ಸುದ್ದಿಒನ್,ಬೆಂಗಳೂರು,ಮೇ.31 : ರಾಜ್ಯದ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಈಗ ಬಿಗ್ ಶಾಕ್ ನೀಡಿದೆ. ಇನ್ಮುಂದೆ ಶಾಲೆಗೆ ತಡವಾಗಿ ಬರುವ, ಅವಧಿಗೂ ಮುನ್ನವೇ ಮನೆಗೆ ಹೊರಡುವ ಶಿಕ್ಷಕರಿಗೆ ಶಾಲೆಗಳಲ್ಲಿ ಸಮಯ ಪ್ರಜ್ಞೆ ಹಾಗೂ ಪಾರದರ್ಶಕತೆ ತರಲು ರಾಜ್ಯ ಸರ್ಕಾರವು ಡಿಜಿಟಲ್ ಅಸ್ತ್ರ ಪ್ರಯೋಗಿಸಿದೆ.
ಹೌದು,ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಮುಖ ಗುರುತಿಸುವಿಕೆ (Face Recognition) ಹಾಗೂ ಲೊಕೇಶನ್ ಆಧಾರಿತ ಹಾಜರಾತಿ (Location-based Attendance) ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದ್ದು, ಈಗಾಗಲೇ ಇದು ಅಧಿಕೃತವಾಗಿ ಜಾರಿಗೆ ಬಂದಿದೆ. ಅಷ್ಟೇ ಅಲ್ಲ, ಮುಂದಿನ ಒಂದೂವರೆ ತಿಂಗಳಿನಲ್ಲಿ ವಿದ್ಯಾರ್ಥಿಗಳಿಗೂ ಕೃತಕ ಬುದ್ಧಿಮತ್ತೆ (AI based Attendance) ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ತರಲು ಸರ್ಕಾರ ಭರದಿಂದ ಸಿದ್ಧತೆ ನಡೆಸುತ್ತಿದೆ.
ಏನಿದು ಹೊಸ ನಿಯಮ? ಅಟೆಂಡೆನ್ಸ್ ಆ್ಯಪ್ ಹೇಗೆ ಕೆಲಸ ಮಾಡುತ್ತೆ?
ಶಿಕ್ಷಕರ ಹಾಜರಾತಿಯನ್ನು ನಿಖರವಾಗಿ ಟ್ರ್ಯಾಕ್ ಮಾಡಲು ಶಿಕ್ಷಣ ಇಲಾಖೆಯು ‘ಕರ್ನಾಟಕ ಅಡ್ವಾನ್ಸ್ ಅಟೆಂಡೆನ್ಸ್ ಮ್ಯಾನೇಜ್ಮೆಂಟ್ ಸಿಸ್ಟಮ್’ (KAAMS) ಎಂಬ ವಿಶೇಷ ಆ್ಯಪ್ ರೂಪಿಸಿದೆ. ಇದರ ಮೂಲಕ ಶಿಕ್ಷಕರು ಶಾಲೆಗೆ ಬಂದಾಗ ಒಮ್ಮೆ ಮತ್ತು ಬಿಡುವಾಗ ಒಮ್ಮೆ ಹೀಗೆ ದಿನಕ್ಕೆ ಎರಡು ಬಾರಿ ಆ್ಯಪ್ ಮೂಲಕ ತಮ್ಮ ಮುಖ ಹಾಗೂ ಲೊಕೇಶನ್ ವೆರಿಫೈ ಮಾಡಿ ಅಟೆಂಡೆನ್ಸ್ ಹಾಕಬೇಕಾಗುತ್ತದೆ.
ನಿಗದಿತ ಸಮಯ ಮುಗಿದ ಬಳಿಕ ಶಾಲೆಗೆ ಬಂದರೆ ಆ್ಯಪ್ನಲ್ಲಿ ಹಾಜರಾತಿ ದಾಖಲಾಗುವುದಿಲ್ಲ. ಅಂತಹ ದಿನವನ್ನು ‘ಆಕಸ್ಮಿಕ ರಜೆ’ (CL) ಎಂದು ಪರಿಗಣಿಸಲಾಗುತ್ತದೆ. ಹೊಸ ತಂತ್ರಜ್ಞಾನ ಆಧಾರಿತ ಹಾಜರಾತಿ ನಿಯಮವನ್ನು ನಿರ್ಲಕ್ಷಿಸುವ ಶಿಕ್ಷಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ.ಶಾಲೆಯ ಅವಧಿ ಮುಗಿಯುವ ಮೊದಲೇ ಯಾರಿಗೂ ಹೇಳದೆ ಕೇಳದೆ ‘ಚೆಕ್ ಔಟ್’ ಆದಲ್ಲಿ, ಅದನ್ನು ಕರ್ತವ್ಯ ಲೋಪ ಎಂದು ಪರಿಗಣಿಸಿ ಅರ್ಧ ದಿನದ ರಜೆ ಕಡಿತಗೊಳಿಸಲಾಗುವುದು.ಒಂದು ತಿಂಗಳಿನಲ್ಲಿ ಮೂರು ಬಾರಿ ತಡವಾಗಿ ಬರುವುದು ಅಥವಾ ಬೇಗನೆ ಮನೆಗೆ ಹೋದರೆ ಒಂದು ದಿನದ ಸಿಎಲ್ (CL) ಕಟ್ ಆಗಲಿದೆ.
ವಿದ್ಯಾರ್ಥಿಗಳಿಗೂ ಬರಲಿದೆ ‘ಎಐ’ ಅಟೆಂಡೆನ್ಸ್!
ಶಿಕ್ಷಕರಿಗೆ ಮಾತ್ರವಲ್ಲದೆ ವಿದ್ಯಾರ್ಥಿಗಳ ಹಾಜರಾತಿಯಲ್ಲೂ ಡಿಜಿಟಲ್ ಕ್ರಾಂತಿ ಮಾಡಲು ಸರ್ಕಾರ ಮುಂದಾಗಿದೆ. ಮುಂದಿನ ಒಂದೂವರೆ ತಿಂಗಳೊಳಗೆ ಶಾಲಾ ಮಕ್ಕಳಿಗೂ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೂಲಕ ಅಟೆಂಡೆನ್ಸ್ ತೆಗೆದುಕೊಳ್ಳುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












