Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎನ್ನಲಾದ ವೈರಲ್ ಆಡಿಯೊ ಸಂಚಲನ!

---Advertisement---

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಕುರಿತು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಪ್ರದೀಪ್ ಎಂಬುವರೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ಯ ಬಿಜೆಪಿ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.ವೈರಲ್ ಆಗಿರುವ ಆಡಿಯೊಗೆ ಪ್ರತಿಕ್ರಿಯಿಸಿರುವ ಸದಾನಂದ ಗೌಡ, “ಈ ಆಡಿಯೊಗೂ ನನಗೂ ಯಾವುದೇ ಸಂಬಂಧವಿಲ್ಲ. ಅದು ನನ್ನ ಧ್ವನಿಯೇ ಅಲ್ಲ. ನಾನು ಅಂತಹ ಯಾವುದೇ ಮಾತುಕತೆ ನಡೆಸಿಲ್ಲ. ಆದ್ದರಿಂದ ಈ ಕುರಿತು ಪ್ರತಿಕ್ರಿಯಿಸುವ ಪ್ರಶ್ನೆಯೇ ಇಲ್ಲ.

ಆಡಿಯೊ ಯಾರದ್ದು ಎಂಬುದನ್ನು ಮಾಧ್ಯಮಗಳೇ ಪರಿಶೀಲಿಸಲಿ” ಎಂದು ಸ್ಪಷ್ಟಪಡಿಸಿದ್ದಾರೆ.ಆದರೆ ವೈರಲ್ ಆಡಿಯೊದಲ್ಲಿನ ಧ್ವನಿ ಸದಾನಂದ ಗೌಡ ಅವರ ಧ್ವನಿಗೆ ಹೋಲಿಕೆ ಹೊಂದಿದ್ದು, ಇಂಗ್ಲಿಷ್‌ನಲ್ಲಿ ನಡೆದಿರುವ ಸಂಭಾಷಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಅಧ್ಯಕ್ಷೀಯ ಅವಧಿ, ಅವರನ್ನು ಯಾವಾಗ ಬದಲಾಯಿಸಬೇಕು ಎಂಬ ವಿಚಾರಗಳು ಪ್ರಸ್ತಾಪವಾಗಿವೆ ಎನ್ನಲಾಗಿದೆ. ಇದರಿಂದ ಬಿಜೆಪಿ ವಲಯದಲ್ಲಿ ಸಾಕಷ್ಟು ಕುತೂಹಲ ಮತ್ತು ಚರ್ಚೆ ಹುಟ್ಟಿಕೊಂಡಿದೆ.

ಆಡಿಯೊದಲ್ಲಿನ ಮಾತುಕತೆಯ ಪ್ರಕಾರ, ವಿಜಯೇಂದ್ರ ಅವರ ಅಧ್ಯಕ್ಷೀಯ ಅವಧಿ ನವೆಂಬರ್‌ವರೆಗೆ ಮುಂದುವರಿಯಲಿ. ಈಗಲೇ ಅವರನ್ನು ಬದಲಾಯಿಸಿದರೆ ಬಿಜೆಪಿ ಲಿಂಗಾಯತ ವಿರೋಧಿ ಎಂಬ ಸಂದೇಶ ಹೋಗುವ ಸಾಧ್ಯತೆ ಇದೆ. ಅವಧಿ ಮುಗಿದ ಬಳಿಕ ಯೋಜಿತವಾಗಿ ಬದಲಾವಣೆ ಮಾಡಿದರೆ ಯಾರೂ ಪ್ರಶ್ನಿಸುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎನ್ನಲಾಗಿದೆ. ಸೂಕ್ತ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರೆ ಯಾವುದೇ ವಿರೋಧ ಎದುರಾಗುವುದಿಲ್ಲ ಎಂಬ ಮಾತುಗಳೂ ಕೇಳಿಬಂದಿವೆ.

ಸಂಭಾಷಣೆಯ ವೇಳೆ ಪ್ರದೀಪ್ ಎಂಬುವರು ಬಿ.ಎಲ್. ಸಂತೋಷ್ ಅವರ ಪಾತ್ರದ ಬಗ್ಗೆ ಪ್ರಶ್ನಿಸಿದಾಗ, “ಅದು ಹಾಗಿರಲಿ” ಎಂಬ ಉತ್ತರ ಕೇಳಿಬಂದಿದೆ ಎನ್ನಲಾಗಿದೆ. ಅಲ್ಲದೆ, “ಜನರು ನನ್ನನ್ನು ಇನ್ನೂ ಗುರುತಿಸುತ್ತಾರೆ. ಬಸ್ ನಿಲ್ದಾಣದಲ್ಲಿ ಕಾಣಿಸಿಕೊಂಡರೂ ಹಲವರು ಸೆಲ್ಫಿ ತೆಗೆದುಕೊಳ್ಳಲು ಬರುತ್ತಾರೆ” ಎಂಬ ಹೇಳಿಕೆಯೂ ಆಡಿಯೊದಲ್ಲಿದೆ ಎಂದು ಹೇಳಲಾಗುತ್ತಿದೆ.

ಈ ಎಲ್ಲ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಸದಾನಂದ ಗೌಡ, “ಇದು ನನ್ನ ಆಡಿಯೊ ಅಲ್ಲ. ನಾನು ಮಾತನಾಡಿಲ್ಲ. ಹೀಗಾಗಿ ಉತ್ತರಿಸುವ ಅಗತ್ಯವೂ ಇಲ್ಲ” ಎಂದು ಪುನರುಚ್ಚರಿಸಿದರು.
ಇದೇ ವೇಳೆ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ತಮ್ಮ ವಿರುದ್ಧ ಮಾಡಿರುವ ಟೀಕೆಗೆ ತಿರುಗೇಟು ನೀಡಿದ ಸದಾನಂದ ಗೌಡ, “ವಿಶ್ವನಾಥ್ ಮುತ್ತಪ್ಪ ರೈ ಅವರ ಆಪ್ತನಾಗಿ ಗೂಂಡಾಗಿರಿ ಮಾಡುತ್ತಿದ್ದ ವ್ಯಕ್ತಿ. ಅವರ ಬಗ್ಗೆ ನಾನು ಮಾತನಾಡಲು ಇಷ್ಟಪಡುವುದಿಲ್ಲ. ಹಣ ಮತ್ತು ಕೊಳ್ಳೆ ಹೊಡೆಯುವುದೇ ಅವರ ಕೆಲಸ” ಎಂದು ತೀವ್ರ ವಾಗ್ದಾಳಿ ನಡೆಸಿದರು.

“ನಾನು ಒಕ್ಕಲಿಗ ಅಲ್ಲ ಎಂದು ಕೆಲವರು ಪ್ರಚಾರ ಮಾಡುತ್ತಿದ್ದಾರೆ. ಈ ಕುರಿತು ದಕ್ಷಿಣ ಕನ್ನಡದಲ್ಲಿ ಪ್ರತಿಭಟನೆ ಕೂಡ ನಡೆದಿದೆ. ಈ ವಿಷಯವನ್ನು ಪಕ್ಷದ ರಾಷ್ಟ್ರೀಯ ನಾಯಕರ ಗಮನಕ್ಕೂ ತರಲಿದ್ದೇನೆ” ಎಂದು ಸದಾನಂದ ಗೌಡ ಹೇಳಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಉದ್ಯೋಗ ಸೃಷ್ಟಿ ಹಾಗೂ ಕೌಶಲ್ಯಾಭಿವೃದ್ಧಿಗೆ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಕೈಗಾರಿಕಾ ಸಹಭಾಗಿತ್ವದ “ಹೈಪರ್-ಆಕ್ಟಿವ್ ಇನ್ನೋವೇಷನ್ ಹಬ್”ಗಳ ನಿರ್ಮಾಣ ಅತ್ಯಗತ್ಯ

ತೆಳ್ಳಗಿದ್ದರೆ ಮಾತ್ರ ಫಿಟ್ ಎಂದರ್ಥವಲ್ಲ: ನಿಜವಾದ ಫಿಟ್‌ನೆಸ್‌ನ ಗುರುತುಗಳೇನು? ತಜ್ಞರ ಸಲಹೆ ಇಲ್ಲಿದೆ

ಕೂದಲು ಉದುರುವಿಕೆ ತಡೆದು, ದಟ್ಟವಾಗಿ ಬೆಳೆಯಲು ಈ ‘ಸೂಪರ್‌ಫುಡ್‌’ಗಳನ್ನು ನಿಮ್ಮ ಆಹಾರದಲ್ಲಿ ತಪ್ಪದೇ ಸೇರಿಸಿ!

ಚಿತ್ರದುರ್ಗ : ಮೊಳಕಾಲ್ಮೂರಿನಲ್ಲಿ ಭೀಕರ ರಸ್ತೆ ಅಪಘಾತ : ಸೇತುವೆಗೆ ಕಾರು ಡಿಕ್ಕಿಯಾಗಿ ಇಬ್ಬರು ಸಾವು!

ಮೊಬೈಲ್‌-ಸ್ಕ್ರೀನ್‌ಗೆ ಬ್ರೇಕ್ ನೀಡಿ: ಮಾನಸಿಕ ಆರೋಗ್ಯ ಕಾಪಾಡಲು ‘ಡಿಜಿಟಲ್ ಡಿಟಾಕ್ಸ್’ ಏಕೆ ಮುಖ್ಯ?

ನೀತಿ ಕಥೆ: ನಂಬಿಕೆದ್ರೋಹಕ್ಕೆ ಕ್ಷಮೆಯಿಲ್ಲ (ಯುವರಾಜ ಮತ್ತು ಕರಡಿಯ ಕಥೆ)