Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಿಲಯನ್ಸ್ ಜಿಯೋ ಐಪಿಒ ಘೋಷಿಸಿದ ಮುಖೇಶ್ ಅಂಬಾನಿ!

---Advertisement---

ಮುಂಬೈ.ಜೂನ್.19: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಅವರು ಜಿಯೋ ಪ್ಲಾಟ್‌ಫಾರ್ಮ್ಸ್‌ನ ಐಪಿಒ (IPO) ಯೋಜನೆಗೆ ಅಧಿಕೃತ ಚಾಲನೆ ನೀಡಿದ್ದಾರೆ. ಜಿಯೋ ಪ್ಲಾಟ್‌ ಫಾರ್ಮ್ಸ್ ಮಂಡಳಿಯು ಐಪಿಒ ದಾಖಲೆಗಳಿಗೆ ಅನುಮೋದನೆ ನೀಡಿದ್ದು, ಇಂದೇ (ಜೂನ್ 19) ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (SEBI) ಕರಡು ಪ್ರತಿಯನ್ನು (DRHP) ಸಲ್ಲಿಸಲಾಗುವುದು ಎಂದು ಅವರು ಪ್ರಕಟಿಸಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್‌ನ 49ನೇ ವಾರ್ಷಿಕ ಮಹಾಸಭೆಯಲ್ಲಿ (AGM) ಮಾತನಾಡಿದ ಮುಖೇಶ್ ಅಂಬಾನಿ, “ರಿಲಯನ್ಸ್ ಮಂಡಳಿಯು ಜಿಯೋ ಐಪಿಒಗೆ ಒಪ್ಪಿಗೆ ನೀಡಿದೆ. ಇದರ ಕರಡು ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ (DRHP) ಅನ್ನು ಇಂದೇ ಸಲ್ಲಿಸಲಾಗುವುದು. ಇಶಾ ಅಂಬಾನಿ, ಆನಂದ್ ಅಂಬಾನಿ ಮತ್ತು ಆಕಾಶ್ ಅಂಬಾನಿ ಅವರು ಈ ಯೋಜನೆಯ ನೇತೃತ್ವ ವಹಿಸಲಿದ್ದಾರೆ ಎಂದು ತಿಳಿಸಿದರು.

ಕಳೆದ ಕೆಲವು ಸಮಯದಿಂದ ಜಿಯೋ ಪ್ಲಾಟ್‌ ಫಾರ್ಮ್ಸ್ ಅನ್ನು ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡುವ ಪ್ರಕ್ರಿಯೆ ತೆರೆಮರೆಯಲ್ಲಿ ನಡೆಯುತ್ತಿತ್ತು. ರಿಲಯನ್ಸ್ ಗ್ರೂಪ್‌ನಿಂದ ಸುಮಾರು ಎರಡು ದಶಕಗಳ ಬಳಿಕ ಹೊರಬರುತ್ತಿರುವ ಮೊದಲ ಐಪಿಒ ಇದಾಗಿದೆ. ಜಿಯೋ ಲಿಸ್ಟಿಂಗ್ ಆಗುವುದರಿಂದ, ಭಾರತವು ಜಾಗತಿಕ ಮಟ್ಟದ, ಸಾಮರ್ಥ್ಯದ ಮತ್ತು ಮೌಲ್ಯದ ತಂತ್ರಜ್ಞಾನ ಕಂಪನಿಗಳನ್ನು ನಿರ್ಮಿಸಬಲ್ಲದು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಂತಾಗುತ್ತದೆ. ಜಿಯೋಗೆ ಉಜ್ವಲ ಭವಿಷ್ಯ ಕಾಯುತ್ತಿದೆ ಎಂದು ನಾನು ನಮ್ಮ ನಿರೀಕ್ಷಿತ ಹೂಡಿಕೆದಾರರಿಗೆ ಭರವಸೆ ನೀಡುತ್ತೇನೆ ಎಂದು ಮುಖೇಶ್ ಅಂಬಾನಿ ಶುಕ್ರವಾರದ ಕಾರ್ಯಕ್ರಮದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಏನಿದು ಐಪಿಒ?

ಸರಳವಾಗಿ ಹೇಳುವುದಾದರೆ, ಐಪಿಒ (Initial Public Offering – ಆರಂಭಿಕ ಸಾರ್ವಜನಿಕ ಕೊಡುಗೆ) ಎಂದರೆ ಕಂಪನಿಯು ತನ್ನ ಷೇರುಗಳು ಅಥವಾ ಮಾಲೀಕತ್ವದ ಪಾಲನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು ನಿರ್ಧರಿಸುವುದಾಗಿದೆ. ಕಂಪನಿಯು ಮುಂದಿನ ದಿನಗಳಲ್ಲಿ ಬೆಳೆದು ದೊಡ್ಡದಾಗುತ್ತದೆ ಎಂದು ಭಾವಿಸುವ ಜನರು ಸ್ಟಾಕ್ ಎಕ್ಸ್ಚೇಂಜ್ ಮೂಲಕ ಈ ಷೇರುಗಳನ್ನು ಖರೀದಿಸಬಹುದು. ಕಂಪನಿಯು ಹಣವನ್ನು ಸಂಗ್ರಹಿಸಲು ಮತ್ತು ಸಾರ್ವಜನಿಕವಾಗಿ ವಹಿವಾಟು ನಡೆಸಲು ಐಪಿಒ ಹಾದಿ ಹಿಡಿಯುತ್ತದೆ.

ಬ್ಲೂಮ್‌ ಬರ್ಗ್ ವರದಿಯ ಪ್ರಕಾರ, ತಲಾ 10 ರೂಪಾಯಿ ಮುಖಬೆಲೆಯ (Face Value) ಸುಮಾರು 270 ಮಿಲಿಯನ್ ಹೊಸ ಷೇರುಗಳನ್ನು ಬಿಡುಗಡೆ ಮಾಡಲು ಜಿಯೋ ಪ್ಲಾಟ್‌ಫಾರ್ಮ್ಸ್ ಮಂಡಳಿ ಒಪ್ಪಿಗೆ ನೀಡಿದೆ.

ನಿಯಮಗಳ ಸಡಿಲಿಕೆಯಿಂದ ವೇಗ ಪಡೆದ ಪ್ರಕ್ರಿಯೆ
ಇದೇ ವರ್ಷದ ಆರಂಭದಲ್ಲಿ ಸರ್ಕಾರವು ಮೆಗಾ-ಕ್ಯಾಪ್ ಕಂಪನಿಗಳ ಲಿಸ್ಟಿಂಗ್ ನಿಯಮಗಳಲ್ಲಿ ಮಹತ್ವದ ಬದಲಾವಣೆ ತಂದಿತ್ತು. ₹5 ಟ್ರಿಲಿಯನ್ (ಸುಮಾರು $54 ಬಿಲಿಯನ್) ಗಿಂತ ಹೆಚ್ಚು ಮೌಲ್ಯದ ಕಂಪನಿಗಳು ಕೇವಲ 2.5% ಈಕ್ವಿಟಿಯನ್ನು ಮಾತ್ರ ಸಾರ್ವಜನಿಕರಿಗೆ ಮುಕ್ತಗೊಳಿಸುವ ಮೂಲಕ ಲಿಸ್ಟ್ ಆಗಲು ಸರ್ಕಾರ ಅನುಮತಿ ನೀಡಿದೆ. ಈ ಮುಂಚೆ ಇದು ಕನಿಷ್ಠ 5% ಇರಬೇಕಾಗಿತ್ತು ಮತ್ತು ಸಾಮಾನ್ಯ ಕಂಪನಿಗಳಿಗೆ 25% ನಿಯಮವಿತ್ತು. ಸರ್ಕಾರದ ಈ ನಿಯಮ ಸಡಿಲಿಕೆಯ ಬೆನ್ನಲ್ಲೇ ಜಿಯೋ ಐಪಿಒ ಪ್ರಕ್ರಿಯೆಯು ವೇಗ ಪಡೆದುಕೊಂಡಿತ್ತು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now