ಬೆಂಗಳೂರು.ಜೂನ್.16: ರಾಜ್ಯ ಸರ್ಕಾರಿ ನೌಕರರ ವೈದ್ಯಕೀಯ ಚಿಕಿತ್ಸೆಯ ಪರಿಷ್ಕೃತ ಸಿಜಿಎಚ್ ಎಸ್ (CGHS – Central Government Health Scheme) ದರ ಪಟ್ಟಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕೃತವಾಗಿ ಅನುಮತಿ ನೀಡಿದ್ದಾರೆ.
ರಾಜ್ಯ ಸರ್ಕಾರದ ಈ ಐತಿಹಾಸಿಕ ನಿರ್ಧಾರದಿಂದಾಗಿ, ಸರ್ಕಾರಿ ನೌಕರರ ವೈದ್ಯಕೀಯ ಸೇವೆಗಳಿಗಾಗಿ ಸರ್ಕಾರವು ಹೆಚ್ಚುವರಿಯಾಗಿ ಬರೋಬ್ಬರಿ 474 ಕೋಟಿ ರೂಪಾಯಿಗಳನ್ನು ಒದಗಿಸಿದಂತಾಗಲಿದೆ. ಪರಿಷ್ಕೃತ ದರಗಳ ಅಳವಡಿಕೆಯಿಂದಾಗಿ ನೌಕರರಿಗೆ ಇನ್ಮುಂದೆ ಅತ್ಯುತ್ತಮ ಗುಣಮಟ್ಟದ ಚಿಕಿತ್ಸಾ ಸೌಲಭ್ಯಗಳು ಲಭ್ಯವಾಗಲಿವೆ.
ಮುಖ್ಯಮಂತ್ರಿ ಶ್ರೀ @DKShivakumar ಅವರು ಸರ್ಕಾರಿ ನೌಕರರ ವೈದ್ಯಕೀಯ ಚಿಕಿತ್ಸೆಯ ಪರಿಷ್ಕೃತ ಸಿಜಿಎಚ್ಎಸ್ ದರ ಪಟ್ಟಿಗೆ ಅನುಮತಿ ನೀಡಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರವು ಸರ್ಕಾರಿ ನೌಕರರ ವೈದ್ಯಕೀಯ ಸೇವೆಗಾಗಿ ಹೆಚ್ಚುವರಿಯಾಗಿ 474 ಕೋಟಿ ರೂ. ಒದಗಿಸಿದಂತಾಗಲಿದೆ.
ಸರ್ಕಾರಿ ನೌಕರರು ಹಾಗೂ ಅವರ ಕುಟುಂಬಕ್ಕೆ ಗುಣಮಟ್ಟದ ಆರೋಗ್ಯ ಸೇವೆ… pic.twitter.com/sDdFNtHqdg
— DIPR Karnataka (@KarnatakaVarthe) June 16, 2026
ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಗಳು, ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಉನ್ನತ ಗುಣಮಟ್ಟದ ಆರೋಗ್ಯ ಸೇವೆಗಳನ್ನು ತಲುಪಿಸುವುದು ಮತ್ತು ಅವರ ಸಾಮಾಜಿಕ ಭದ್ರತೆಯನ್ನು ಖಾತ್ರಿಪಡಿಸುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಇದಕ್ಕೆ ರಾಜ್ಯ ಸರ್ಕಾರವು ಸಂಪೂರ್ಣವಾಗಿ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.










