವರಲ್ಲಿ ವಿನಂತಿಸಿದರು.
ಉಪ್ಪಾರ ಸಂಘದ ರಾಜ್ಯ ವಕ್ತಾರ ಎಂ.ಪಿ.ಶಂಕರ್ ಮಾತನಾಡಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಉಪ್ಪಾರ ಜನಾಂಗ ಮುಂದೆ ಬರಬೇಕು. ಅದಕ್ಕಾಗಿ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕಿದೆ. ನಗರಸಭೆಯವರು ತ್ಯಾಜ್ಯಗಳನ್ನು ತಂದು ಹಂಪಯ್ಯನಮಾಳಿಗೆ ಸಮೀಪ ಸುರಿಯುತ್ತಿರುವುದನ್ನು ನಿಲ್ಲಿಸದಿದ್ದರೆ ಹೋರಾಟ ನಡೆಸಬೇಕಾಗುವುದೆಂದು ಎಚ್ಚರಿಸಿದರು.

ಉಪ್ಪಾರ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಲ್. ಮಹೇಶ್, ತಾಲ್ಲೂಕು ಅಧ್ಯಕ್ಷ ಸಿದ್ದೇಶ್ವರ, ಮಂಜುನಾಥ ಕೊಂಡಾಪುರ, ಮಾರುತಿ, ಮಹಾಂತೇಶ್, ಸುರೇಶ್, ಎಲ್.ಐ.ಸಿ. ಮೇಷ್ಟ್ರು ಗಂಗಣ್ಣ, ರಾಜು, ಕಸವನಹಳ್ಳಿ ಅಂಜಿನಪ್ಪ, ಈಶ್ವರ್ ಕಾಲ್ಕೆರೆ, ಉಪ್ಪಾರ ಸಮಾಜದ ತಾಲ್ಲೂಕು ಕಾರ್ಯದರ್ಶಿ ಅಜ್ಜಪ್ಪ, ಖಜಾಂಚಿ ಬಸಣ್ಣ ಬಳ್ಳೆಕಟ್ಟೆ, ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ, ಜಗನ್ನಾಥರೆಡ್ಡಿ, ದೇವು, ಭಾಗ್ಯಮ್ಮ, ಬಸವರಾಜ್, ಗೌರಮ್ಮ, ಕೃಷ್ಣಪ್ಪ, ಮಲ್ಲಮ್ಮ, ನಿಂಗಪ್ಪ ಇನ್ನು ಅನೇಕರು ಜಯಂತಿಯಲ್ಲಿ ಪಾಲ್ಗೊಂಡಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.













