ಭೋಪಾಲ್ (ಮಧ್ಯಪ್ರದೇಶ): ಇಲ್ಲಿನ ಎಂಪಿ ನಗರದ ಸರ್ಕಾರಿ ಪ್ರೆಸ್ ಮುಂಭಾಗದಲ್ಲಿ ಯುವಕನೊಬ್ಬ ಹಠಾತ್ತನೆ ವಿದ್ಯುತ್ ಕಂಬ ಏರಿ ಕುಳಿತ ಘಟನೆ ಗುರುವಾರ ನಡೆದಿದೆ. ಯುವಕನ ಈ ಹೈಡ್ರಾಮಾ ನೋಡಲು ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದರು.
ಯುವಕ ವಿದ್ಯುತ್ ಕಂಬದ ತುತ್ತತುದಿಯಲ್ಲಿ ಕುಳಿತಿರುವುದು ಮತ್ತು ಕೆಳಗಡೆ ನೂರಾರು ಜನರು ಆತಂಕದಿಂದ ನೋಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಆದರೆ, ಆತ ಯಾವ ಕಾರಣಕ್ಕಾಗಿ ಕಂಬ ಏರಿದ್ದ ಎಂಬುದು ಇನ್ನು ಸ್ಪಷ್ಟವಾಗಿಲ್ಲ.

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಎಂಪಿ ನಗರ ಪೊಲೀಸ್ ಅಧಿಕಾರಿಗಳು ಹಾಗೂ ಸ್ಥಳೀಯ ಆಡಳಿತ ಮಂಡಳಿ ಸ್ಥಳಕ್ಕೆ ಧಾವಿಸಿತು. ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ ಸಿಬ್ಬಂದಿ, ಹೈಡ್ರಾಲಿಕ್ ಲಿಫ್ಟ್ ಯಂತ್ರವನ್ನು ಬಳಸಿ ಕಂಬದ ಮೇಲಿದ್ದ ಯುವಕನನ್ನು ಸುರಕ್ಷಿತವಾಗಿ ಕೆಳಗೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
VIDEO | Bhopal, Madhya Pradesh: A man climbed a 33 KV electricity pole MP Nagar area and was seen hanging from high-voltage wires. Police and municipal teams rushed to the spot and launched a rescue operation. Power supply was temporarily cut off as precaution.#BhopalNews… pic.twitter.com/jeFkykRPBE
— Press Trust of India (@PTI_News) June 18, 2026
ರಕ್ಷಣಾ ಕಾರ್ಯಾಚರಣೆಯು ಯಾವುದೇ ಅನಾಹುತವಿಲ್ಲದೆ ಸುಸೂತ್ರವಾಗಿ ನಡೆಯುವಂತೆ ಪೊಲೀಸರು ಇಡೀ ಪ್ರದೇಶವನ್ನು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದರು. ಯುವಕನ ಈ ಕೃತ್ಯದಿಂದಾಗಿ ರಸ್ತೆಯಲ್ಲಿ ಹೋಗುತ್ತಿದ್ದ ಸಾರ್ವಜನಿಕರು ಹಾಗೂ ವಾಹನ ಸವಾರರು ಸ್ಥಳದಲ್ಲೇ ನಿಂತು ನೋಡಲಾರಂಭಿಸಿದರು. ಇದರಿಂದಾಗಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಯಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಜನಸಂದಣಿಯನ್ನು ನಿಯಂತ್ರಿಸಿ ಜನರನ್ನು ಸುರಕ್ಷಿತ ದೂರದಲ್ಲಿ ನಿಲ್ಲುವಂತೆ ಮಾಡಿದರು.
ಸದ್ಯ ಯುವಕನನ್ನು ವಶಕ್ಕೆ ಪಡೆದಿರುವ ಪೊಲೀಸರು, ಆತ ವೈಯಕ್ತಿಕ ಕಾರಣಗಳಿಗಾಗಿ ಈ ರೀತಿ ಮಾಡಿದ್ದಾನೆಯೇ ಅಥವಾ ಮಾನಸಿಕ ಸಮಸ್ಯೆಯಿಂದ ಹೀಗೆ ಮಾಡಿದ್ದಾನೆಯೇ ಎಂಬ ಕೋನದಲ್ಲಿ ತನಿಖೆ ನಡೆಸುತ್ತಿದ್ದಾರೆ. ಸಮಯಪ್ರಜ್ಞೆ ಮೆರೆದು ಯುವಕನ ಪ್ರಾಣ ಉಳಿಸಿದ ರಕ್ಷಣಾ ತಂಡದ ಕಾರ್ಯಕ್ಕೆ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












