Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

Watch : ಮೊಬೈಲ್ ಕೊಟ್ಟು ಯುವಕನ ಪ್ರಾಣ ಉಳಿಸಿದ ಪೊಲೀಸ್! ದೆಹಲಿ ಫ್ಲೈಓವರ್ ಮೇಲಿನ ರೋಮಾಂಚಕ ರಕ್ಷಣೆಯ ವಿಡಿಯೋ ವೈರಲ್

---Advertisement---

ದೆಹಲಿ.ಜೂನ್.17: ದೆಹಲಿಯ ಮಹಿಪಾಲ್ಪುರ ಫ್ಲೈಓವರ್ ಮೇಲೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಯುವಕನೊಬ್ಬನನ್ನು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ಅತ್ಯಂತ ಚಾಣಾಕ್ಷತನದಿಂದ ರಕ್ಷಿಸಿದ್ದಾರೆ. ಪ್ರಾಣದ ಹಂಗು ತೊರೆದು ಯುವಕನನ್ನು ಬದುಕಿಸಿದ ಸಬ್ ಇನ್ಸ್ಪೆಕ್ಟರ್ ಅನಿಲ್ ಶರ್ಮಾ ಅವರ ಸಮಯಪ್ರಜ್ಞೆ ಮತ್ತು ಧೈರ್ಯಕ್ಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ದೆಹಲಿ ಪೊಲೀಸರು ತಮ್ಮ ಅಧಿಕೃತ ‘X’ (ಟ್ವಿಟರ್) ಖಾತೆಯಲ್ಲಿ ಈ ರೋಮಾಂಚಕ ರಕ್ಷಣಾ ಕಾರ್ಯಾಚರಣೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಫ್ಲೈಓವರ್ ತುದಿಯಲ್ಲಿ ನಿಂತು ಯುವಕನೊಬ್ಬ ಕೆಳಗೆ ಜಿಗಿಯಲು ಯತ್ನಿಸುತ್ತಿದ್ದನ್ನು ಕಂಡು ಸಾರ್ವಜನಿಕರು ಮತ್ತು ಪೊಲೀಸರು ಆತಂಕಗೊಂಡಿದ್ದರು. ಈ ವೇಳೆ ಸ್ಥಳಕ್ಕೆ ಧಾವಿಸಿದ ಸಬ್ ಇನ್ಸ್ಪೆಕ್ಟರ್ ಅನಿಲ್ ಶರ್ಮಾ, ಯುವಕನತ್ತ ದಿಢೀರನೆ ನುಗ್ಗದೆ ಅತ್ಯಂತ ತಾಳ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸಿದರು.

ಮೊದಲು ಯುವಕನೊಂದಿಗೆ ಪ್ರೀತಿಯಿಂದ ಮಾತನಾಡಿದ ಅಧಿಕಾರಿ, ಆತನ ಆತಂಕವನ್ನು ದೂರ ಮಾಡಲು ಯತ್ನಿಸಿದರು. ಬಳಿಕ ಕುಡಿಯಲು ನೀರು ನೀಡಿ, ಆತನ ನಂಬಿಕೆ ಗಳಿಸಿದರು. ಅಷ್ಟಕ್ಕೇ ನಿಲ್ಲದೆ, ಯುವಕನ ಗಮನವನ್ನು ಸಂಪೂರ್ಣವಾಗಿ ಬೇರೆಡೆ ಸೆಳೆಯಲು ತಮ್ಮ ಮೊಬೈಲ್ ಫೋನ್ ಅನ್ನು ಆತನ ಕೈಗೆ ನೀಡಿದರು.

ಯುವಕ ಫೋನ್ ನೋಡುತ್ತಾ ಮೈಮರೆತ ತಕ್ಷಣ, ಸರಿಯಾದ ಸಮಯ ಸಾಧಿಸಿದ ಎಸ್ಐ ಅನಿಲ್ ಶರ್ಮಾ ಅತ್ಯಂತ ವೇಗವಾಗಿ ಆತನನ್ನು ಗಟ್ಟಿಯಾಗಿ ಹಿಡಿದು ಫ್ಲೈಓವರ್ನ ಸುರಕ್ಷಿತ ಜಾಗಕ್ಕೆ ಎಳೆದುಕೊಂಡರು. ತಕ್ಷಣವೇ ಅಲ್ಲಿದ್ದ ಇತರ ಸಾರ್ವಜನಿಕರು ಮತ್ತು ಪೊಲೀಸರು ಧಾವಿಸಿ ಯುವಕನನ್ನು ರಕ್ಷಿಸಿದರು.

ಅನಿಲ್ ಶರ್ಮಾ ಅವರ ಮಾನವೀಯತೆ ಮತ್ತು ಸಮಯಪ್ರಜ್ಞೆಯನ್ನು ದೆಹಲಿ ಪೊಲೀಸ್ ಇಲಾಖೆ ಮುಕ್ತಕಂಠದಿಂದ ಶ್ಲಾಘಿಸಿದೆ. “ಎಸ್ಐ ಅನಿಲ್ ಶರ್ಮಾ ಅವರು ಯುವಕನೊಂದಿಗೆ ಸಂವಾದ ನಡೆಸಿ ಆತನನ್ನು ಸಮಾಧಾನಪಡಿಸಿದರು. ಮೊಬೈಲ್ ನೀಡಿ ಗಮನ ಬೇರೆಡೆ ಸೆಳೆದ ತಕ್ಷಣ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಯುವಕನ ಅಮೂಲ್ಯ ಜೀವವನ್ನು ಉಳಿಸಿದ್ದಾರೆ” ಎಂದು ಇಲಾಖೆ ತಿಳಿಸಿದೆ. ಸದ್ಯ ಈ ರಕ್ಷಣೆಯ ವಿಡಿಯೋ ಇಂಟರ್ನೆಟ್ನಲ್ಲಿ ಭಾರಿ ವೈರಲ್ ಆಗುತ್ತಿದ್ದು, ಪೊಲೀಸ್ ಅಧಿಕಾರಿಯ ಕರ್ತವ್ಯ ಪ್ರಜ್ಞೆ ಹಾಗೂ ಕರುಣಾಮಯಿ ಹೃದಯಕ್ಕೆ ನೆಟ್ಟಿಗರು ಸಲಾಂ ಎನ್ನುತ್ತಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now