Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವರ್ಷಾಂತ್ಯಕ್ಕೆ ಮರ್ಚೆಂಟ್ಸ್ ಬ್ಯಾಂಕಿನ ಅಮೃತ ಮಹೋತ್ಸವ : ಸದಸ್ಯರಿಗೆ ದಾಖಲೆಯ ಲಾಭಾಂಶ, ಅಂತ್ಯ ಸಂಸ್ಕಾರ ನಿಧಿ : ನೂತನ ಅಧ್ಯಕ್ಷ ರಘುರಾಮರೆಡ್ಡಿ ಘೋಷಣೆ

---Advertisement---

ಸುದ್ದಿಒನ್, ಚಿತ್ರದುರ್ಗ, ಜೂ. 29 : ಜಿಲ್ಲೆಯ ಪ್ರತಿಷ್ಠಿತ ಬ್ಯಾಂಕೆಂದೇ ಹೆಸರಾಗಿರುವ ದಿ ಮರ್ಚೆಂಟ್ಸ್ ಸೌಹಾರ್ದ ಸಹಕಾರ ಬ್ಯಾಂಕು ಈ ಸಾಲಿಗೆ ಅಮೃತ ಮಹೋತ್ಸವ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಬ್ಯಾಂಕಿನ ಸದಸ್ಯರ, ಗ್ರಾಹಕರ, ಸಾರ್ವಜನಿಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ವರ್ಷದ ಅಂತ್ಯಕ್ಕೆ ಬ್ಯಾಂಕಿನ ಅಮೃತ ಮಹೋತ್ಸವವನ್ನು ನಗರದಲ್ಲಿ ಎರಡು ದಿನಗಳ ಕಾಲ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಬ್ಯಾಂಕಿನ ನೂತನ ಅಧ್ಯಕ್ಷ ರಘುರಾಮರೆಡ್ಡಿ ಘೋಷಿಸಿದರು.

 

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು, ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕರು ಆಗಿರುವ, ದಿ ಮರ್ಚೆಂಟ್ಸ್ ಸೌಹಾರ್ದ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ರಘುರಾಮ ರೆಡ್ಡಿ ನಗರದ ಚಳ್ಳಕೆರೆ ರಸ್ತೆಯ ಎಸ್.ಜಿ. ಕಲ್ಯಾಣ ಮಂಟಪದಲ್ಲಿ ನಡೆದ ಬ್ಯಾಂಕಿನ 75 ನೇ ವಾರ್ಷಿಕ ಸಾಮಾನ್ಯ ಸಭೆಯ ತಮ್ಮ ಚೊಚ್ಚಲ ಸಭೆಯ ಅಧ್ಯಕ್ಷತೆಯ ನುಡಿಗಳನ್ನಾಡಿದರು.

 

ಬ್ಯಾಂಕಿನ ನಿಕಟಪೂರ್ವ ಅಧ್ಯಕ್ಷರಾದ ಎಸ್.ಆರ್. ಲಕ್ಷ್ಮೀಕಾಂತರೆಡ್ಡಿ ಅವರ ಮಹಾದಾಸೆಯಂತೆ ಆಡಳಿತ ಮಂಡಳಿಯ ಸರ್ವಾನುಮತದ ತೀರ್ಮಾನದಂತೆ ಬ್ಯಾಂಕಿನ ಸದಸ್ಯರ ಅಂತ್ಯ ಸಂಸ್ಕಾರ ನಿಧಿಯನ್ನು ಹಾಲಿ ಇರುವ ರೂ. 15,000 ದಿಂದ ರೂ. 25,000 ಕ್ಕೆ ಹೆಚ್ಚಿಸುವುದಾಗಿ ಘೋಷಣೆ ಮಾಡಿದಾಗ, ಸಭೆಯಲ್ಲಿ ಉಪಸ್ಥಿತರಿದ್ದ ಸರ್ವ ಸದಸ್ಯರು ಕರತಾಡನದ ಮೂಲಕ ಸ್ವಾಗತಿಸಿದರು.

ಹಾಗೆಯೇ ಬ್ಯಾಂಕಿನ ಹತ್ತು ಹಲವು ಸೌಲಭ್ಯಗಳ ಜೊತೆಗೆ ದಶಕಗಳಿಂದ ಶೇರುದಾರರಿಗೆ ವಿತರಣೆ ಮಾಡಿಕೊಂಡು ಬರುತ್ತಿದ್ದ ಬ್ಯಾಂಕಿನ ಲಾಭಾಂಶವನ್ನು ಈ ವರ್ಷವೂ ಶೇ. 25 ರಷ್ಟು ವಿತರಣೆ ಮಾಡಲು ಸಭೆಯ ಒಪ್ಪಿಗೆ ಕೇಳಿದಾಗ ಮತ್ತೊಮ್ಮೆ ಕರತಾಡನದೊಂದಿಗೆ ಸದಸ್ಯರು ಒಪ್ಪಿಗೆ ಸೂಚಿಸಿದರು.

ನಿಕಟಪೂರ್ವ ಅಧ್ಯಕ್ಷರ ಮಹಾದಾಸೆಯಂತೆ ಬ್ಯಾಂಕಿನಲ್ಲಿ ಸಾಲ ತೆಗೆದುಕೊಳ್ಳುವ ಬಡ, ಮಧ್ಯಮ ವರ್ಗದವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ವಾಯಿದೆ ಸಾಲದ ಬಡ್ಡಿ ದರವನ್ನು ಶೇ. 13 ರಿಂದ 10ಕ್ಕೆ ಇಳಿಸುವುದಾಗಿಯೂ, ಎಲ್ಲಾ ರೀತಿಯ ಸಾಲಗಳ ಮೇಲೆ ಈಗಿರುವ ಬಡ್ಡಿ ದರವನ್ನು ಶೇ. 0.50 ರಷ್ಟು ಬಡ್ಡಿ ಕಡಿಮೆ ಮಾಡಲಾಗುವುದು ಎಂದು ಸದಸ್ಯರ ಹರ್ಷೋದ್ಗಾರಗಳೊಂದಿಗೆ ಘೋಷಿಸಿದರು.

ಬ್ಯಾಂಕು 2025-26ನೇ ಸಾಲಿನಲ್ಲಿ ಅಂದರೆ 31-03-2026ರ ಅಂತ್ಯಕ್ಕೆ ಬ್ಯಾಂಕಿನ ತೆರಿಗೆ ಮತ್ತು ಅವಕಾಶಗಳ ಮುಂಚಿನ ವರಮಾನವು ರೂ. 5.57 ಕೋಟಿಗಳಿದ್ದು, ಈ ಪೈಕಿ ತೆರಿಗೆ ಮತ್ತು ಅವಕಾಶಗಳಿಗೆ ರೂ. 1.71 ಕೋಟಿ ಪಾವತಿಸಿದ ನಂತರ ನಿವ್ವಳ ವರಮಾನವು ರೂ. 3.86 ಕೋಟಿಗಳಾಗಿರುತ್ತದೆ ಎಂದು ರಘುರಾಮರೆಡ್ಡಿ ಬ್ಯಾಂಕಿನ ನಿವ್ವಳ ಅನುತ್ಪಾದಕ ಸಾಲ ಶೂನ್ಯ ಪ್ರಮಾಣದಲ್ಲಿರುವುದು ಬ್ಯಾಂಕಿನ ಸದೃಢತೆಯನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದರಲ್ಲದೇ, 2026-27ನೇ ಸಾಲಿನ ಆಯವ್ಯಯಕ್ಕೆ ಸದಸ್ಯರುಗಳಿಂದ ಅನುಮೋದನೆ ಪಡೆದರು.

 

ಇದೇ ಸಂದರ್ಭದಲ್ಲಿ 42 ವರ್ಷಗಳ ಕಾಲ ಬ್ಯಾಂಕಿನ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ಮೂರೂವರೆ ದಶಕಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಹಾಲಿ ನಿರ್ದೇಶಕರಾಗಿರುವ ಸಹಕಾರ ರತ್ನ ಪ್ರಶಸ್ತಿ ಪುರಸ್ಕøತ ಎಸ್.ಆರ್. ಲಕ್ಷ್ಮೀಕಾಂತರೆಡ್ಡಿ ಅವರನ್ನು ಆಡಳಿತ ಮಂಡಳಿ ಹಾಗೂ ಸದಸ್ಯರೆಲ್ಲರ ಪರವಾಗಿ ಸನ್ಮಾನಿಸಲಾಯಿತು. ಲಕ್ಷ್ಮೀಕಾಂತರೆಡ್ಡಿ ಅವರು ಬ್ಯಾಂಕಿಗೆ ಸಲ್ಲಿಸಿರುವ ಸೇವೆ ಹಾಗೂ ಸಾಧನೆಯ ಸಂಕ್ಷಿಪ್ತ ಪರಿಚಯವನ್ನು ಬ್ಯಾಂಕಿನ ನಿರ್ದೇಶಕ ಶ. ಮಂಜುನಾಥ ವಾಚನ ಮಾಡಿದರು.

 

ಬ್ಯಾಂಕಿನ ನಿರ್ದೇಶಕ ಪಿ.ಎಲ್. ಸುರೇಶ್ ರಾಜು ಸ್ವಾಗತಿಸಿದರು. ಬ್ಯಾಂಕಿನ ಉಪಾಧ್ಯಕ್ಷ ಎಲ್.ಈ. ಶ್ರೀನಿವಾಸ್ ಬಾಬು ಲಿಂಗಂ ಮಾಜಿ ಸಚಿವ ಡಿ. ಸುಧಾಕರ್, ವಿಶ್ರಾಂತ ಪತ್ರಕರ್ತ ಜಿ.ಎಸ್. ಉಜ್ಜನಪ್ಪ ಸೇರಿದಂತೆ ಕಳೆದ ಸಾಲಿನಲ್ಲಿ ಸ್ವರ್ಗಸ್ಥರಾದ ಸದಸ್ಯರ ಹೆಸರು ವಾಚನ ಮಾಡುವ ಮೂಲಕ ಒಂದು ನಿಮಿಷ ಶ್ರದ್ಧಾಂಜಲಿ ಸಲ್ಲಿಸಲಾಯಿತು.

 

ಇದೇ ಸಂದರ್ಭದಲ್ಲಿ ಬ್ಯಾಂಕಿನ ಹಿರಿಯ ಸದಸ್ಯರು, ಸದಸ್ಯರ ಹಾಗೂ ಬ್ಯಾಂಕಿನ ಸಿಬ್ಬಂದಿ ವರ್ಗದವರ ಎಸ್.ಎಸ್.ಎಲ್.ಸಿ., ಪಿ.ಯು.ಸಿ.ಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಪ್ರತಿಭಾನ್ವಿತರನ್ನು ಸನ್ಮಾನಿಸಲಾಯಿತು.

 

2024-25ನೇ ಸಾಲಿನ ಸರ್ವ ಸದಸ್ಯರ ನಡವಳಿಗಳನ್ನು ಅಂಗೀಕರಿಸಿ, ಅನುಮೋದಿಸುವ ವರದಿಯನ್ನು ಶಾಖಾ ವ್ಯವಸ್ಥಾಪಕ ಬಿ.ಎಸ್. ತಿಪ್ಪೇಸ್ವಾಮಿ ವಾಚನ ಮಾಡಿದರು.
ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಆರ್. ಮಲ್ಲಿಕಾರ್ಜುನ ಸಭೆಯ ಕಾರ್ಯ ಕಲಾಪಗಳನ್ನು ಯಶಸ್ವಿಯಾಗಿ ನಿರ್ವಹಿಸಿದರೆ, ಬ್ಯಾಂಕಿನ ನಿರ್ದೇಶಕ ಶ. ಮಂಜುನಾಥ ವಂದನಾರ್ಪಣೆ ಮಾಡಿದರು.
ಸರ್ವ ಸದಸ್ಯರ ಸಭೆಯಲ್ಲಿ ಆಡಳಿತ ಮಂಡಳಿ ನಿರ್ದೇಶಕರು, ಬ್ಯಾಂಕಿನ ಸಿಬ್ಬಂದಿ ವರ್ಗ ಹಾಗೂ ಶೇರುದಾರರು ಉಪಸ್ಥಿತರಿದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now