Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯಾದ್ಯಂತ ನಾಳೆಯಿಂದ ಶಾಲೆಗಳು ಆರಂಭ : ಮಕ್ಕಳಿಗೆ ಸಿಹಿಹಂಚಿ ಸಂಭ್ರಮದ ಸ್ವಾಗತಕ್ಕೆ ಸಕಲ ಸಿದ್ಧತೆ

---Advertisement---

ಸುದ್ದಿಒನ್,ಬೆಂಗಳೂರು,ಮೇ.31 :ಬೇಸಿಗೆ ರಜೆಯ ಮುಗಿಸಿ ವಿದ್ಯಾರ್ಥಿಗಳು ಮತ್ತೆ ಶಾಲೆಯತ್ತ ಹೆಜ್ಜೆ ಇಡಲು ಸನ್ನದ್ಧರಾಗಿದ್ದು, ಜೂನ್ 1ರಿಂದಲೇ ರಾಜ್ಯಾದ್ಯಂತ 2026-27ನೇ ಶೈಕ್ಷಣಿಕ ವರ್ಷದ ಸರ್ಕಾರಿ ಶಾಲೆಗಳು ಅಧಿಕೃತವಾಗಿ ಆರಂಭಗೊಳ್ಳಲಿವೆ.

ಇಷ್ಟು ದಿನ ರಜೆಯ ಮೂಡ್‌ನಲ್ಲಿದ್ದ ಮಕ್ಕಳನ್ನು ಡಿಜಿಟಲ್ ಜಗತ್ತಿನಿಂದ ಆಕರ್ಷಿಸಲು ಈ ಮೊದಲ ದಿನವನ್ನು ‘ಮಕ್ಕಳ ಹಬ್ಬ’ ಎಂದು ಆಚರಿಸಲಾಗುತ್ತಿದ್ದು, ತೋರಣ ಕಟ್ಟಿ, ಹೂವು ಕೊಟ್ಟು, ಸಿಹಿ ತಿನ್ನಿಸಿ ಪ್ರೀತಿಯಿಂದ ಬರಮಾಡಿಕೊಳ್ಳಲು ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಕರು ಸಜ್ಜಾಗಿದ್ದಾರೆ.

ಮೊದಲ ದಿನವೇ ಮಕ್ಕಳಿಗೆ ವಿಶೇಷ ಬಿಸಿಯೂಟ ಹಾಗೂ ಒಂದು ಜೊತೆ ಹೊಸ ಸಮವಸ್ತ್ರ ನೀಡಲಾಗುತ್ತಿದ್ದು, ಶೂ ಮತ್ತು ಸಾಕ್ಸ್ ವಿತರಣೆಯ ಆದೇಶ ಮಾತ್ರ ಬಾಕಿ ಇದೆ. ಇನ್ನು ಶೈಕ್ಷಣಿಕ ವರ್ಷದ ಆರಂಭದಲ್ಲೇ ಶೇಕಡಾ 90 ಕ್ಕೂ ಹೆಚ್ಚು ಪಠ್ಯಪುಸ್ತಕಗಳನ್ನು ಈಗಾಗಲೇ ಯಶಸ್ವಿಯಾಗಿ ವಿತರಿಸಲಾಗಿದ್ದು, ಮಕ್ಕಳ ಓದಿಗೆ ತೊಂದರೆಯಾಗದಂತೆ ಒಟ್ಟು 40,067 ಅತಿಥಿ ಶಿಕ್ಷಕರ ನೇಮಕಾತಿಗೂ ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ.

ಜಾಗತಿಕ ಮಟ್ಟದಲ್ಲಿ ಎಲ್‌ಪಿಜಿ ಕೊರತೆಯ ಭೀತಿ ಇದ್ದರೂ, ಮಕ್ಕಳ ಬಿಸಿಯೂಟಕ್ಕೆ ಯಾವುದೇ ಅಡ್ಡಿಯಾಗದಂತೆ ಆದ್ಯತೆಯ ಮೇರೆಗೆ ಗ್ಯಾಸ್ ಸಿಲಿಂಡರ್ ಪೂರೈಸಲು ಎಲ್ಲಾ ಜಿಲ್ಲೆಗಳ ಡಿಡಿಪಿಐಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

Join WhatsApp

Join Now

Join Telegram

Join Now