ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮೇ. 27 : ಹೆಮ್ಮೆಯ ಸಾಹಿತಿ ಡಾ.ಬಿ.ಎಲ್.ವೇಣುರವರು ಕೃತಿಗಳ ಮೂಲಕ ಜಿಲ್ಲೆಯ ನೆಲಮೂಲದ ಸಂಸ್ಕøತಿಯನ್ನು ಕಟ್ಟಿಕೊಟ್ಟು ಜನಮಾನಸ ತಲುಪಿದ್ದಾರೆಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಮೆಚ್ಚುಗೆ ವ್ಯಕ್ತಪಡಿಸಿದರು.
81 ನೇ ಹುಟ್ಟುಹಬ್ಬದ ಅಂಗವಾಗಿ ಡಾ.ಬಿ.ಎಲ್.ವೇಣುರವರನ್ನು ಅವರ ನಿವಾಸದಲ್ಲಿ ಬುಧವಾರ ಸನ್ಮಾನಿಸಿ ಮಾತನಾಡಿದ ಬಿ.ಕಾಂತರಾಜ್ ನೆಲಮೂಲ ಹಾಗೂ ಶ್ರಮ ಸಂಸ್ಕøತಿಯನ್ನು ಕಾದಂಬರಿ, ಚಿತ್ರಕಥೆ ಸಂಭಾಷಣೆಯ ಮೂಲಕ ಕಥೆಗಾರರಾಗಿ ಜಿಲ್ಲೆಯನ್ನು ಪ್ರಧಾನವಾಗಿಟ್ಟುಕೊಂಡು ಚಿತ್ರದುರ್ಗದ ಕೀರ್ತಿಯನ್ನು ತಮ್ಮ ಬರವಣಿಗೆ ಮೂಲಕ ನಾಡಿನಾದ್ಯಂತ ಪಸರಿಸಿರುವ ಬಿ.ಎಲ್.ವೇಣುರವರಿಂದ ಇನ್ನಷ್ಟು ಕೃತಿಗಳು ಹೊರ ಬರಲಿ ಎಂದು ಶುಭ ಹಾರೈಸಿದರು.
ಬಿ.ಎಲ್.ವೇಣುರವರ ಕಥೆಗಳು ವಿಶ್ವವಿದ್ಯಾನಿಲಯಗಳಲ್ಲಿ ಪಠ್ಯಪುಸ್ತಕಗಳಾಗಿರುವುದು ಹೆಮ್ಮೆಯ ಸಂಗತಿ. ನಾನು ನಗರಸಭೆ ಅಧ್ಯಕ್ಷನಾಗಿದ್ದಾಗ ತುರುವನೂರು ರಸ್ತೆಯಲಿಡಾ.ಬಿ.ಎಲ್.ವೇಣು ವೃತ್ತವೆಂದು ನಾಮಕರಣ ಮಾಡಿದ್ದೇನೆ. ಇದೊಂದು ನನ್ನ ಅಧಿಕಾರವಧಿಯಲ್ಲಿ ಸಿಕ್ಕ ಸುವರ್ಣಾವಕಾಶ ಎಂದು ಸ್ಮರಿಸಿಕೊಂಡರು.
ಹುಟ್ಟುಹಬ್ಬದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಬಿ.ಎಲ್.ವೇಣುರವರು ಇಳಿ ವಯಸ್ಸಿನಲ್ಲಿಯೂ ಇನ್ನು ಲವಲವಿಕೆಯಿಂದ ಇದ್ದೇನೆಂದರೆ ಅದಕ್ಕೆ ಬರವಣಿಗೆಯೇ ಮೂಲಕ ಕಾರಣ. ತೋಟಗಾರಿಕೆ ಇಲಾಖೆ ಪಲಪುಷ್ಪ ಪ್ರದರ್ಶನದಲ್ಲಿ ನನ್ನ ಸಾಹಿತ್ಯ ಕೃತಿಗಳ ಪ್ರತಿಕೃತಿ ನಿರ್ಮಿಸಿ ಅಪಾರವಾದ ಗೌರವವನ್ನು ಸೂಚಿಸಿದ್ದು, ನನಗೆ ತೃಪ್ತಿ ತಂದಿದೆ. ನನ್ನ ಬರವಣಿಗೆಗೆ ಸಹಕಾರ ನೀಡಿದ ಇತಿಹಾಸ ಸಂಶೋಧಕ ಡಾ.ಲಕ್ಷ್ಮಣ ತೆಲಗಾವಿರವರನ್ನು ನನ್ನ ಜೀವನದಲ್ಲಿ ಮರೆಯುವುದಿಲ್ಲ ಎಂದು ನೆನಪಿಸಿಕೊಂಡರು.

ಜಿಲ್ಲಾ ಮದಕರಿನಾಯಕ ಸಾಂಸ್ಕøತಿಕ ಕೇಂದ್ರದ ಡಿ.ಗೋಪಾಲಸ್ವಾಮಿ ನಾಯಕ ಮಾತನಾಡುತ್ತ ಖ್ಯಾತ ಕಾದಂಬರಿಕಾರರಾಗಿ ನಾಡಿನಾದ್ಯಂತ ಗುರುತಿಸಿಕೊಂಡಿರುವ ಸಾಹಿತಿ ಡಾ.ಬಿ.ಎಲ್.ವೇಣುರವರು ನೂರು ಕಾಲ ಬಾಳಿ ಇನ್ನು ಹೆಚ್ಚಿನ ಸಾಹಿತ್ಯಗಳನ್ನು ಹೊರ ಸೂಸಬೇಕಾಗಿದೆ. ಅದಕ್ಕಾಗಿ ಭಗವಂತ ಆರೋಗ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸಿ ಹುಟ್ಟುಹಬ್ಬದ ಶುಭಾಷಯಗಳನ್ನು ಕೋರಿದರು. ಇತಿಹಾಸ ಸಂಶೋಧಕ ಡಾ.ಎನ್.ಎಸ್.ಮಹಾಂತೇಶ್, ಜಿ.ಪ್ರಹ್ಲಾದ್, ಪತ್ರಕರ್ತ ಮೇಘಗಂಗಾಧರನಾಯ್ಕ, ಪ್ರಹ್ಲಾದ್ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದು ಡಾ.ಬಿ.ಎಲ್.ವೇಣುರವರಿಗೆ ಜನ್ಮದಿನದ ಶುಭ ಕೋರಿದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.



















