Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಿಜೆಪಿಗೆ ಕೆ.ಅಣ್ಣಾಮಲೈ ಗುಡ್‌ ಬೈ : ತಮಿಳುನಾಡಿನಲ್ಲಿ ಹೊಸ ಪಕ್ಷದೊಂದಿಗೆ ಸಿಂಗಂ ಎಂಟ್ರಿ.!

---Advertisement---

ಚೆನ್ನೈ: ತಮಿಳುನಾಡು ಬಿಜೆಪಿಯ ಪ್ರಭಾವಿ ಮುಖವಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಇದೀಗ ಕಮಲ ಪಾಳಯಕ್ಕೆ ಅಧಿಕೃತವಾಗಿ ವಿದಾಯ ಹೇಳಿದ್ದಾರೆ. ಜೂನ್ 5, 2026ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬಿನ್ ಅವರು ಅಣ್ಣಾಮಲೈ ಅವರ ರಾಜೀನಾಮೆಯನ್ನು ಅಂಗೀಕರಿಸುವ ಮೂಲಕ ಎಲ್ಲ ಊಹಾಪೋಹಗಳಿಗೂ ತೆರೆ ಎಳೆದಿದ್ದಾರೆ.

ಮೂಲಗಳ ಪ್ರಕಾರ ಅಣ್ಣಾಮಲೈ ಅವರು ಜೂನ್ 2ರಂದೇ ತಮ್ಮ ರಾಜೀನಾಮೆ ಪತ್ರವನ್ನು ದೆಹಲಿ ನಾಯಕರಿಗೆ ರವಾನಿಸಿದ್ದರು. ಹೈಕಮಾಂಡ್ ನಾಯಕರು ಇವರ ಮನವೊಲಿಸಲು ಸಾಕಷ್ಟು ಕಸರತ್ತು ನಡೆಸಿದರೂ ಸಹ ಅಣ್ಣಾಮಲೈ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ.

ತಮಿಳುನಾಡಿನಲ್ಲಿ ಪಕ್ಷವನ್ನು ಮುನ್ನಡೆಸುವ ವಿಚಾರ ಹಾಗೂ ಹೈಕಮಾಂಡ್‌ನ ರಾಜಕೀಯ ತಂತ್ರಗಾರಿಕೆಗಳ ಬಗ್ಗೆ ಕಳೆದ ಒಂದೂವರೆ ವರ್ಷದಿಂದ (18 ತಿಂಗಳು) ಪಕ್ಷದ ಉನ್ನತ ನಾಯಕತ್ವದೊಂದಿಗೆ ಭಿನ್ನಾಭಿಪ್ರಾಯಗಳಿದ್ದವು ಎನ್ನಲಾಗಿದೆ. ಮಾತುಕತೆಗಳು ಫಲಪ್ರದವಾಗದ ಹಿನ್ನೆಲೆಯಲ್ಲಿ ಅಂತಿಮವಾಗಿ ಇವರ ಕಮಲದ ನಂಟು ಕಳಚಿಕೊಂಡಿದೆ.

ಬಿಜೆಪಿಯಿಂದ ಹೊರಬಂದ ಬೆನ್ನಲ್ಲೇ ತಮ್ಮ ಮುಂದಿನ ಆಕ್ಷನ್ ಪ್ಲಾನ್ ಬಿಚ್ಚಿಟ್ಟಿರುವ ಅಣ್ಣಾಮಲೈ, ತಮಿಳುನಾಡು ರಾಜಕೀಯದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆಯಲಿದ್ದಾರೆ. “ರಾಜ್ಯದಲ್ಲಿ ದಶಕಗಳಿಂದ ನಡೆದುಕೊಂಡು ಬರುತ್ತಿರುವ ‘ವ್ಯಕ್ತಿ ಪೂಜೆಯ ಸಂಸ್ಕೃತಿ’ಯನ್ನು ಬೇರುಸಹಿತ ಕಿತ್ತೆಸೆಯುವುದೇ ನನ್ನ ಮುಖ್ಯ ಗುರಿ” ಎಂದು ಅವರು ಗುಡುಗಿದ್ದಾರೆ. ಸದ್ಯಕ್ಕೆ ಬೇರೆ ಯಾವುದೇ ರಾಜಕೀಯ ಪಕ್ಷದ ನೆರಳು ಪಡೆಯದೆ, ಸ್ವತಂತ್ರವಾಗಿ ಹೊಸ ರಾಜಕೀಯ ಚಳವಳಿಯನ್ನು ಮುನ್ನಡೆಸಲು ಅವರು ಸಜ್ಜಾಗಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ತಮ್ಮದೇ ಹೊಸ ಪಕ್ಷದ ಮೂಲಕ ಕಣಕ್ಕಿಳಿಯುವುದಾಗಿ ಬೆಂಬಲಿಗರ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ರಾಜೀನಾಮೆ ಬೆನ್ನಲ್ಲೇ ಅಣ್ಣಾಮಲೈ ಒಂದು ರೋಚಕ ವಿಷಯವನ್ನು ಬಹಿರಂಗಪಡಿಸಿದ್ದಾರೆ. ತಮಿಳುನಾಡಿನ ಸೂಪರ್‌ಸ್ಟಾರ್ ರಜನಿಕಾಂತ್ ಅವರು ತಮಗಾಗಿ ರಾಜಕೀಯವಾಗಿ ಕೈಜೋಡಿಸಲು ಆಹ್ವಾನ ನೀಡಿದ್ದರು ಎಂಬ ರಹಸ್ಯವನ್ನು ಅವರು ಹಂಚಿಕೊಂಡಿದ್ದಾರೆ. ಆದರೆ, ತಮಿಳು ಮಣ್ಣಿನಲ್ಲಿ ಪರ್ಯಾಯ ಮತ್ತು ನವೀನ ಮಾದರಿಯ ನಾಯಕತ್ವವನ್ನು ನೀಡಲು ತಾವು ಏಕಾಂಗಿಯಾಗಿ ಹೋರಾಡುವ ಸ್ವತಂತ್ರ ಮಾರ್ಗವನ್ನೇ ಇಷ್ಟಪಟ್ಟಿರುವುದಾಗಿ ಅಣ್ಣಾಮಲೈ ತಿಳಿಸಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now