Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಾಣಕ್ಯ ನೀತಿ: ಈ ಗುಣವಿರೋರು ತುಂಬಾ ಡೇಂಜರ್.. ಇಂತವರನ್ನು ಎಂದಿಗೂ ಕ್ಷಮಿಸಬೇಡಿ!

---Advertisement---

ಆಚಾರ್ಯ ಚಾಣಕ್ಯರ ನೀತಿಶಾಸ್ತ್ರದ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಅಪ್ರತಿಮ ಬುದ್ಧಿವಂತ ಹಾಗೂ ರಾಜತಾಂತ್ರಿಕನಾಗಿದ್ದ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಜೀವನಕ್ಕೆ ಅಗತ್ಯವಾದ ಎಣಿಸಲಾರದಷ್ಟು ಮುಖ್ಯ ವಿಷಯಗಳನ್ನು ತಿಳಿಸಿದ್ದಾರೆ. ಅಂದು ಅವರು ಹೇಳಿದ ಮಾತುಗಳು ಇಂದಿನ ಯುವ ಪೀಳಿಗೆಯಿಂದ ಹಿಡಿದು ವೃದ್ಧರವರೆಗೂ ಪ್ರತಿಯೊಬ್ಬರಿಗೂ ದಾರಿದೀಪವಾಗಿವೆ.

ನಮ್ಮ ಜೀವನದಲ್ಲಿ ಅನೇಕರು ಬರುತ್ತಾರೆ, ಹೋಗುತ್ತಾರೆ. ಆದರೆ ಯಾರು ಎಷ್ಟು ದಿನ ನಮ್ಮೊಂದಿಗೆ ಇರುತ್ತಾರೆ ಎಂಬುದು ಯಾರಿಗೂ ತಿಳಿಯುವುದಿಲ್ಲ. ಕೆಲವು ವ್ಯಕ್ತಿಗಳು ನಮಗೆ ಅರಿವಿಲ್ಲದಂತೆಯೇ ಅತಿಯಾಗಿ ಹತ್ತಿರವಾಗಿಬಿಡುತ್ತಾರೆ. ಅಂತಹವರು ನಮಗೆ ಕೆಡುಕು ಮಾಡುತ್ತಿದ್ದರೂ ನಾವು ಸುಲಭವಾಗಿ ಗುರುತಿಸುವುದಿಲ್ಲ. ಆದರೆ, ಇಂತವರನ್ನು ಹಾಗೇ ಬಿಟ್ಟರೆ ಒಂದಲ್ಲ ಒಂದು ದಿನ ಸಮಾಜದಲ್ಲಿ ನಿಮ್ಮ ಗೌರವ ಹಾಗೂ ಮಾನ ಹರಾಜಾಗುವುದು ಖಂಡಿತ. ಹಾಗಾಗಿ, ಚಾಣಕ್ಯರ ಪ್ರಕಾರ ಈ ಕೆಳಗಿನ ಗುಣವಿರುವ ಜನರನ್ನು ಎಂದಿಗೂ ಕ್ಷಮಿಸಬಾರದು ಮತ್ತು ಅವರಿಂದ ದೂರವಿರಬೇಕು.

1. ಸದಾ ತಪ್ಪು ಹುಡುಕುವವರು ಮತ್ತು ವಂಚಕರು
ಯಾವಾಗಲೂ ನಿಮ್ಮಲ್ಲೇ ತಪ್ಪು ಹುಡುಕುವ ಜನರಿಂದ ಕೊಂಚ ದೂರವಿರುವುದೇ ಒಳ್ಳೆಯದು. ಹಾಗೆಯೇ, ನಿಮ್ಮ ಎದುರಿಗೆ ಒಂದು ಮಾತನಾಡಿ, ಬೆನ್ನ ಹಿಂದೆ ಮತ್ತೊಂದು ಮಾತನಾಡಿ ವಂಚಿಸುವವರನ್ನು ಎಂದಿಗೂ ಕ್ಷಮಿಸಬೇಡಿ. ನಿಮ್ಮ ನಂಬಿಕೆಯನ್ನು ದ್ರೋಹ ಮಾಡುವವರು ಮತ್ತು ನಿಮ್ಮನ್ನು ಮಾನಸಿಕವಾಗಿ ಹಿಂಸಿಸುವವರು ಹಾವಿಗಿಂತಲೂ ಅಪಾಯಕಾರಿ. ಇಂತಹವರಿಂದ ನೀವೇ ಸ್ವತಃ ದೂರ ಸರಿಯುವುದು ಉತ್ತಮ.

2. ಪಶ್ಚಾತ್ತಾಪವಿಲ್ಲದ ಸ್ವಭಾವ
ಕೆಲವರು ಎಷ್ಟು ಬಾರಿ ತಪ್ಪು ಮಾಡಿದರೂ ಅವರಲ್ಲಿ ಕಿಂಚಿತ್ತೂ ಪಶ್ಚಾತ್ತಾಪ ಇರುವುದಿಲ್ಲ. ಇನ್ನು ಕೆಲವರು ತಪ್ಪು ಮಾಡಿ ಏನೂ ತಿಳಿಯದವರಂತೆ ನಟಿಸುತ್ತಾರೆ. ಇಂತಹ ನಟನಾ ಶೂರರನ್ನು ತಕ್ಷಣವೇ ನಿಮ್ಮ ಜೀವನದಿಂದ ಹೊರಹಾಕಿ. ಇದರೊಂದಿಗೆ, ಕನಿಷ್ಠ ಜವಾಬ್ದಾರಿಯ ಅರಿವಿಲ್ಲದ ಜನರನ್ನು ಕ್ಷಮಿಸುವುದು ನಿಮಗೇ ಹಾನಿಕಾರಕ. ಇಂತಹವರಿಂದ ನೀವು ಎಷ್ಟು ದೂರವಿರುತ್ತೀರೋ, ನಿಮ್ಮ ಜೀವನ ಅಷ್ಟು ನೆಮ್ಮದಿಯಿಂದ ಇರುತ್ತದೆ.

3. ಮಾನಸಿಕ ಶಾಂತಿ ಕೆಡಿಸುವವರು
ನಿಮ್ಮ ಮಾನಸಿಕ ಆರೋಗ್ಯ ಹಾಗೂ ನೆಮ್ಮದಿಯನ್ನು ಹಾಳು ಮಾಡುವವರನ್ನು ಯಾವುದೇ ಕಾರಣಕ್ಕೂ ಕ್ಷಮಿಸಬೇಡಿ. ಮಾನಸಿಕವಾಗಿ ನಿಮ್ಮನ್ನು ಕುಗ್ಗಿಸುವ ಜನರಿಂದ ಎಷ್ಟು ಸಾಧ್ಯವೋ ಅಷ್ಟು ದೂರವಿರುವುದೇ ನಿಮ್ಮ ಭವಿಷ್ಯಕ್ಕೆ ಒಳ್ಳೆಯದು ಎಂದು ಚಾಣಕ್ಯ ನೀತಿ ಹೇಳುತ್ತದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now