Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಾಹನ ಸವಾರರಿಗೆ ಸಿಹಿಸುದ್ದಿ; ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪಂಕ್ಚರ್ ಶಾಪ್, ಗ್ಯಾರೇಜ್ ಸ್ಥಾಪಿಸಲು NHAI ನಿರ್ಧಾರ

---Advertisement---

ದೆಹಲಿ.ಜೂನ್.24: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಮತ್ತಷ್ಟು ಸುಲಭ ಮತ್ತು ಸುರಕ್ಷಿತ ಪ್ರಯಾಣದ ಅನುಭವ ನೀಡಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮಹತ್ವದ ಹೆಜ್ಜೆಯನ್ನಿಟ್ಟಿದೆ.

ಇನ್ನು ಮುಂದೆ ಹೆದ್ದಾರಿಗಳು ಮತ್ತು ಎಕ್ಸ್ಪ್ರೆಸ್ ವೇ ಗಳಲ್ಲಿ ವಾಹನಗಳು ಕೆಟ್ಟು ನಿಂತರೆ ತಕ್ಷಣವೇ ನೆರವು ಸಿಗುವಂತೆ ಮಾಡಲು, ‘ವೇಸೈಡ್ ಅಮೆನಿಟೀಸ್’ ಗಳಲ್ಲಿ ಪಂಕ್ಚರ್ ಶಾಪ್ ಮತ್ತು ವಾಹನ ದುರಸ್ತಿ (ಸರ್ವೀಸ್) ಸೌಲಭ್ಯಗಳನ್ನು ಕಲ್ಪಿಸಲು ಪ್ರಾಧಿಕಾರವು ಆದ್ಯತೆ ನೀಡಿದೆ.
ದೂರದ ಪ್ರಯಾಣದ ವೇಳೆ ವಾಹನಗಳು ಬ್ರೇಕ್ ಡೌನ್ ಆದಾಗ ಅಥವಾ ಪಂಕ್ಚರ್ ಆದಾಗ ಸೂಕ್ತ ಸಮಯಕ್ಕೆ ಯಾಂತ್ರಿಕ ನೆರವು ಸಿಗದೆ ಸಾರ್ವಜನಿಕರು ತೀವ್ರ ಪರದಾಟ ನಡೆಸುತ್ತಿದ್ದರು. ಈ ಕುರಿತು ಸವಾರರಿಂದ ಸರಣಿ ದೂರುಗಳು ಬಂದ ಹಿನ್ನೆಲೆಯಲ್ಲಿ ಎನ್ಎಚ್ಎಐ ಈ ನಿರ್ಧಾರಕ್ಕೆ ಬಂದಿದೆ.

NHAI ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ‘ನ್ಯಾಷನಲ್ ಹೈವೇಸ್ ಲಾಜಿಸ್ಟಿಕ್ಸ್ ಮ್ಯಾನೇಜ್ಮೆಂಟ್ ಲಿಮಿಟೆಡ್’ (NHLML), ಪ್ರಸ್ತುತ ಹೆದ್ದಾರಿಗಳಲ್ಲಿ ಪ್ರತಿ 40 ರಿಂದ 60 ಕಿಲೋಮೀಟರ್ ಅಂತರದಲ್ಲಿರುವ ರಸ್ತೆಬದಿಯ ಸೌಲಭ್ಯ ಕೇಂದ್ರಗಳಲ್ಲಿ (WSAs) ವಾಹನ ದುರಸ್ತಿ ಅಂಗಡಿಗಳನ್ನು ಮತ್ತು ಪಂಕ್ಚರ್ ಸೇವೆಗಳನ್ನು ಶೀಘ್ರವಾಗಿ ಸ್ಥಾಪಿಸುವಂತೆ ತನ್ನ ಪ್ರಾದೇಶಿಕ ಕಚೇರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಸುಮಾರು ನಾಲ್ಕು ಹೆಕ್ಟೇರ್ ಪ್ರದೇಶದಲ್ಲಿ ತಲೆಯೆತ್ತಲಿರುವ ಈ ಆಧುನಿಕ ಸೌಲಭ್ಯ ಕೇಂದ್ರಗಳು ಈಗಾಗಲೇ ಇಂಧನ ತುಂಬುವ ಕೇಂದ್ರಗಳು (ಪೆಟ್ರೋಲ್ ಬಂಕ್), ಹೋಟೆಲ್, ವಿಶ್ರಾಂತಿ ಗೃಹಗಳು, ಇವಿ ಚಾರ್ಜಿಂಗ್ ಪಾಯಿಂಟ್ ಮತ್ತು ಟ್ರಕ್ ಚಾಲಕರಿಗೆ ಪ್ರತ್ಯೇಕ ಸ್ಥಳಾವಕಾಶಗಳನ್ನು ಹೊಂದಿವೆ. ಈಗ ಇವುಗಳ ಜೊತೆಗೆ ವಾಹನ ದುರಸ್ತಿ ಸೇವೆಗಳೂ ಸೇರಿಕೊಳ್ಳುತ್ತಿರುವುದರಿಂದ ಪ್ರಯಾಣಿಕರಿಗೆ ಹಾಗೂ ವಾಣಿಜ್ಯ ವಾಹನಗಳ ಸವಾರರಿಗೆ ದೊಡ್ಡ ಮಟ್ಟದ ನಿರಾಳತೆ ಸಿಗಲಿದೆ.

ವಿಶೇಷವಾಗಿ ಪ್ರವೇಶ ನಿಯಂತ್ರಿತ ಎಕ್ಸ್ಪ್ರೆಸ್ವೇಗಳಲ್ಲಿ ತುರ್ತು ಸಂದರ್ಭಗಳಲ್ಲಿ ವಾಹನ ಸವಾರರು ಸಹಾಯ ಸಿಗದೆ ತೊಂದರೆಗೆ ಸಿಲುಕುತ್ತಿರುವುದನ್ನು ಅಧಿಕಾರಿಗಳು ಗುರುತಿಸಿದ್ದಾರೆ. ಹೆದ್ದಾರಿಗಳಲ್ಲಿ ವಾಹನಗಳ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ, ವಾಹನಗಳು ಕೆಟ್ಟು ನಿಲ್ಲುವ ಸಮಯವನ್ನು ಕಡಿತಗೊಳಿಸುವುದು, ರಸ್ತೆ ಸುರಕ್ಷತೆಯನ್ನು ಸುಧಾರಿಸುವುದು ಮತ್ತು ಸವಾರರಿಗೆ ತಕ್ಷಣದ ಬೆಂಬಲ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಮಾದರಿಯಲ್ಲಿ ದೇಶಾದ್ಯಂತ ಈ ಅತ್ಯಾಧುನಿಕ ರಸ್ತೆಬದಿಯ ಸೌಲಭ್ಯಗಳ ಜಾಲವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ಕಾಮಗಾರಿಗಳನ್ನು ವೇಗಗೊಳಿಸಲು ಎನ್ಎಚ್ಎಐ ಸಂಬಂಧಪಟ್ಟ ಸಂಸ್ಥೆಗಳಿಗೆ ಸೂಚಿಸಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now