ಜಗತ್ತಿನಲ್ಲಿ ನಾನಾ ರೀತಿಯ ಹಣ್ಣುಗಳು ಸಿಗುತ್ತವೆ. ಪ್ರತಿಯೊಂದು ದೇಶದಲ್ಲೂ ಅಲ್ಲಿನ ಜನರು ತಮ್ಮದೇ ಆದ ನೆಚ್ಚಿನ ಹಣ್ಣುಗಳನ್ನು ಇಷ್ಟಪಟ್ಟು ತಿನ್ನುತ್ತಾರೆ. ಆದರೆ, “ಜಗತ್ತಿನಲ್ಲಿಯೇ ಜನರು ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಸೇವಿಸುವ ಹಣ್ಣು ಯಾವುದು?” ಎಂಬ ಪ್ರಶ್ನೆ ಬಂದರೆ, ಬಹುತೇಕರ ಬಾಯಲ್ಲಿ ತಕ್ಷಣ ಬರುವ ಉತ್ತರ ಬಾಳೆಹಣ್ಣು, ಆಪಲ್ (ಸೇಬು) ಅಥವಾ ಮಾವಿನಹಣ್ಣು! ಆದರೆ ಈ ಉತ್ತರ ತಪ್ಪು. ಜಗತ್ತಿನಲ್ಲಿ ಅತ್ಯತಿ ಹೆಚ್ಚು ಬಳಕೆಯಾಗುವ ಆ ಹಣ್ಣಿನ ಹೆಸರು ಕೇಳಿದರೆ ನೀವು ಖಂಡಿತವಾಗಿಯೂ ಆಶ್ಚರ್ಯ ಪಡುತ್ತೀರಿ.
ಹೌದು, ವಿಶ್ವದಲ್ಲೇ ಅತಿ ಹೆಚ್ಚು ಗ್ರಾಹಕರು ಬಳಸುವ ಹಣ್ಣು ಮತ್ಯಾವುದೂ ಅಲ್ಲ, ಅದು ನಮ್ಮ ನಿತ್ಯದ ಅಡುಗೆಯ ಭಾಗವಾಗಿರುವ ‘ಟೊಮೆಟೊ’ ನಿಮಗೆ ಆಶ್ಚರ್ಯವಾಗಬಹುದು, ನಾವು ಸಾಮಾನ್ಯವಾಗಿ ಟೊಮೆಟೊವನ್ನು ತರಕಾರಿ ಎಂದೇ ಭಾವಿಸುತ್ತೇವೆ ಮತ್ತು ಅಡುಗೆಯಲ್ಲಿ ತರಕಾರಿಯಾಗಿಯೇ ಬಳಸುತ್ತೇವೆ. ಆದರೆ ಸಸ್ಯಶಾಸ್ತ್ರ (Botany) ಅಥವಾ ವಿಜ್ಞಾನದ ಪ್ರಕಾರ, ಟೊಮೆಟೊ ತರಕಾರಿಯಲ್ಲ, ಬದಲಿಗೆ ಅದೊಂದು ಅತ್ಯದ್ಭುತ ಹಣ್ಣಿನ ಜಾತಿಗೆ ಸೇರಿದ ಆಹಾರವಾಗಿದೆ.
ವಿಜ್ಞಾನದ ನಿಯಮಗಳ ಪ್ರಕಾರ, ಯಾವ ಸಸ್ಯದ ಭಾಗಗಳಲ್ಲಿ ಬೀಜಗಳಿರುತ್ತವೆಯೋ ಮತ್ತು ಯಾವುದು ಹೂವಿನಿಂದ ಅಭಿವೃದ್ಧಿ ಹೊಂದುತ್ತದೆಯೋ, ಅದನ್ನು ‘ಹಣ್ಣು’ ಎಂದು ಕರೆಯಲಾಗುತ್ತದೆ. ಟೊಮೆಟೊದಲ್ಲಿ ಹೇರಳವಾಗಿ ಬೀಜಗಳಿರುವುದರಿಂದ ಮತ್ತು ಅದು ಹೂವಿನಿಂದ ಕಾಯಿಯಾಗಿ ಮಾರ್ಪಡುವುದರಿಂದ ಅದನ್ನು ಹಣ್ಣುಗಳ ಪಟ್ಟಿಗೆ ಸೇರಿಸಲಾಗಿದೆ.

ವಿಶ್ವದಾದ್ಯಂತ ಪ್ರತಿ ವರ್ಷ ಲಕ್ಷಾಂತರ ಟನ್ ಟೊಮೆಟೊವನ್ನು ಉತ್ಪಾದಿಸಲಾಗುತ್ತದೆ. ಹೀಗಾಗಿ ಜಗತ್ತಿನಲ್ಲಿ ಅತಿ ಹೆಚ್ಚು ಸೇವಿಸಲ್ಪಡುವ ಹಣ್ಣುಗಳ ಪಟ್ಟಿಯಲ್ಲಿ ಟೊಮೆಟೊ ಮೊದಲ ಸ್ಥಾನದಲ್ಲಿದೆ. ಇದರ ನಂತರದ ಸ್ಥಾನದಲ್ಲಿ ಬಾಳೆಹಣ್ಣು (Banana) ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.
















