ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಜೂ. 28 : ಭೋವಿ ಜನೋತ್ಸವವು ಕೇವಲ ಒಂದು ಆಚರಣೆಯಾಗದೇ, ಭೋವಿ, ವಡ್ಡರ ಜನರ ಸಾಂಸ್ಕೃತಿಕ ಬದುಕನ್ನು ಬಿಂಬಿಸುವ ಮತ್ತು ಎತ್ತಿಹಿಡಿಯುವ ಪ್ರಮುಖ ಉತ್ಸವವಾಗಬೇಕು ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು ಕರೆ ನೀಡಿದ್ದಾರೆ.
ಚಿತ್ರದುರ್ಗ ನಗರದ ಹೂರ ವಲಯದ ಭೋವಿ ಗುರುಪೀಠದಲ್ಲಿ ಜು.18 ರಂದು ನಡೆಯಲಿರುವ ಭೋವಿ ಜನೋತ್ಸವ ಕಾರ್ಯಕ್ರಮದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಸಾನಿಧ್ಯವಹಿಸಿ ಭೋವಿ ಸಮಾಜದ ಪ್ರಸ್ತುತ ಸ್ಥಿತಿಗತಿಯ ಕುರಿತು ಮಾತನಾಡಿದ ಶ್ರೀಗಳು, “ಪ್ರಸ್ತುತ ನಮ್ಮ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಮತ್ತು ಅನಕ್ಷರತೆ ಹೆಚ್ಚಾಗಿ ಕಂಡುಬರುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಆದರೆ, ಈ ಪರಿಸ್ಥಿತಿಯನ್ನು ಹೀಗೆಯೇ ಮುಂದುವರಿಯಲು ಬಿಡಬಾರದು,” ಎಂದು ತಿಳಿಸಿದರು.
“ಮುಂಬರುವ ದಿನಗಳಲ್ಲಿ ಸಮುದಾಯದಲ್ಲಿರುವ ಅನಕ್ಷರತೆಯನ್ನು ಸಂಪೂರ್ಣವಾಗಿ ತೊಲಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯಪ್ರವೃತ್ತರಾಗಬೇಕಿದೆ. ಈ ನಿಟ್ಟಿನಲ್ಲಿ ಹಮ್ಮಿಕೊಳ್ಳುವ ಪ್ರತಿಯೊಂದು ಸಕಾರಾತ್ಮಕ ಪ್ರಕ್ರಿಯೆ ಮತ್ತು ಯೋಜನೆಗಳಿಗೆ ಸಮಾಜದ ಪ್ರತಿಯೊಬ್ಬ ನಾಗರಿಕರೂ ಕೈಜೋಡಿಸಿ ಯಶಸ್ವಿಗೊಳಿಸಬೇಕು,” ಜಾತಿ ನಮ್ಮ ಶಕ್ತಿಯಾಗಿದೆ, ಜಾತಿ ಬಲವಾದಷ್ಟು ಅದರಲ್ಲಿ ಜನತೆ ಬಲಿಷ್ಠರಾಗುತ್ತಾರೆ, ಬಲಿಷ್ಠರಾದವರ ಬೇರೆಯವರನ್ನು ಬಲಿಷ್ಠರನ್ನಾಗಿ ಮಾಡಿದಾಗ ಸಮಾಜ ಮತ್ತಷ್ಟು ಬಲಿಷ್ಠವಾಗುತ್ತದೆ ನಮ್ಮ ಹಿರಿಯರು ಹಾಕಿ ಕೊಟ್ಟ ದಾರಿ ಇಂದು ನಮಗೆ ಮಾರ್ಗದರ್ಶನವಾಗಿದೆ ಎಂದು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ತಿಳಿಸಿದರು.
ಸಮಾಜದ ಮುಖಂಡರು, ದೇವರಾಜು ವಿದ್ಯಾ ಸಂಸ್ಥೆಯ ಸಿಇಒ ರಘುಚಂದನ್ ಮಾತನಾಡಿ, ನಮ್ಮ ಸಮುದಾಯ ಒಗ್ಗಟ್ಟು ಇಲ್ಲದಿರುವುದರಿಂದ ಯಾವುದೇ ರಾಜಕೀಯ ಪಕ್ಷದವರು ನಮ್ಮನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ, ಇದರ ಅನುಭವ ನನಗೆ ಆಗಿದೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿವತಿಯಿಂದ ನನಗೆ ಅಂತಿಮವಾಗಿ ಟೀಕೇಟ್ ನಿರ್ಧಾರವಾಗಿತ್ತು ಆದರೆ ನಮ್ಮ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿ ಅದರಲ್ಲೂ ಒಗ್ಗಟ್ಟಾಗಿ ಇಲ್ಲ ಎನ್ನುವ ಕಾರಣಕ್ಕೆ ನನಗೆ ಟಿಕೇಟ್ ತಪ್ಪಿದೆ, ನಮ್ಮ ಸಮುದಾಯ ಒಟ್ಟಾಗಿ ಇದ್ದಾಗ ಮಾತ್ರ ಏನನ್ನಾದರೂ ಸಾಧನೆಯನ್ನು ಮಾಡಲು ಸಾಧ್ಯವಿದೆ. ನಮ್ಮ ಸಮುದಾಯದಲ್ಲಿ ಒಂದು ಕೆಟ್ಟ ಅಭಿಪ್ರಾಯ ಇದೆ ನಾನು ಏಕೆ ಅವರ ಮನೆ ಹತ್ತಿರ ಹೋಗಬೇಕು, ಅವರೇ ನನ್ನ ಹತ್ತಿತರ ಬರಲಿ ಎಂಧು ಇದು ಸಮಾಜದಲ್ಲಿ ಮೇಲೆ ಬೆಳೆಯುತ್ತಿರುವವರಿಗೆ ಪ್ರೋತ್ಸಾಹವನ್ನು ನೀಡದೆ ಅವರ ಕಾಲನ್ನು ಎಳೆಯುವ ಕಾರ್ಯ ಆಗಿದೆ. ಇದರಿಂದ ನಮ್ಮ ಸಮಾಜವನ್ನು ರಾಜಕೀಯ ಪಕ್ಷದವರು ಕೀಳಾಗಿ ನೋಡುತ್ತಿದ್ದಾರೆ, ಇದು ಬಿಡಬೇಕು ಸಮಾಜ ಎಂದು ಬಂದಾಗ ಎಲ್ಲರು ಒಟ್ಟಾಗಿ ನಿಲುವಂತೆ ಆಗಬೇಕಿದೆ ಎಂದರು.
ನಮ್ಮ ಸಮುದಾಯಕ್ಕೆ ಶಿಕ್ಷಣ ಆಗತ್ಯವಾಗಿ ಬೇಕಾಗಿದೆ. ಶಿಕ್ಷಣವೇ ನಮ್ಮ ಸಮಾಜದ ಶಕ್ತಿಯಾಗಬೇಕಿದೆ, ಮಕ್ಕಳಿಗೆ 18 ವರ್ಷದವರೆಗೆ ಶಿಕ್ಷಣವನ್ನು ನೀಡಬೇಕು ತದ ನಂತರ ಅವರಿಗೆ ಶಕ್ತಿಯನ್ನು ತುಂಬವ ಕಾರ್ಯವನ್ನು ಸಮಾಜ ಪೋಷಕರು ಮಾಡಬೇಕಿದೆ, ಇತ್ತಿಚಿನ ದಿನಮಾನದಲ್ಲಿ ಎಸ್.ಸಿ. ಸಮುದಾಯ ಎಂದರೆ ಬರೀ ಮಾದಿಗ ಸಮುದಾಯ ಎಂದು ಬಿಂಬಿಸಲಾಗುತ್ತಿದೆ, ಇದು ಹೋಗಬೇಕು ನಾವು ಸಹಾ ಸಂಗಟಿತರಾಗಿದ್ದೇವೆ ಎಂದು ತೋರಿಸಬೇಕಿದೆ ಎಂದ ರಘುಚಂದನ್, ನಮ್ಮಲ್ಲಿನ ಆಹಂವನ್ನು ಬಿಡುವುದರ ಮೂಲಕ ಒಗ್ಗಟಾಗಬೇಕಿದೆ, ನಮ್ಮಲ್ಲಿನ ತಪ್ಪುಗಳನ್ನು ತಿದ್ದಿಕೊಂಡು ಮುಂದೆ ನಡೆಯಬೇಕಿದೆ, ಇಂದಿನ ದಿನಮಾನದಲ್ಲಿ ಸಮುದಾಯವನ್ನು ಕಾಪಾಡುವ ಅಗತ್ಯ ಇದೆ. ನನಗೆ ಯಾವುದೇ ಮೀಸಲಾತಿ ಬೇಡ ಆದರೆ ನನ್ನ ಸಮುದಾಯದಲ್ಲಿನ ಕಟ್ಟ ಕಡೆಯ ವ್ಯಕ್ತಿಗೆ ಮೀಸಲಾತಿಯ ಅಗತ್ಯ ಇದೆ ಆದನ್ನು ಅವರಿಗೆ ತಲುಪಿಸುವಂತ ಕಾರ್ಯವನ್ನು ಮಾಡಬೇಕಿದೆ, ಒಗ್ಗಟ್ಟನ್ನು ಪ್ರದರ್ಶನ ಮಾಡದಿದ್ದರೆ ಮುಂದಿನ ದಿನದಲ್ಲಿ ನಮ್ಮನ್ನು ಸಮಾಧಿ ಮಾಡುತ್ತಾರೆ ಎಂದು ತಿಳಿಸಿದರು.
ಓಸಿಸಿ ರಾಜ್ಯಾಧ್ಯಕ್ಷರಾದ ಆನಂದಪ್ಪ ಮಾತನಾಡಿ, ನಮ್ಮ ಸಮಾಜದಲ್ಲಿ ಬೇಳೆಯುತ್ತಿದ್ದಾರೆ ತಿಳಿದರೆ ಆವರ ಕಾಲನ್ನು ಎಳೆಯುವವರು ಇದ್ದಾರೆ ಇದರ ಅನುಭವ ನನಗೆ ಈಗಾಗಲೇ ಆಗಿದೆ, ನಾನು ಸಹಾ ರಾಜಕೀಯದಲ್ಲಿ ಇದ್ದು ನಾಲ್ಕು ಬಾರಿ ಪಕ್ಷದ ನನಗೆ ಟಿಕೇಟ್ ತಪ್ಪಿದೆ, ನಮ್ಮ ಸಮಾಜದವರೇ ನಮ್ಮನ್ನು ಬೆಳೆಯಲು ಬಿಡುತ್ತಿಲ್ಲ, ಜು. 18 ರಂದು ನಡೆಯಲಿರುವ ಭೋವಿ ಜನೋತ್ಸವ ಕಾರ್ಯಕ್ರಮಕ್ಕೆ ಎಲ್ಲರು ಸೇರಿ ಒಂದಾಗಿ ಯಶಸ್ವಿಗೊಳಿಸಬೇಕಿದೆ, ಇದು ಭೋವಿ ಜನಗಳ ಹಬ್ಬವಾಗಬೇಕಿದೆ, ಈ ಕಾರ್ಯ ಕ್ರಮ ಮುಗಿದ ನಂತರ ರಾಜ್ಯದ 31 ಜಿಲ್ಲೆಗಳಲ್ಲಿ ಪ್ರವಾಸವನ್ನು ಮಾಡುವುದರ ಮೂಲಕ ಸಮುದಾಯವನ್ನು ಜಾಗೃತಗೂಳಿಸಿ ಸಂಘಟನೆಯನ್ನು ಮಾಡಲಾಗುವುದು ಎಂದರು.

ಭೋವಿ ಮಠದ ಆಡಳಿತಾಧಿಕಾರಿಗಳಾದ ಗೌನಳ್ಳಿ ಗೋವಿಂದಪ್ಪ ಪ್ರಸ್ತಾವಿಕವಾಗಿ ಮಾತನಾಡಿ, ಪ್ರಾರಂಭದಲ್ಲಿ ಶ್ರೀಗಳ ಜನ್ಮ ದಿನವನ್ನು ಸರಳವಾಗಿ ಆಚರಣೆಯನ್ನು ಮಾಡಲಾಗುತ್ತಿತ್ತು, ಆದರೆ ಇದು ಬರೀ ಜನ್ಮ ದಿನವಾಗಬಾರದು ಭಕ್ತಾಧಿಗಳು ಇಲ್ಲಿಗೆ ಬರುವಂತಾಗಬೇಕೆಂದು ಶ್ರೀಗಳ ಜನ್ಮ ದಿನವನ್ನು ಭೋವಿ ಜನೋತ್ಸವನ್ನಾಗಿ ಆಚರಣೆ ಮಾಡಲಾಯಿತು. ಈ ಭೋವಿ ಜನೋತ್ಸವನ್ನು ಬರುಬರುತ್ತಾ ವಿಶೇಷ ರೀತಿಯಲ್ಲಿ ಆಚರಣೆಯನ್ನು ಮಾಡಲಾಗುತ್ತಿದೆ, ಇದರಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಮಧು-ವರರ ಸಮಾವೇಶ, ರಕ್ತದಾನ ಶಿಬಿರ, ವಿವಿಯಲ್ಲಿ ಬಂಗಾರದ ಪದಕವನ್ನು ಪಡೆದವರಿಗೆ, ಡಾಕ್ಟರೇಟ್, ಪಿಎಚ್.ಡಿ. ಪಡೆದವರಿಗೆ ಸನ್ಮಾನ, ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಕಳೆದ 20 ವರ್ಷಗಳಿಂದ ನಿರಂತರವಾಗಿ ಮಾಡಿಕೊಂಡು ಬರಲಾಗುತ್ತಿದೆ, ಇದರೊಂದಿಗೆ ಸಮಾಜದ ಅಭೀವೃದ್ದಿ, ಸಂಘಟನೆ, ಜಾಗೃತಿಯನ್ನು ಮೂಡಿಸುವಂತ ಕಾರ್ಯವಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಭೋವಿ ಸಂಘದ ಕಾರ್ಯದರ್ಶಿ ಈ ಮಂಜುನಾಥ್, ಸದಸ್ಯರಾದ ಕಾಳಘಟ್ಟ ಹನುಮಂತಪ್ಪ, ಅಂಜನೇಯ, ಜಿಲ್ಲಾಧ್ಯಕ್ಷರಾದ ಕೃಷ್ಣಮೂರ್ತಿ ಸೂರೇನಹಳ್ಳಿ, ನಿಕಟ ಪೂರ್ವ ಅಧ್ಯಕ್ಷರಾದ ತಿಪ್ಪೇಸ್ವಾಮಿ, ತಿಮ್ಮಣ್ಣ, ನಿರಂಜನ, ಸಿದ್ದು ಬಂಡಿ, ರಾಮು, ರವಿಪೂಜಾರ್, ತಿಪ್ಪಣ್ಣ ಒಡೆಯರ್, ಜಯ್ಯಪ್ಪ, ರಾಮಾಂಜನೇಯ, ಕೊಲ್ಲಭೋವಿ, ಪರಶುರಾಮ್, ಗುರಪ್ಪ, ಶಿವರುದ್ರಪ್ಪ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಭೋವಿ ಸಮುದಾಯ ಮುಖಂಡರು ಭಾಗವಹಿಸಿದ್ದರು
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.














