Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಆಭರಣ ಪ್ರಿಯರಿಗೆ ಸಿಹಿಸುದ್ದಿ; ಒಂದೇ ದಿನದಲ್ಲಿ 10 ಗ್ರಾಂ ಚಿನ್ನ ದ ಬೆಲೆ ₹1,950 ಇಳಿಕೆ!

---Advertisement---

ಬೆಂಗಳೂರು.ಜೂನ್.23: ಸತತವಾಗಿ ಏರಿಕೆ ಕಂಡು ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕಿದ್ದ ಚಿನ್ನದ ದರಕ್ಕೆ ಇಂದು ಜಾಗತಿಕ ಮಾರುಕಟ್ಟೆಯ ದಿಢೀರ್ ವಿದ್ಯಮಾನಗಳು ಬ್ರೇಕ್ ಹಾಕಿವೆ. ಮದುವೆ ಸೀಸನ್ ನ ಈ ಬಿಡುವಿಲ್ಲದ ದಿನಗಳಲ್ಲೇ ಗ್ರಾಹಕರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದ್ದು, ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆಗಳು ಗಣನೀಯವಾಗಿ ಕುಸಿದಿವೆ.

ಸ್ಥಳೀಯ ಮಾರುಕಟ್ಟೆಯಲ್ಲಿ ಇಂದು ಚಿನ್ನದ ದರದಲ್ಲಿ ದೊಡ್ಡ ಮಟ್ಟದ ಇಳಿಕೆ ದಾಖಲಾಗಿದೆ. ಸಾರ್ವಜನಿಕರು ಆಭರಣ ತಯಾರಿಕೆಗೆ ಹೆಚ್ಚಾಗಿ ಬಳಸುವ 22 ಕ್ಯಾರೆಟ್ನ ಪ್ರತಿ 10 ಗ್ರಾಂ ಚಿನ್ನದ ಬೆಲೆ ಇಂದಿನ ಕುಸಿತದ ಬಳಿಕ ₹1,33,750 ಕ್ಕೆ ತಲುಪಿದೆ. ಇನ್ನು ಹೂಡಿಕೆದಾರರ ನೆಚ್ಚಿನ ಆಯ್ಕೆಯಾಗಿರುವ 24 ಕ್ಯಾರೆಟ್ನ ಅಪರಂಜಿ ಚಿನ್ನದ ಬೆಲೆಯಲ್ಲಿ ಒಂದೇ ದಿನ ಬರೋಬ್ಬರಿ ₹2,070 ರಷ್ಟು ಭಾರಿ ಪತನ ಕಂಡುಬಂದಿದ್ದು, ಪ್ರಸ್ತುತ ಹತ್ತು ಗ್ರಾಂ ಶುದ್ಧ ಚಿನ್ನದ ದರ ₹1,45,910 ರ ಮಟ್ಟಕ್ಕೆ ಬಂದು ನಿಂತಿದೆ.

ಇಂದು ದೇಶೀಯ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ ಒಂದೇ ಸಮನೆ ₹5,000 ದಷ್ಟು ಪತನಗೊಂಡಿದ್ದು, ಪ್ರಸ್ತುತ ಪ್ರತಿ ಕೆಜಿ ಬೆಳ್ಳಿಯ ದರ ₹2.50 ಲಕ್ಷಕ್ಕೆ ತಲುಪಿದೆ. ವಿಶೇಷವೆಂದರೆ ಕಳೆದ ಎಂಟು ದಿನಗಳಿಂದ ಬೆಳ್ಳಿ ಬೆಲೆಯಲ್ಲಿ ಯಾವುದೇ ಏರಿಕೆ ಕಂಡುಬಂದಿಲ್ಲ ಹಾಗೂ ಈ ಅವಧಿಯಲ್ಲಿ ಒಟ್ಟಾರೆಯಾಗಿ ಸುಮಾರು ₹30,000 ದಷ್ಟು ಬೆಲೆ ಇಳಿಕೆಯಾಗಿರುವುದು ಮಾರುಕಟ್ಟೆಯ ಇತಿಹಾಸದಲ್ಲಿ ಗಮನಾರ್ಹ ಅಂಶವಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಡೆದ ಎರಡು ಪ್ರಮುಖ ಬೆಳವಣಿಗೆಗಳು ಈ ದಿಢೀರ್ ದರ ಇಳಿಕೆಗೆ ನೇರ ಕಾರಣವಾಗಿವೆ. ಮೊದಲನೆಯದಾಗಿ, ಅಮೆರಿಕದ ಸೆಂಟ್ರಲ್ ಬ್ಯಾಂಕ್ ಆದ ಯುಎಸ್ ಫೆಡರಲ್ ರಿಸರ್ವ್ ಮುಂಬರುವ ದಿನಗಳಲ್ಲಿ ಬಡ್ಡಿದರಗಳನ್ನು ಹೆಚ್ಚಿಸಬಹುದು ಎಂಬ ಅಂದಾಜುಗಳು ಜಾಗತಿಕವಾಗಿ ದಟ್ಟವಾಗಿವೆ. ಫೆಡ್ ಬಡ್ಡಿದರ ಹೆಚ್ಚಿಸಿದರೆ ಯುಎಸ್ ಡಾಲರ್ ಮತ್ತು ಬಾಂಡ್ ಇಳುವರಿ ಬಲಗೊಳ್ಳುವುದರಿಂದ, ಸುರಕ್ಷಿತ ಹೂಡಿಕೆಯಾಗಿ ಚಿನ್ನಕ್ಕಿರುವ ಬೇಡಿಕೆ ಸಹಜವಾಗಿಯೇ ಕಡಿಮೆಯಾಗಿ ಬೆಲೆಗಳು ಕುಸಿಯುತ್ತವೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now