ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಳ್ಳಕೆರೆ, ಮೇ. 27 : ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡುತ್ತಿದ್ದ ವಕೀಲ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ತಾಲ್ಲೂಕಿನ ಬೆಳೆಗೆರೆ ಗ್ರಾಮದ ಸಹುಕಾರ್ ಉಮಾಪತಿಯವರ ಪುತ್ರ ವಕೀಲರಾದ ಸಹುಕಾರ್ ಯು.ತಿಪ್ಪೇಸ್ವಾಮಿ (63)ಹೃದಯಘಾತದಿಂದ ಎರಡು ತಿಂಗಳಿನಿಂದ ಮಂಗಳೂರಿನ ಯೆಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಿಸದೆ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ.
ಮೃತ ವಕೀಲ ಯು.ತಿಪ್ಪೇಸ್ವಾಮಿಗೆ ಇಬ್ಬರು ಗಂಡು ಮಕ್ಕಳಿದ್ದು ಪತ್ನಿ ಸುಜಾತ ಸೇರಿದಂತೆ ಅಪಾರ ಬಂಧು ಬಳಗವನ್ನಗಲಿದ್ದಾರೆ. ಅಂತ್ಯಕ್ರಿಯೆ ಇಂದು ಬೆಳಗೆರೆ ಗ್ರಾಮದ ತೋಟದ ಜಮೀನಿನಲ್ಲಿ ನೆರವೇರಿಸಲಾಗಿದೆ ಎಂದು ಪುತ್ರ ಟಿ.ಕಾರ್ತಿಕ ಮಾಹಿತಿ ನೀಡಿದ್ದಾರೆ.










