ಸುದ್ದಿಒನ್,ಬೆಂಗಳೂರು,ಮೇ.30: ರಾಜ್ಯ ರಾಜಕಾರಣದ ಹೈಡ್ರಾಮಾಗೆ ಸದ್ಯಕ್ಕಂತೂ ತೆರೆ ಬಿದ್ದಿದೆ. ಸಿದ್ದರಾಮಯ್ಯ ಅವರ ರಾಜೀನಾಮೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ, ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಗದ್ದುಗೆ ಏರುವುದು ಬಹುತೇಕ ಖಚಿತವಾಗಿದೆ. ಆದರೆ, ಈಗ ಎಲ್ಲರ ಚಿತ್ತ ಇಟ್ಟಿರುವುದು ಹೊಸ ಸಚಿವ ಸಂಪುಟದ ರಚನೆಯ ಮೇಲೆ. ಮುಂಬರುವ ಲೋಕಸಭಾ ಚುನಾವಣೆಯನ್ನು ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಹೈಕಮಾಂಡ್, ಈ ಬಾರಿ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡಲು ಮಾಸ್ಟರ್ ಪ್ಲಾನ್ ರೂಪಿಸಿದೆ.
ರಾಹುಲ್ ಗಾಂಧಿ ‘ಯೂತ್ ಫಾರ್ಮುಲಾ’: 50ರ ಒಳಗಿನವರಿಗೆ ಮಣೆ!
ಈ ಬಾರಿಯ ಸಂಪುಟ ರಚನೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೊಸ ನೀತಿಯೊಂದನ್ನು ತಂದಿದ್ದಾರೆ ಎನ್ನಲಾಗಿದೆ. ಸಂಪುಟದಲ್ಲಿ ಕನಿಷ್ಠ 20 ಮಂದಿ 50 ವರ್ಷದೊಳಗಿನ ಯುವ ನಾಯಕರಿಗೆ ಅವಕಾಶ ನೀಡಬೇಕು ಎಂದು ಅವರು ಪಟ್ಟು ಹಿಡಿದಿದ್ದಾರೆ. ಈ ಯೂತ್ ಫಾರ್ಮುಲಾದಿಂದಾಗಿ, ಡಿಕೆಶಿ ನೇತೃತ್ವದಲ್ಲಿ ಸಂಪೂರ್ಣ ‘ಯುವ ಪಡೆ’ ಕಾರ್ಯಾಚರಣೆಗೆ ಇಳಿಯುವುದು ಪಕ್ಕಾ ಆಗಿದೆ. ಇದರ ನೇರ ಪರಿಣಾಮವಾಗಿ, ಈ ಹಿಂದೆ ಸಚಿವರಾಗಿದ್ದ ಹಲವು ಹಿರಿಯ ನಾಯಕರಿಗೆ ಈ ಬಾರಿ ಸ್ಥಾನ ಸಿಗುವುದು ಅನುಮಾನ ಎನ್ನಲಾಗುತ್ತಿದೆ.
ಇಬ್ಬರು ಡಿಸಿಎಂ ಲೆಕ್ಕಾಚಾರ: ಯತೀಂದ್ರ ಸಿದ್ದರಾಮಯ್ಯಗೆ ಸಿಗುತ್ತಾ ಲಕ್?
ಬೆಂಗಳೂರಿನಿಂದ ದೆಹಲಿವರೆಗೆ ಈಗ ಇಬ್ಬರು ಉಪಮುಖ್ಯಮಂತ್ರಿ (DCM) ಹುದ್ದೆಗಳ ಸೃಷ್ಟಿಯ ಕುರಿತು ಭಾರಿ ಚರ್ಚೆ ನಡೆಯುತ್ತಿದೆ. ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಿರುವುದರಿಂದ, ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಹಿಂದುಳಿದ ವರ್ಗ (OBC) ಮತ್ತು ಪರಿಶಿಷ್ಟ ಜಾತಿ (SC) ಸಮುದಾಯದ ಇಬ್ಬರು ನಾಯಕರಿಗೆ ಡಿಸಿಎಂ ಪಟ್ಟ ನೀಡಲು ಹೈಕಮಾಂಡ್ ಒಲವು ತೋರಿದೆ.
ಮತ್ತೊಂದೆಡೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಬೇಡಿಕೆಯನ್ನು ಹೈಕಮಾಂಡ್ ಮುಂದೆ ಇಟ್ಟಿದ್ದಾರೆ ಎನ್ನಲಾಗಿದೆ. ಆದರೆ, ಯತೀಂದ್ರ ಅವರಿಗೆ ಹೆಚ್ಚಿನ ರಾಜಕೀಯ ಅನುಭವ ಇಲ್ಲದಿರುವುದು ಮೈನಸ್ ಪಾಯಿಂಟ್ ಆಗಿದ್ದು, ಅಂತಿಮ ತೀರ್ಪನ್ನು ಹೈಕಮಾಂಡ್ ಕೈಯಲ್ಲೇ ಉಳಿಸಿಕೊಳ್ಳಲಾಗಿದೆ.
ಪ್ರಾದೇಶಿಕ ಅಸಮತೋಲನ ಸರಿಪಡಿಸುವ ಸವಾಲು
ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಬೆಂಗಳೂರು ಜಿಲ್ಲೆಗೆ ಗರಿಷ್ಠ 7 ಸಚಿವ ಸ್ಥಾನಗಳನ್ನು ನೀಡಲಾಗಿತ್ತು. ಆದರೆ ಉಡುಪಿ, ಹಾಸನ, ಕೊಡಗು, ಚಾಮರಾಜನಗರ, ಕೋಲಾರ, ಹಾವೇರಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಒಂದೂ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಈ ಬಾರಿ ಹೈಕಮಾಂಡ್ ಈ ತಾರತಮ್ಯವನ್ನು ಹೋಗಲಾಡಿಸಲು ನಿರ್ಧರಿಸಿದೆ. ಬೆಂಗಳೂರಿನ ಪ್ರಾತಿನಿಧ್ಯವನ್ನು ಕೊಂಚ ಕಡಿಮೆ ಮಾಡಿ, ಈವರೆಗೆ ಸಚಿವ ಸ್ಥಾನ ಸಿಗದ ಜಿಲ್ಲೆಗಳಿಗೆ ಮೊದಲ ಆದ್ಯತೆ ನೀಡಲು ಗಂಭೀರ ಚಿಂತನೆ ನಡೆಸಿದೆ. ಅಲ್ಲದೆ, ಆರಂಭದಲ್ಲೇ ಎಲ್ಲಾ ಸಚಿವ ಸ್ಥಾನಗಳನ್ನು ಭರ್ತಿ ಮಾಡದೆ ಕೆಲವು ಸ್ಥಾನಗಳನ್ನು ಕಾಯ್ದಿರಿಸುವ ರಣತಂತ್ರವನ್ನೂ ಹೂಡಲಾಗಿದೆ.
ಗಮನಾರ್ಹ ಅಂಶ: ಈ ಹಿಂದಿನ ಸಂಪುಟದಲ್ಲಿ ಲಿಂಗಾಯತ-7, ಒಕ್ಕಲಿಗ-5, ಒಬಿಸಿ-4, ಕುರುಬ-2, ಮುಸ್ಲಿಂ-2, ರೆಡ್ಡಿ-2, ಎಸ್ಟಿ-1, ಬ್ರಾಹ್ಮಣ-1, ಮತ್ತು ಕ್ರಿಶ್ಚಿಯನ್ ಸಮುದಾಯಕ್ಕೆ 1 ಸ್ಥಾನ ಸಿಕ್ಕಿತ್ತು. (ಸುಧಾಕರ್ ಅವರ ನಿಧನ ಹಾಗೂ ರಾಜಣ್ಣ, ನಾಗೇಂದ್ರ ಅವರ ರಾಜೀನಾಮೆಯಿಂದ ಮೂರು ಸ್ಥಾನಗಳು ತೆರವಾಗಿದ್ದವು). ಆದರೆ ಈ ಬಾರಿಯ ಜಾತಿಸಮೀಕರಣ ಸಂಪೂರ್ಣ ಉಲ್ಟಾ ಆಗುವ ಸಾಧ್ಯತೆ ದಟ್ಟವಾಗಿದೆ.
ಜಿಲ್ಲಾವಾರು ಸಂಭಾವ್ಯ ಸಚಿವರ ಲಿಸ್ಟ್ ಇಲ್ಲಿದೆ:
ಹೊಸ ಸಚಿವ ಸಂಪುಟದ ರೇಸ್ನಲ್ಲಿ ಮುಂಚೂಣಿಯಲ್ಲಿರುವ ನಾಯಕರ ಜಿಲ್ಲಾವಾರು ಪಟ್ಟಿ ಹೀಗಿದೆ:
ಮೈಸೂರು: ಯತೀಂದ್ರ ಸಿದ್ದರಾಮಯ್ಯ, ತನ್ವೀರ್ ಸೇಠ್
ಬೆಂಗಳೂರು: ಎನ್.ಎ.ಹ್ಯಾರೀಸ್ / ರಿಜ್ವಾನ್ ಅರ್ಷದ್, ಕೃಷ್ಣಪ್ಪ / ಕೃಷ್ಣಬೈರೇಗೌಡ, ರಾಮಲಿಂಗಾ ರೆಡ್ಡಿ

ಬೆಂಗಳೂರು ಗ್ರಾಮಾಂತರ: ಶರತ್ ಬಚ್ಚೇಗೌಡ
ರಾಮನಗರ: ಮಾಗಡಿ ಬಾಲಕೃಷ್ಣ
ತುಮಕೂರು: ಟಿ.ಬಿ.ಜಯಚಂದ್ರ
ಕೋಲಾರ : ರೂಪಕಲಾ ಶಶಿಧರ್ / ಎಸ್.ಎನ್.ನಾರಾಯಣಸ್ವಾಮಿ
ಚಿತ್ರದುರ್ಗ: ಟಿ.ರಘುಮೂರ್ತಿ
ದಾವಣಗೆರೆ: ಎಸ್.ಎಸ್.ಮಲ್ಲಿಕಾರ್ಜುನ
ಬಳ್ಳಾರಿ: ಕಂಪ್ಲಿ ಗಣೇಶ
ಶಿವಮೊಗ್ಗ: ಮಧು ಬಂಗಾರಪ್ಪ / ಬಿ.ಕೆ.ಸಂಗಮೇಶ್
ಮಂಡ್ಯ: ಚಲುವರಾಯಸ್ವಾಮಿ / ಪಿ.ಎಂ.ನರೇಂದ್ರಸ್ವಾಮಿ
ದಕ್ಷಿಣ ಕನ್ನಡ: ಯು.ಟಿ.ಖಾದರ್
ಉತ್ತರ ಕನ್ನಡ: ಮಂಕಾಳ್ ವೈದ್ಯ / ಆರ್.ವಿ.ದೇಶಪಾಂಡೆ
ಗದಗ: ಎಚ್.ಕೆ.ಪಾಟೀಲ್

ಹಾವೇರಿ: ರುದ್ರಪ್ಪ ಲಮಾಣಿ
ಧಾರವಾಡ: ಎನ್.ಎ.ಕೋನರೆಡ್ಡಿ / ಪ್ರಸಾದ್ ಅಬ್ಬಯ್ಯ
ಕೊಪ್ಪಳ: ರಾಘವೇಂದ್ರ ಇಟ್ನಾಳ್ / ಶಿವರಾಜ ತಂಗಡಗಿ

ವಿಜಯಪುರ: ಎಂ.ಬಿ.ಪಾಟೀಲ್, ಶಿವಾನಂದ ಪಾಟೀಲ್ / ನಾಡಗೌಡ
ಬೆಳಗಾವಿ: ಸತೀಶ್ ಜಾರಕಿಹೊಳಿ, ಲಕ್ಷ್ಮಣ ಸವದಿ / ಅಶೋಕ ಪಟ್ಟಣ್
ಕಲಬುರ್ಗಿ: ಪ್ರಿಯಾಂಕ ಖರ್ಗೆ / ಡಾ.ಅಜಯ್ ಸಿಂಗ್
ಬೀದರ್: ಈಶ್ವರ ಖಂಡ್ರೆ
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.





















