ಸುದ್ದಿಒನ್, ಚಿತ್ರದುರ್ಗ, ಜೂನ್ . 21 : ನಗರದ ಪ್ರತಿಷ್ಠಿತ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ 12 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಪ್ರ್ರಾಮುಖ್ಯತೆಯನ್ನು ಕುರಿತು ಸಂಸ್ಥೆಯ ಕಾರ್ಯದರ್ಶಿಗಳಾದ ಬಿ. ವಿಜಯ ಕುಮಾರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಇಂದು ವಿಶ್ವ ಮಟ್ಟದಲ್ಲಿ ಯೋಗ ದಿನಾಚರಣೆ ವಿಶೇಷ ದಿನವನ್ನಾಗಿ ಮಾಡುವಲ್ಲಿ ಭಾರತೀಯರಾದ ನಾವೆಲ್ಲರೂ ಅರ್ಹರು, ಅಲ್ಲದೇ ಮಕ್ಕಳು ಯೋಗವನ್ನು ಕೇವಲ ಈ ದಿನಕಷ್ಷೇ ಸೀಮಿತಗೊಳಿಸದೇ ವರ್ಷದ ಮುನ್ನೂರ ಅರವತ್ತು ದಿನಗಳಲ್ಲಿ ಯೋಗದ ವಿವಿಧ ಆಸನಗಳಲ್ಲಿ ಸಕ್ರಿಯರಾಗುವುದರಿಂದ ನಿಮ್ಮ ಆರೋಗ್ಯ ಸುಧಾರಣೆಯಲ್ಲಿರುತ್ತದೆ, ಅಲ್ಲದೇ ಕಲಿಕೆಗೂ ಪೂರಕವಾಗಿರುತ್ತದೆ ಎಂದು ತಿಳಿಸಿದರು.


ಯೋಗ ದಿನದ ಅಂಗವಾಗಿ ಶ್ರೀ ಮುರಳಿ ಯೋಗ ಶಿಕ್ಷಕರು ಮಕ್ಕಳಿಗೆ ಯೋಗ ತರಬೇತಿಯನ್ನು ನೀಡುವುದರ ಜೊತೆಗೆ ಯೋಗ ದಿನಾಚರಣೆಯ ಅಂಗವಾಗಿ ವಿವಿಧ ಆಸನಗಳನ್ನು ಮಕ್ಕಳಿಂದ ಮಾಡಿಸುವುದರ ಮೂಲಕ ದಿನವನ್ನು ಯಶಸ್ವಿಗೊಳಿಸಿದರು. ಮಕ್ಕಳಿಗೆ ಕಳೆದ 3 ದಿನಗಳಿಂದ ತರಬೇತಿ ನೀಡಿದ ಶ್ರೀ ಮುರಳಿ ಯೋಗ ತರಬೇತುದಾರರಿಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ.ಬಿ.ವಿಜಯ ಕುಮಾರ್‍ರವರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಸಂಸ್ಥೆಯ ಮುಖ್ಯ ಶಿಕ್ಷಕರಾದ ಶ್ರೀ.ತಿಪ್ಪೇಸ್ವಾಮಿ ಎನ್.ಜಿ, ಸಂಸ್ಥೆಯ ಹೆಡ್ ಕೋ ಆರ್ಡಿನೆಟರ್ ಕುಮಾರಿ ಕಾವ್ಯ ಯದುವಂಶ್ ಹಾಗೂ ಎಲ್ಲಾ ಶಿಕ್ಷಕ/ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು, ಉಪಸ್ಥಿತರಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











