ದಾವಣಗೆರೆ : ಹರಿಹರ ನಗರದಲ್ಲಿ 24/7 ನಿರಂತರ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆ ಜಾರಿಯಲ್ಲಿದ್ದು, ಸಾರ್ವಜನಿಕರು ಕುಡಿಯುವ ನೀರನ್ನು ವಾಹನ ತೊಳೆಯಲು, ಮನೆಯ ಮುಂದಿನ ರಸ್ತೆಗೆ ಬಿಡಲು, ಕೈತೋಟಗಳಿಗೆ ನೀರುಣಿಸಲು ಹಾಗೂ ಇತರೆ ಅನಗತ್ಯ ಕೆಲಸಗಳಿಗೆ ಬಳಸಬಾರದು ಮತ್ತು ನೀರು ಎಲ್ಲರಿಗೂ ಅತ್ಯಗತ್ಯವಾಗಿರುವುದರಿಂದ ಬೇಕಾದಷ್ಟು ಮಾತ್ರ ಬಳಸಿ, ನೀರಿನ ಉಳಿತಾಯಕ್ಕೆ ಎಲ್ಲರೂ ಕೈಜೋಡಿಸಬೇಕು, ಪ್ರತಿಯೊಬ್ಬರೂ ತಮ್ಮ ಮನೆಯ ಮೇಲ್ಛಾವಣಿಯಲ್ಲಿ “ಮಳೆನೀರು ಕೊಯ್ಲು” ವ್ಯವಸ್ಥೆ ಅಳವಡಿಸಿಕೊಳ್ಳಬೇಕು,
ಬೋರ್‌ವೆಲ್‌ಗಳಿಗೆ ಇಂಗು ಗುಂಡಿ ನಿರ್ಮಿಸುವ ಮೂಲಕ ಮಳೆ ನೀರನ್ನು ಭೂಮಿಯಲ್ಲಿ ಇಂಗಿಸಿ, ಅಂತರ್ಜಲ ಮಟ್ಟ ಹೆಚ್ಚಿಸಲು ಸಹಕರಿಸಬೇಕು, ಹಾಗೂ ಇನ್ನೂ ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರು 7 ದಿನಗಳೊಳಗಾಗಿ ಬಾಕಿ ಹಣ ಪಾವತಿಸಬೇಕು, ತಪ್ಪಿದಲ್ಲಿ ನಳದ ಸಂಪರ್ಕ ಕಡಿತಗೊಳಿಸಲಾಗುವುದು ಹರಿಹರ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತರಬೇತಿಗೆ ಅರ್ಜಿ ಆಹ್ವಾನ
ದಾವಣಗೆರೆ : ಹಿರಿಯ ನಾಗರಿಕರಿಕರಿಗೆ ಅಗತ್ಯವಿರುವ ವೈಯುಕ್ತಿಕ ಆರೈಕೆ, ಆರೋಗ್ಯ ಮತ್ತು ನೈರ್ಮಲ್ಯ ನಿರ್ವಹಣೆ, ದೈನಂದಿನ ಚಟುವಟಿಕೆಗಳಲ್ಲಿ ನೆರವು ಚಲನಶೀಲತೆಗೆ ಸಹಾಯ ಪೌಷ್ಠಿಕ ಆಹಾರ ಹಾಗೂ ಮಾನಸಿಕ ಬೆಂಬಲ ಸೇರಿದಂತೆ ಸಮಗ್ರ ಆರೈಕೆ ಸೇವೆಯನ್ನು ಒದಗಿಸಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ನೀಡುವ ತರಬೇತಿ ಆಯೋಜಿಸಲಾಗಿರುತ್ತದೆ. ಆಸಕ್ತಯುಳ್ಳ ಅಭ್ಯರ್ಥಿಗಳು ದ್ವಿತೀಯ ಪಿ.ಯು.ಸಿ ಅಥವಾ ಅದಕ್ಕೆ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರು ವೆಬ್‌ಸೈಟ್ https://kar.cgcp.saissvs.org/ ರಲ್ಲಿ ನೊಂದಾಯಿಸಿಕೊಳ್ಳಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ ತರಬೇತಿಯ ಸಂಯೋಜಕರಾದ ಶ್ರೀನಿವಾಸ (ಮೊ:8147848899) ಇವರನ್ನು ಸಂಪರ್ಕಿಸಬಹುದೆಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿಗಳು ತಿಳಿಸಿದ್ದಾರೆ.









