ಮಲ್ವನ್: ಸ್ನೇಹಿತರೊಂದಿಗೆ ವೀಕೆಂಡ್ ಪ್ರವಾಸಕ್ಕೆಂದು ತೆರಳಿ ಮಜಾ ಮಾಡುತ್ತಿದ್ದ ಯುವಕನೊಬ್ಬ, ಈಜುಕೊಳದ ಆಳವಿಲ್ಲದ ಭಾಗಕ್ಕೆ ಡೈವ್ ಮಾಡಿದ ಪರಿಣಾಮ ತಲೆಗೆ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಮಲ್ವನ್ ನ ರೆಸಾರ್ಟ್ ಒಂದರಲ್ಲಿ ನಡೆದಿದೆ.
ಸದ್ಯ ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೃತ ದುರ್ದೈವಿಯನ್ನು ಸಾಂಗ್ಲಿ ಜಿಲ್ಲೆಯ ಇಸ್ಲಾಂಪುರದ ನಿವಾಸಿ ಶ್ರೇಣಿಕ್ ಮಿಲಿಂದ್ ಟಾಕಳೆ (25) ಎಂದು ಗುರುತಿಸಲಾಗಿದೆ.
A tragic de@th occurred of a 25-year-old youth who jumped from a height into the swimming pool at a resort in Vayri (Tal. Malvan). The video of this accident is going viral on social media. pic.twitter.com/7uPHFx1nlq
— Ghar Ke Kalesh (@gharkekalesh) June 27, 2026
ಶ್ರೇಣಿಕ್ ತನ್ನ ಸ್ನೇಹಿತರ ಗುಂಪಿನೊಂದಿಗೆ ವಾರಾಂತ್ಯದ ರಜೆ ಕಳೆಯಲು ಮಲ್ವನ್ ಗೆ ಪ್ರವಾಸ ಬಂದಿದ್ದನು. ಇಲ್ಲಿನ ವಾಯರಿ ಪ್ರದೇಶದಲ್ಲಿರುವ ರೆಸಾರ್ಟ್ ಒಂದರಲ್ಲಿ ಇವರೆಲ್ಲರೂ ತಂಗಿದ್ದರು. ಮಧ್ಯಾಹ್ನ ರೆಸಾರ್ಟ್ ನ ಈಜುಕೊಳದ ಬಳಿ ಸ್ನೇಹಿತರೆಲ್ಲರೂ ಸೇರಿ ಮಸ್ತಿ ಮಾಡುತ್ತಿದ್ದರು. ಕೆಲವರು ಈಜುಕೊಳದ ನೀರೊಳಗಿದ್ದರೆ, ಇನ್ನು ಕೆಲವರು ಪೂಲ್ ಪಕ್ಕದಲ್ಲೇ ಹಾಡುಗಳಿಗೆ ನೃತ್ಯ ಮಾಡುತ್ತಾ ಸಂಭ್ರಮಿಸುತ್ತಿದ್ದರು.

ವೈರಲ್ ಆಗಿರುವ ವಿಡಿಯೋದಲ್ಲಿ, ಇಬ್ಬರು ಸ್ನೇಹಿತರು ನೀರಿನ ಒಳಗಿರುವುದು ಮತ್ತು ಮತ್ತೊಬ್ಬ ಯುವಕ ಹೊರಗಡೆ ನೃತ್ಯ ಮಾಡುತ್ತಿರುವುದು ಕಾಣಿಸುತ್ತದೆ. ಇದೇ ವೇಳೆ ಕ್ಯಾಮೆರಾ ತಿರುಗುತ್ತಿದ್ದಂತೆ, 25 ವರ್ಷದ ಶ್ರೇಣಿಕ್ ರೆಸಾರ್ಟ್ ರೂಂ ಒಂದರ ಮೇಲ್ಛಾವಣಿಯ (Roof) ಮೇಲೆ ನಿಂತಿರುವುದು ಕಂಡುಬರುತ್ತದೆ. ಅಲ್ಲಿಂದ ಆತ ನೇರವಾಗಿ ಈಜುಕೊಳಕ್ಕೆ ಡೈವ್ ಮಾಡುತ್ತಾನೆ. ಆದರೆ, ಆತ ದುರದೃಷ್ಟವಶಾತ್ ಈಜುಕೊಳದ ಅತ್ಯಂತ ಕಡಿಮೆ ಆಳವಿರುವ ಭಾಗಕ್ಕೆ ಡೈವ್ ಮಾಡಿದ್ದಾನೆ.
ಸ್ಥಳೀಯ ವರದಿಗಳ ಪ್ರಕಾರ, ಕನಿಷ್ಠ ಆಳವಿದ್ದ ಕಾರಣ ಶ್ರೇಣಿಕ್ ಡೈವ್ ಮಾಡಿದ ತಕ್ಷಣ ಆತನ ತಲೆ ನೇರವಾಗಿ ಈಜುಕೊಳದ ತಳದ ಕಾಂಕ್ರೀಟ್ಗೆ ಬಲವಾಗಿ ಅಪ್ಪಳಿಸಿದೆ. ನೀರಿನ ಆಳ ಕೇವಲ ಸೊಂಟದ ಮಟ್ಟಕ್ಕಿದ್ದಿದ್ದರಿಂದ ಇಂಪ್ಯಾಕ್ಟ್ ಅತ್ಯಂತ ತೀವ್ರವಾಗಿತ್ತು. ಆತ ಡೈವ್ ಮಾಡಿದ ಬಳಿಕ ನೀರಿನಿಂದ ಮೇಲೆ ಬಾರದೇ ಇದ್ದಾಗ, ಮೊದಲಿಗೆ ಸ್ನೇಹಿತರಿಗೆ ಏನಾಗುತ್ತಿದೆ ಎಂದು ಅರ್ಥವಾಗಿಲ್ಲ. ಕೆಲವು ಸೆಕೆಂಡುಗಳ ನಂತರ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿ ನೀರಿನ ಮೇಲೆ ತೇಲಿದಾಗ ಗಾಬರಿಗೊಂಡ ಸ್ನೇಹಿತರು ಕಿರುಚಾಡಲು ಪ್ರಾರಂಭಿಸಿದ್ದಾರೆ. ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆತ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










