ಅಮೆರಿಕದ ಶ್ವೇತಭವನದ ಸಮೀಪ ಭಾರೀ ಗುಂಡಿನ ದಾಳಿ ನಡೆದಿದ್ದು, ಘಟನೆಯ ವೇಳೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಶ್ವೇತಭವನದೊಳಗೇ ಇದ್ದರು ಎನ್ನಲಾಗಿದೆ. ಶ್ವೇತಭವನದ ಪೆನ್ಸೆಲ್ವೇನಿಯಾ ಅವೆನ್ಯೂ ಎನ್‌ಡಬ್ಲ್ಯೂ ಸಮೀಪ ನಡೆದ ಫೈರಿಂಗ್ ಪ್ರಕರಣದಲ್ಲಿ ಇಬ್ಬರು ಶಂಕಿತರನ್ನು ಸೀಕ್ರೆಟ್ ಸರ್ವಿಸ್ ಸಿಬ್ಬಂದಿ ಹೊಡೆದುರುಳಿಸಿದ್ದಾರೆ ಎಂದು ವರದಿಯಾಗಿದೆ.ಮೂಲಗಳ ಪ್ರಕಾರ, ಶ್ವೇತಭವನದ ಹೊರಭಾಗದಲ್ಲಿ ಶಂಕಿತರು 20 ಸುತ್ತುಗಳಷ್ಟು ಗುಂಡು ಹಾರಿಸಿದ್ದು, ಇದರಿಂದ ಅಧ್ಯಕ್ಷೀಯ ಸಂಕೀರ್ಣದ ಸುತ್ತಮುತ್ತ ಭಾರೀ ಆತಂಕದ ವಾತಾವರಣ ನಿರ್ಮಾಣವಾಯಿತು. ಘಟನೆ ಬಳಿಕ ಪೊಲೀಸರು ಮತ್ತು ಫೆಡರಲ್ ಏಜೆಂಟ್‌ಗಳು ಪ್ರದೇಶವನ್ನು ಸುತ್ತುವರೆದು ಭದ್ರತೆಯನ್ನು ಕಟ್ಟು ನಿಟ್ಟಾಗಿಸಿದರು.
ಘಟನೆಯ ವೇಳೆ ಟ್ರಂಪ್ ಶ್ವೇತಭವನದೊಳಗೇ ಇದ್ದರು. ಇದೇ ಸಮಯದಲ್ಲಿ ಇರಾನ್‌ಗೆ ಸಂಬಂಧಿಸಿದ ಮಹತ್ವದ ಮಾತುಕತೆಗಳು ನಡೆಯುತ್ತಿದವು ಎಂದು ತಿಳಿದುಬಂದಿದೆ.ಶ್ವೇತಭವನದ ಹೊರಗಿನ ಯುಎಸ್ ಸೀಕ್ರೆಟ್ ಸರ್ವಿಸ್ ಭದ್ರತಾ ಬೂತ್ ಬಳಿ ಶಂಕಿತನೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ. ಸುಮಾರು 10ರಿಂದ 20 ಸುತ್ತು ಗುಂಡು ಹಾರಿಸಿದ ಬಳಿಕ ಸೀಕ್ರೆಟ್ ಸರ್ವಿಸ್ ಸಿಬ್ಬಂದಿ ಪ್ರತಿದಾಳಿ ನಡೆಸಿ ಶಂಕಿತನನ್ನು ಹೊಡೆದುರುಳಿಸಿದ್ದಾರೆ. ಗುಂಡಿನ ಚಕಮಕಿಯಲ್ಲಿ ಒಬ್ಬ ಪ್ರೇಕ್ಷಕ ಗಾಯಗೊಂಡಿದ್ದು, ಯಾವುದೇ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳಿಗೆ ಗಾಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಪ್ರತಿಕ್ರಿಯಿಸಿದ ಎಫ್‌ಬಿಐ ನಿರ್ದೇಶಕ Kash Patel, “ಘಟನಾ ಸ್ಥಳದಲ್ಲಿ ಎಫ್‌ಬಿಐ ಅಧಿಕಾರಿಗಳು ಇದ್ದಾರೆ. ಶ್ವೇತಭವನದ ಮೈದಾನದ ಬಳಿ ನಡೆದ ಗುಂಡಿನ ದಾಳಿಗೆ ಸೀಕ್ರೆಟ್ ಸರ್ವಿಸ್ ನೀಡಿದ ಪ್ರತಿಕ್ರಿಯೆಗೆ ನಾವು ಸಹಕಾರ ನೀಡುತ್ತಿದ್ದೇವೆ. ಸಾಧ್ಯವಾದಷ್ಟು ಬೇಗ ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ನೀಡಲಾಗುವುದು” ಎಂದು ಹೇಳಿದ್ದಾರೆ.ಇದರ ಮಧ್ಯೆ, ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ತಾವು ಓವಲ್ ಕಚೇರಿಯಲ್ಲಿರುವುದಾಗಿ ಹಾಗೂ ಇರಾನ್‌ನೊಂದಿಗೆ ಅಂತಿಮ ಒಪ್ಪಂದವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ತಿಳಿಸಿದ್ದರು.
ಘಟನೆಯ ಬಗ್ಗೆ ಎಬಿಸಿ ಪತ್ರಕರ್ತೆ Selina Wang ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, “ನಾನು ವೈಟ್ ಹೌಸ್ ನಾರ್ತ್ ಲಾನ್‌ನಿಂದ ವಿಡಿಯೋ ಚಿತ್ರೀಕರಿಸುತ್ತಿದ್ದಾಗ ಏಕಾಏಕಿ ಗುಂಡಿನ ಸದ್ದು ಕೇಳಿಸಿತು. ಡಜನ್‌ಗಟ್ಟಲೆ ಗುಂಡು ಹಾರಿಸಿದಂತಿತ್ತು. ತಕ್ಷಣವೇ ಪತ್ರಿಕಾಗೋಷ್ಠಿ ಕೊಠಡಿಗೆ ತೆರಳುವಂತೆ ನಮಗೆ ಸೂಚಿಸಲಾಯಿತು” ಎಂದು ಹೇಳಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















