ಸುದ್ದಿಓನ್, ಚಿತ್ರದುರ್ಗ,ಜೂ, 28 : ನಮ್ಮ ನಿತ್ಯದ ಬದುಕು ಕ್ರಿಯಾಶೀಲತೆಯಿಂದ ಕೂಡಿರಬೇಕಾದರೆ ಯೋಗಭ್ಯಾಸವು ಮಾನವನ ದೇಹ ಮತ್ತು ಪ್ರಮಾಣಗಳು ವಿವೇಕ ಜ್ಞಾನವನ್ನು ನಮಗೆ ಮೂಡಿಸುತ್ತದೆ ಆದರೆ ಅದರ ಅನುರಣನದಿಂದ ಉದಿಸಿದ ಆತ್ಯಂತಿಕ ಗಾನ ಮಾಧುರ್ಯದ ಸೌಖ್ಯವನ್ನು ನಾವು ಅನುಭವಿಸಬಹುದು. ದಿನವೂ ಬಿಡದೆ ತಾಳ್ಮೆಯನ್ನು ಕುಂದಿಸದ ,ಹುರುಪಿನಿಂದ ಈ ಯೋಗಾಭ್ಯಾಸಕ್ಕೆ ನಮ್ಮ ದೇಹವನ್ನು ಒಳಪಡಿಸಿದಾಗ ದೇಹದ ಎಲ್ಲಾ ಜೀವಕೋಶವು ಉತ್ತಮಗೊಂಡು ತನ್ನಲ್ಲಡಗಿರುವ ಚೈತನ್ಯವನ್ನು ಶಕ್ತಿಯನ್ನು ಉತ್ಪಾದಿಸಿ ಆ ಮೂಲಕ ಜೀವಿತದ ಆಶಯವನ್ನು ಈ ಯೋಗ ಕ್ರಮವು ನೆರವೇರಿಸುತ್ತದೆ ಎಂದು ಯೋಗಾಚಾರ್ಯ ಎಲ್.ಎಸ್. ಚಿನ್ಮಯಾನಂದ ಅವರು ಅಭಿಪ್ರಾಯಪಟ್ಟರು.
ಅವರ ನಗರದ ಜೋಗಿ ಮಟ್ಟಿ ರಸ್ತೆಯಲ್ಲಿರುವ ದಾರುಕ ಬಡಾವಣೆ ಸಮಿತಿಯವರು ಗಣಪತಿ ದೇವಾಲಯದ ಪ್ರಾಂಗಣದಲ್ಲಿ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ನಾವು ಪಾದದಿಂದ ಹಿಡಿದು ಕನಿಷ್ಠ ಒಂದು ಗಂಟೆ ಪ್ರಾಣಾಯಾಮ ಮಾಡಿದರೆ ಮನುಷ್ಯನ ಮನಸ್ಸು ಆಹ್ಲಾದಕರವಾಗುವುದಿಲ್ಲ. ಹಾಗೆ ಆಸನಗಳನ್ನು ಮಾಡುವುದರಿಂದ ದೇಹ ಸಮಸ್ಥಿತಿಯಲ್ಲಿರುತ್ತದೆ. ನಾವು ಯಾವುದಾದರು ಒಂದು ಕಾಯಿಲೆ ಬಂದಾಗ ಇಂತಹ ಅಭ್ಯಾಸದ ಕಡೆಗೆ ಬರಲು ಶರೀರ ಸದಾ ಸದೃಢತೆಯಿಂದ ಲವಲವಿಕೆಯಿಂದ ಇರಬೇಕಾದರೆ ಪ್ರಾಣಾಯಾಮ, ಯೋಗಾಸನ ಮತ್ತು ಧ್ಯಾನ ಅವಶ್ಯ ಮಾಡುವುದರಿಂದ ಸಾಧ್ಯವಾದಷ್ಟು ಮನಸ್ಸು ಮತ್ತು ದೇಹ ಸಮಸ್ಥಿತಿಯಲ್ಲಿಡಲು ನೆರವಾಗುತ್ತದೆ. ಒಂದೊಂದು ಆಸನ ಒಂದೊಂದು ಕಾಯಿಲೆಗೆ ಸಹಕಾರಿ ಏನು. ಸಾಧ್ಯವಾದಷ್ಟು ಮೊಬೈಲ್ ಕಡಿಮೆ ಮಾಡುವುದು ಒಳ್ಳೆಯದು ಎಂದ ಅವರು ನಮ್ಮ ಯೋಗ ತರಬೇತಿ ಕೇಂದ್ರಗಳು ನಗರದ ಏಳು ಕಡೆ ಯೋಗಾಭ್ಯಾಸ ತರಬೇತಿ ಹೇಳುವಲ್ಲಿ ಸಕ್ರಿಯವಾಗಿದೆ. ಎಲ್ಲ ಬಡಾವಣೆಯ ನಾಗರಿಕರು ಈ ಯೋಗದ ಕಡೆಗೆ ಬಂದರೆ ಆರೋಗ್ಯವನ್ನು ಕಾಪಾಡಿಕೊಳ್ಳಲು. ಎಂದು ಅನೇಕ ಆಸನಗಳನ್ನು ಈ ಸಂದರ್ಭದಲ್ಲಿ ಪ್ರಸ್ತುತಪಡಿಸಿ ಮನವರಿಕೆ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರಾದ .ಮಂಜುನಾಥ್ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಬಡಾವಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ವೃತ್ತಿ ಮಾಡುತ್ತಿರುವ ಸಮಾನ ಮನಸ್ಕರು ಸೇರಿ ಯೋಗ ಸೇರಿದಂತೆ ಅನೇಕ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಿರ್ವಹಿಸುತ್ತ ಬರದಿದ್ದರೆ .ಇದಕ್ಕೆ ಬಡಾವಣೆಯವರ ಸಹಕಾರ ಸದಾ ಇರುತ್ತದೆ. ಈ ಸಂದರ್ಭದಲ್ಲಿ ಯೋಗ ತರಬೇತುದಾರರಾದ ನೇತ್ರಾವತಿ ಹಾಗೂ ವೈದ್ಯರು ಸತೀಶ್ ಅವರನ್ನು ಸನ್ಮಾನಿಸಲಾಯಿತು.
ದಾರುಕ ಬಡಾವಣೆಯ ಅಧ್ಯಕ್ಷರಾದ ಎಸ್. ಟಿ. ರಂಗಸ್ವಾಮಿ ,ಈ. ಶಿವಕುಮಾರ್ ,ಪ್ರೊಫೆಸರ್ ಚಂದ್ರಶೇಖರ್, ಶ್ರೀಧರ್, ಹೇಮಂತ್ ಕುಮಾರ್, ವಿನಯ್ ಕುಮಾರ್, ವಿಜಯಕುಮಾರ್ ಕೆ.ಓ. ಚಂದ್ರಶೇಖರ್ ,ಪ್ರಸನ್ನ ಕುಮಾರ್ ,ನ್ಯಾಯವಾದಿ ಲಿಂಗಣ್ಣ ,ಯೋಗ ತರಭೇತುದಾರ ಬಿ.ಎಂ. ಮುರುಳಿ, ರೇಖಾ ಶಿವಕುಮಾರ್, ಭಾರ್ಗವಿರಾಜಿ ವಲೋಚನಾ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಯೋಗ ತರಬೇತಿ ನೀಡುವ ಹಾಗೂ ಯೋಗಭ್ಯಾಸಿಗಳು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಬಡಾವಣೆಯ ಅನುಸೂಯಾ, ರಂಗಸ್ವಾಮಿ, ನಯನ ,ಮಲ್ಲಿಕಾರ್ಜುನ ಮತ್ತು ಮಕ್ಕಳು ಹಾಗೂ ವಾಕರ್ಸ್ ಬ್ಯಾಚ್ನ ಪದಾಧಿಕಾರಿಗಳ ಕಾರ್ಯಕ್ರಮ ವ್ಯವಸ್ಥೆ ಅಚ್ಚುಕಟ್ಟಾಗಿ ಸಂಘಟಿಸಿ ಯಶಸ್ವಿಗೊಳಿಸಿದರು. ಆರಂಭಕ್ಕೆ ಲೀಲಾವತಿ ಮಂಜುನಾಥ್ ಪ್ರಾರ್ಥನೆ ಸಲ್ಲಿಸಿದರು. ಆರ್. ಕೆ.ಕೇದಾರನಾಥ್ ಕಾರ್ಯಕ್ರಮ ನಿರ್ವಹಿಸಿದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.













