ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಜೂ. 24 : 12 ವರ್ಷಗಳ ಮೋದಿ ಸಾಧನೆ ಪರ್ವದ ವಿರುದ್ಧದ ಅಪಪ್ರಚಾರಕ್ಕೆ ತಕ್ಕ ಉತ್ತರ ನೀಡಲು ಮನೆ ಮನೆ ಹಾಗೂ ಮನಮನಗಳಿಗೆ ಮೋದಿ ಸರ್ಕಾರದ ಸಾಧನೆ ತಲುಪಿಸಲು ಅಂಕಿ ಅಂಶಗಳ ಸಾಕ್ಷಿ ಸಮೇತದ ಕಿರುಹೊತ್ತ್ತಿಗೆಗಳನ್ನು ಬಿಡುಗಡೆ ಮಾಡಲಾಯಿತು.
ಮನೆಮನೆಗೆ ಹಂಚುವ ಕಾರ್ಯದ ಸಾಂಕೇತಿಕ ಉದ್ಘಾಟನೆಯನ್ನು ಧವಳಗಿರಿಯ ಶ್ರೀ ಕ್ಷಿಪ್ರ ಪ್ರಸಾದ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಸಂಸದರಾದ ಗೋವಿಂದ ಕಾರಜೋಳರವರು ನೆರವೇರಿಸಿದರು.
ಬಡಾವಣೆಯ ನಾಗರೀಕರಾದ ಶ್ರೀ ಹೊರಕೆ ರಂಗಪ್ಪ, ಸಿದ್ದೇಶ್, ಹಾಗೂ ಷಣ್ಮುಖಪ್ಪನವರ ಮನೆಗಳಿಗೆ ಖುದ್ದಾಗಿ ಭೇಟಿ ನೀಡಿ ಪುಸ್ತಕಗಳನ್ನು ನೀಡಿ ಜಾಗೃತಿ ಮೂಡಿಸಲು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿ ಜೆ ಪಿ ಅಧ್ಯಕ್ಷರಾದ ಕುಮಾರ ಸ್ವಾಮಿ, ಉಪಾಧ್ಯಕ್ಷರಾದ ಸಿದ್ಧಾರ್ಥ್ ಗುಂಡಾರ್ಪಿ, ನಗರಾಧ್ಯಕ್ಷರಾದ ಲೋಕೇಶ, ಮಂಜುನಾಥ್ ಮೊಳಕಾಲ್ಮೂರು, ಜಿಲ್ಲಾ ಬಿ ಜೆ ಪಿ ಅಧ್ಯಕ್ಷರಾದ ಕುಮಾರ ಸ್ವಾಮಿ ಹಾಗೂ ಬಡಾವಣೆಯ ಗುರುಮೂರ್ತಿ, ಸಿ ಜಿ ಶ್ರೀನಿವಾಸ್, ರಾಜಣ್ಣ, ಶಶಿಕಿರಣ್, ಶ್ರೀಕಾಂತ್, ತೇಜೋಮೂರ್ತಿ, ಹಿರಿಯರು ಜೊತೆಗೆ ಸಹಕರಿಸಿದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.









