Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಜೂನ್ 5 ಪರಿಸರ ದಿನಾಚರಣೆ: ವಿದ್ಯಾರ್ಥಿಗಳಿಂದ 1000 ‘ಬೀಜದ ಉಂಡೆ’ ತಯಾರಿ; ಜೋಗಿಮಟ್ಟಿ ಭಾಗದಲ್ಲಿ ಬಿತ್ತನೆ

---Advertisement---

ಸುದ್ದಿಒನ್, ಚಿತ್ರದುರ್ಗ, ಮೇ. 31 : ಜೂನ್ 5ರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಾರ್ವಜನಿಕರು ಸಸಿಗಳನ್ನು ನೆಡುವ ಮುಖಾಂತರ ಪರಿಸರ ದಿನವನ್ನು ಆಚರಣೆ ಮಾಡುತ್ತಾರೆ. ಪರಿಸರವನ್ನು ಬೆಳೆಸಲು ನಾನಾ ರೀತಿಯಲ್ಲಿ ಪರಿಸರವನ್ನು ಉಳಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು. ಇದರಲ್ಲಿ ಪ್ರಮುಖವಾಗಿ ಕಾಡನ್ನು ಉಳಿಸುವುದು, ಗಿಡಗಳನ್ನು ನೆಡುವುದು ಹಾಗೂ ಬೀಜದ ಉಂಡೆಗಳನ್ನು ಹಾಕುವ ಮುಖಾಂತರ ಪರಿಸರವನ್ನು ಕಾಪಾಡಬಹುದಾಗಿದೆ. ಅದರಲ್ಲೂ ಮುಂಗಾರು ಮಳೆ ಪ್ರಾರಂಭವಾಗುವುದಕ್ಕಿಂತ ಮುಂಚೆಯೇ ಈ ಬಾರಿ ಇಂತಹದ್ದೊಂದು ಅರ್ಥಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

 

​ಜಾಗತಿಕ ತಾಪಮಾನವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತಿದ್ದು, ಈ ತಾಪಮಾನವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ನಾವುಗಳು ಎಲ್ಲರೂ ಸಹ ಒಂದಾಗಿ ಸೇರಿ ಪರಿಸರವನ್ನು ಕಾಪಾಡಿ, ಕಾಡು ಬೆಳೆಸಿ ನಾಡನ್ನು ಉಳಿಸಬೇಕಾಗಿ ಪಣ ತೊಡಬೇಕಾಗಿದೆ. ಅಷ್ಟೇ ಅಲ್ಲದೆ, ನಮ್ಮ ಮನೆಯ ಸುತ್ತಮುತ್ತಲು ಖಾಲಿ ಇರುವ ಜಾಗದಲ್ಲಿ ಸುಮಾರು 10 ಗಿಡಗಳನ್ನು ನೆಟ್ಟು ಬೆಳೆಸಿ ಪೋಷಿಸಬೇಕಾದ ಅಗತ್ಯವಿದೆ.


ಸಾಮಾನ್ಯವಾಗಿ ಈ ಬೇಸಿಗೆಯ ರಜಾ ದಿನಗಳ ಸಂದರ್ಭದಲ್ಲಿ ಎಲ್ಲಾ ಮಕ್ಕಳು ರಜೆ ಮಜಾ ಮಾಡುವ ಮುಖಾಂತರ ಸಮಯ ಕಾಲ ಹರಣ ಮಾಡುತ್ತಾರೆ. ಆದರೆ ಇದಕ್ಕೆ ಅಪವಾದ ಎಂಬಂತೆ, ಎಸ್ ಆರ್ ಎಸ್ ಸಂಸ್ಥೆಯ ಸಿ ಬಿ ಎಸ್ ಇ ಶಾಲೆಯ 9ನೇ ತರಗತಿಯ ಸ್ಕೌಟ್ ವಿದ್ಯಾರ್ಥಿ ಜೀವನ್ ಎಂ ಎಸ್ ಹಾಗೂ ಮೈಸೂರಿನ ವಿವೇಕಾನಂದ ಸೈನಿಕ್ ಸ್ಕೂಲ್ ವಿದ್ಯಾರ್ಥಿಯಾದ ಸಿಂಚನ ಎಂ ಎಸ್ ಇವರುಗಳು ಮಾದರಿಯಾಗಿದ್ದಾರೆ.

 

​ಇವರುಗಳು ಹಲವು ಬಾರಿ ಚಾರಣ ಮಾಡಿದ ಸಂದರ್ಭದಲ್ಲಿ ಹಾಗೂ ನಾಡಿನಲ್ಲಿ ಸಿಗುವ ಬೇವಿನ ಬೀಜ, ಹಳಸಿನ ಬೀಜ, ನೇರಳೆ ಹಣ್ಣಿನ ಬೀಜ, ಮಾವಿನ ಬೀಜ, ಹುಣಸೆ ಹಣ್ಣಿನ ಬೀಜ ಹಾಗೂ ಇನ್ನಿತರ ಕಾಡಿನಲ್ಲಿ ಸಿಗುವ ಬೇಟೆ ಕಾಯಿ ಬೀಜಗಳನ್ನು ಸಂಗ್ರಹಿಸಿದ್ದರು. ಆ ಬೀಜಗಳನ್ನು ಮನೆಗೆ ತಂದು, ಅದರ ಜೊತೆಗೆ ಕೆಮ್ಮಣ್ಣು ಹಾಗೂ ದನದ ಕೊಟ್ಟಿಗೆ ಗೊಬ್ಬರವನ್ನು ಮಿಶ್ರಣ ಮಾಡಿ ಸುಮಾರು 1000 ಬೀಜದ ಉಂಡೆಗಳನ್ನು ತಯಾರು ಮಾಡಿದ್ದಾರೆ.
​ಹೀಗೆ ಸಿದ್ಧಪಡಿಸಿದ ಬೀಜದ ಉಂಡೆಗಳನ್ನು ಜೋಗಿಮಟ್ಟಿ, ಆಡುಮಲ್ಲೇಶ್ವರ ಹಾಗೂ ಚಂದ್ರವಳ್ಳಿಯ ಭಾಗದಲ್ಲಿ ತೇವಾಂಶ ಇರುವ ಜಾಗ, ಖಾಲಿ ಜಾಗಗಳು ಹಾಗೂ ಹೊಲದ ಇಕ್ಕೆಲ ಮತ್ತು ಬದುಗಳಲ್ಲಿ ಪಸರಿಸಲಾಯಿತು. ‘ಭೂಮಿ ಗೀತೆ’ ಸಂಸ್ಥೆಯ ಪರಿಸರವಾದಿ ಮಿಠಾಯಿ ಆರ್. ಮುರುಗೇಶ್ ರವರ ಮಾರ್ಗದರ್ಶನದಲ್ಲಿ ಈ ಒಂದು ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

 

​ಇದೇ ಸಂದರ್ಭದಲ್ಲಿ, ಬೆಳಿಗ್ಗೆ ಹಾಗೂ ಸಂಜೆಯ ವೇಳೆ ಪರಿಸರ ವಾಕ್ ಮಾಡುವ ಸಾರ್ವಜನಿಕರಿಗೂ ಸಹ ಈ ಬೀಜದ ಉಂಡೆಗಳ ಬಗ್ಗೆ ಮಾಹಿತಿ ನೀಡಿ, ಅವರ ಮುಖಾಂತರವೂ ಬೀಜಗಳನ್ನು ನೆಡಿಸಿ ಪರಿಸರ ಪ್ರಜ್ಞೆಯನ್ನು ಬೆಳೆಸಲಾಯಿತು.
​ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಜೀವನ್ ಎಂ ಎಸ್ – 9449682119.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now