ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂನ್. 23 : ಮಾನವನ ಬದುಕಿಗೆ ಕಲ್ಯಾಣಗಳು ಮುಖ್ಯ. ಬುದ್ದಿಮಾಂಧ್ಯ, ಅಂಗವಿಕಲ ಮಕ್ಕಳ ಯೋಗಕ್ಷೇಮಕ್ಕೆ ಕೇಂದ್ರ ಸರ್ಕಾರ ಬದ್ದವಾಗಿದೆ ಎಂದು ಸಂಸದ
ಗೋವಿಂದ ಕಾರಜೋಳ ತಿಳಿಸಿದರು.
ವಿ.ಪಿ.ಬಡಾವಣೆಯಲ್ಲಿರುವ ಮಾನಸಿಕ ರೋಗಿಗಳ ಹಗಲು ಪುನಶ್ಚೇತನ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ ಮಾತನಾಡುತ್ತ ಮಾನಸಿಕ ಬುದ್ದಿಮಾಂಧ್ಯರು ಹಾಗೂ ಅಂಗವಿಕಲರಿಗೆ ಅನುಕಂಪ ತೋರುವ ಬದಲು ಅವರಿಗೆ ಅವಶ್ಯವಿರುವ ಸಲಕರಣೆಗಳನ್ನು ಒದಗಿಸುವುದು ಮುಖ್ಯ. ಬುದ್ದಿಮಾಂಧ್ಯ ಮಕ್ಕಳನ್ನು ಜೋಪಾನ ಮಾಡುವುದು ಮನೆಯಲ್ಲಿ ಪೋಷಕರಿಗೂ ಕಷ್ಟವೆನಿಸುತ್ತದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಪುನಶ್ಚೇತನ ಕೇಂದ್ರಗಳು ಅಂಗವಿಕಲ ಮತ್ತು ಮಾನಸಿಕ ಮಕ್ಕಳನ್ನು ಜೋಪಾನ ಮಾಡುತ್ತಿರುವುದು ಪುಣ್ಯದ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾನಸಿಕ ರೋಗಿಗಳ ಅನುಕೂಲಕ್ಕಾಗಿ ದೊಡ್ಡ ವಾಹನ ಕೇಳಿದ್ದೀರಿ. ನನ್ನ ಶಕ್ತಿ ಮೀರಿ ಪ್ರಯತ್ನಿಸುತ್ತೇನೆಂದು ಭರವಸೆ ನೀಡಿದರು.
ಲೇಖಕ ಹೆಚ್.ಆನಂದ್‍ಕುಮಾರ್ ಮಾತನಾಡಿ ಬಸವನಾಡಿನಿಂದ ಇಲ್ಲಿಗೆ ಸಂಸದರಾಗಿ ಬಂದಿರುವ ಗೋವಿಂದ ಕಾರಜೋಳರವರು ಭೀಮಾಶಯಗಳನ್ನು ಹೊಂದಿದ್ದಾರೆ.
ಮಾನಸಿಕ ರೋಗಿಗಳ ಹಗಲು ಪುನಶ್ಚೇತನ ಕೇಂದ್ರದಲ್ಲಿರುವ ಮಕ್ಕಳ ಉಪಯೋಗಕ್ಕಾಗಿ ಕೇಂದ್ರದವರು ದೊಡ್ಡ ವಾಹನ ಕೇಳಿರುವುದನ್ನು ಪೂರೈಸುತ್ತಾರೆಂಬ ನಂಬಿಕೆ ಇದೆ ಎಂದು ಹೇಳಿದರು.
ಮಾನಸಿಕ ರೋಗಿಗಳ ಹಗಲು ಪುನಶ್ಚೇತನ ಕೇಂದ್ರದ ಕಾರ್ಯದರ್ಶಿ ಸೂರ್ಯನಾರಾಯಣ, ಅಧ್ಯಕ್ಷೆ ಕವಿತಾ, ಚಿದಾನಂದಮೂರ್ತಿ, ನ್ಯಾಯವಾದಿ ಲತಾ, ಮಾಧವಿ ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಇಬ್ಬರು ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.













