ಸುದ್ದಿಒನ್, ಹೊಸದುರ್ಗ, ಮೇ. 17 : ಪಟ್ಟಣದ ಹೊನ್ನಮ್ಮ ಬಡಾವಣೆಯಲ್ಲಿ ಕಳ್ಳತನ ಮಾಡಲಾಗಿದ್ದ ನಾಲ್ವರು ಅಂತರ್ ಜಿಲ್ಲಾ ಕಳ್ಳರನ್ನು ಹೊಸದುರ್ಗ ಪೊಲೀಸರು ಬಂಧಿಸಿ ಅವರಿಂದ 10,66,000/- ರೂ ಬೆಲೆಬಾಳುವ 76 ಗ್ರಾಂ ತೂಕದ ಬಂಗಾರದ ಆಭರಣಗಳು ಮತ್ತು 1,96,000/-ರೂ ಬೆಲೆ ಬಾಳುವ 750 ಗ್ರಾಂ ತೂಕದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹೊಸದುರ್ಗದ ಹಸೇನ್ (22 ವರ್ಷ), ದಾವಣಗೆರೆಯ ಪುರುಶೋತ್ತಮ(23 ವರ್ಷ) ಪ್ರವೀಣ್ (25 ವರ್ಷ) ಮತ್ತು ದಿಲೀಪ್ (23 ವರ್ಷ) ಬಂಧಿತರು.
ಪಟ್ಟಣದ ಹೊನ್ನಮ್ಮ ಬಡಾವಣೆಯ ಶಂಭುಲಿಂಗ ಅವರ ಮನೆಯಲ್ಲಿ ಕಳೆದ ವರ್ಷ 01.11.2025 ರಿಂದ 04.11.2025 ರ ಮದ್ಯದ ಸಮಯದಲ್ಲಿ ಮನೆಯ ಬಾಗಿಲಿಗೆ ಹಾಕಿದ ಬೀಗ ಮುರಿದು ಮನೆ ಕಳ್ಳತನ ಮಾಡಿದ ಬಗ್ಗೆ ಹೊಸದುರ್ಗ ಠಾಣೆಯಲ್ಲಿ ದೂರು ನೀಡಿದ್ದರು.

ಚಿತ್ರದುರ್ಗ ಎಸ್.ಪಿ. ರಂಜಿತ್ ಕುಮಾರ್ ಬಂಡಾರು ಮಾರ್ಗದರ್ಶನದಲ್ಲಿ
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ.ಶಿವಕುಮಾರ್, ಶಿವಕುಮಾರ್ ಟಿ. ಎಂ ಡಿ.ವೈ.ಎಸ್.ಪಿ , ಹಿರಿಯೂರು, ರಮೇಶ್ ಕೆ ಟಿ, ಪಿ.ಐ. ಹೊಸದುರ್ಗ,
ಪಿ ಎಸ್ ಐ ಗಳಾದ ಶ್ರೀಶೈಲ, ಮಹೇಶ್ ಕುಮಾರ್ ಎನ್, ಶ್ರೀಮತಿ ಅನ್ನಪೂರ್ಣಮ್ಮ, ಪಿ.ಎಸ್.ಐ ಶಿವರಾಜ್, ಪ್ರಿಯಾಂಕ, ಹಾಗೂ ಸಿಬ್ಬಂದಿಯವರಾದ ಕುಮಾರ್, ಉಮೇಶ, ಗಂಗಾದರ, ತಿಪ್ಪೇಸ್ವಾಮಿ, ಚಂದ್ರಪ್ಪ, ದಾದಪೀರ್, ರಾಜಣ್ಣ, ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ಸತೀಶ್ ಮತ್ತು ಪ್ರಕಾಶ್ ರವರ ತಂಡವು ಕಾರ್ಯಾಚರಣೆ ನಡೆಸಿದ್ದರು.














