ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂನ್. 23 : ಬಿ.ಇ.ಡಿ. ಮೊದಲ ಹಾಗೂ ಮೂರನೆ ಸೆಮಿಸ್ಟರ್ ಪರೀಕ್ಷೆ ಫಲಿತಾಂಶದಲ್ಲಿ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯಕ್ಕೆ ಶೇ.100 ರಷ್ಟು ಫಲಿತಾಂಶ ಲಭಿಸಿದೆ.
ಮೊದಲ ಸೆಮಿಸ್ಟರ್ನಲ್ಲಿ ಹನುಮಂತ ಶ್ರೀಶೈಲ ಪೂಜಣ್ಣನವರ್ ಶೇ.87.83, ಟಿ.ಮೇಘನಾ ಶೇ.87.20, ಕೆ.ಮಂಜುನಾಥ ಶೇ.86 ರಷ್ಟು ಅಂಕಗಳನ್ನು ಪಡೆದಿದ್ದಾರೆ.
3 ನೇ ಸೆಮಿಸ್ಟ್ರ್ನಲ್ಲಿ ಎಂ.ಮೇಘನಾ ಶೇ.86.83, ದಿವ್ಯಜೋಷಿ ಶೇ.86, ಡಿ.ಎಂ.ವಿಕಾಸ್ ಶೇ.85.89 ಅಂಕಗಳನ್ನು ಗಳಿಸಿ ಸಂಸ್ಥೆಗೆ ಹಾಗೂ ಪೋಷಕರುಗಳಿಗೆ ಕೀರ್ತಿ ತಂದಿದ್ದಾರೆ.
ಬಾಪೂಜಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಕೆ.ಎಂ.ವೀರೇಶ್, ನಿರ್ದೇಶಕ ಕೆ.ಎಂ.ಚೇತನ್, ಪ್ರಾಂಶುಪಾಲರಾದ ಎಂ.ಆರ್.ಜಯಲಕ್ಷ್ಮಿ ಹಾಗೂ ಉಪನ್ಯಾಸಕರುಗಳು ಪ್ರಶಿಕ್ಷಣಾರ್ಥಿಗಳನ್ನು ಅಭಿನಂದಿಸಿದ್ದಾರೆ.









