Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮೇ 20 ರಂದು ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಮೇ. 17 : ರಾಜ್ಯ ಸರ್ಕಾರ ಕೆಎಸ್‍ಆರ್‍ಟಿಸಿ ನೌಕರರ ಬೇಡಿಕೆಗಳನ್ನು ಮೀನಾಮೇಷ ಎಣಿಸುತ್ತಿದೆ. ಇದರ ಬಗ್ಗೆ ಹಲವಾರು ಬಾರಿ ಪ್ರತಿಭಟನೆ/ಮನವಿ/ಧರಣಿ ನಡೆಸಿದರೂ ಸಹ ಸರ್ಕಾರ ಯಾವುದಕ್ಕೂ ಗಮನ ನೀಡಿಲ್ಲ.ಈ ಹಿನ್ನೆಲೆಯಲ್ಲಿ ಮೇ-20ರ ಬೆಳಗ್ಗೆ 6 ಗಂಟೆಯಿಂದ ರಾಜ್ಯದ ನಾಲ್ಕು ವಿಭಾಗಗಳಿಂದ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಎಐಟಿಯುಸಿ ಜಿಲ್ಲಾಧ್ಯಕ್ಷರಾದ ಸುರೇಶ್ ಬಾಬು ತಿಳಿಸಿದ್ದಾರೆ.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರ ನಮಗೆ 2024ರಲ್ಲಿಯೇ ವೇತನ ಪರಿಷ್ಕರಣೆ ಮಾಡಬೇಕಿತ್ತು.. ಇದರ ಬಗ್ಗೆ ಕೇಳಿದಾಗ ಸಮಯವನ್ನು ಮುಂದೂಡುತ್ತಾ 2025ರಲ್ಲಿ ವೇತನ ಪರಿಷ್ಕರಣೆ ಮಾಡಿದ್ದಾರೆ. ಇದರಿಂದ ನಮಗೆ ಸುಮಾರು 15 ತಿಂಗಳ ವೇತನ ಪರಿಷ್ಕರಣೆ ಕಡಿತವಾಗಿದೆ.ನಮ್ಮ ಬೇಡಿಕೆಗಳ ಬಗ್ಗೆ ಸಂಬಂಧಪಟ್ಟ ಸಚಿವರು ಮತ್ತು ಆಯುಕ್ತರಲ್ಲಿ ಹಲವಾರು ಬಾರಿ ಸಂಧಾನ ಸಭೆಗಳನ್ನು ಮಾಡಿದ್ದರು ಸಹ ಯಾವುದೇ ಪ್ರಯೋಜನವಾಗಿಲ್ಲ. ನಮಗೆ ನೀಡಬೇಕಾದ ಬಾಕಿಯನ್ನು ಸರ್ಕಾರ ನೀಡಲು ಮೀನಾಮೇಷ ಮಾಡುತ್ತಿದೆ ಎಂದು ದೂರಿದರು.

ರಾಜ್ಯ ಸರ್ಕಾರ ತನ್ನ ಸರ್ಕಾರಿ ನೌಕರರಿಗೆ ಕಾಲಕಾಲಕ್ಕೆ ತಕ್ಕಂತೆ ವೇತನ ಪರಿಷ್ಕರಣೆ ಮಾಡುತ್ತಿದೆ ಆದರೆ ನಮಗೆ ವೇತನ ಪರಿಷ್ಕರಣೆ ಮಾಡದೇ ಮಲತಾಯಿ ಧೋರಣೆ ಅನುಸರಿಸುತ್ತಿದೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆಯನ್ನು ಯಶಸ್ವಿ ಮಾಡಲು ನಮ್ಮ ಎಲ್ಲಾ ಸಾರಿಗೆ ನೌಕರರು ಶಕ್ತಿಮೀರಿ ಪ್ರಯತ್ನ ಮಾಡಿ ಯಶಸ್ವಿಗೊಳಿಸುತ್ತಿದ್ದಾರೆ.50 ಜನ ಪ್ರಯಾಣಿಸುವ ಬಸ್ಸಿನಲ್ಲಿ 80ರಿಂದ100 ಜನ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗಲಾಗುತ್ತಿದೆ. ಶಕ್ತಿ ಯೋಜನೆಯ ಯಶಸ್ವಿ ಮಾಡಲಾಗುತ್ತಿದೆ ಎಂದರು.

ಕೆಎಸ್‍ಆರ್‍ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೇಡರೇಷನ್‍ನ ಕಾರ್ಯಾಧ್ಯಕ್ಷರಾದ ರಹಿಂಸಾಬ್ ಮಾತನಾಡಿ, ಇದಲ್ಲದೆ ಚಾಲಕರು, ನಿರ್ವಾಹಕರು ಹಾಗೂ ಬಸ್ಸುಗಳು ಕಡಿಮೆ ಇದ್ದರೂ ಸಹ  ಶಕ್ತಿ ಯೋಜನೆಯನ್ನು ಯಶಸ್ವಿ ಮಾಡುತ್ತಿದ್ದೇವೆ. ಇದರ ಕೃತಜ್ಞತಾ ಭಾವನೆ ಸರ್ಕಾರಕ್ಕಿಲ್ಲ. ಇಷ್ಟಾದರೂ ಸಹ ಸರ್ಕಾರ ನಮ್ಮ ಬಗ್ಗೆ ಗಮನ ನೀಡುತ್ತಿಲ್ಲ.ಈಗಾಗಲೇ ಮುಷ್ಕರಕ್ಕೆ ಸಂಬಂಧಪಟ್ಟಂತೆ ರಾಜ್ಯದ ನಾಲ್ಕು ವಿಭಾಗಗಳಲ್ಲಿ ಸಮಾವೇಶ ಗಳನ್ನು ಮಾಡುವ ಮೂಲಕ ಮುಷ್ಕರ ಯಶಸ್ವಿಗೆ ಮುಂದಾಗಿದ್ದೇವೆ ಎಂದರು.

ಮೇ-20 ರಂದು ಬೆಳಗ್ಗೆ 6ಗಂಟೆಯಿಂದ ಸರ್ಕಾರಿ ಸಾರಿಗೆ ಬಸ್ಸುಗಳು ಓಡಾಡುವುದಿಲ್ಲ. ಈ ಮುಷ್ಕರದ ಬಗ್ಗೆ ಸರ್ಕಾರ ನಮ್ಮ ಮೇಲೆ ಎಸ್ಮಾ ಜಾರಿ ಮಾಡುತ್ತೇವೆ ಎಂದು ಎದುರಿಸುತ್ತಿದೆ.ಆದರೆ ನಾವು ಈ ರೀತಿಯಾದಂತಹ ಬೆದರಿಕೆಗೆ ಹೆದರದೇ ಮುಷ್ಕರ ನಡೆಸಲಿದ್ದೇವೆ. ಮೇ-19ರ ರಾತ್ರಿ12-00 ಗಂಟೆಯವರೆಗೂ ಸರ್ಕಾರ ನಮ್ಮ ಬೇಡಿಕೆಯ ಬಗ್ಗೆ ಸಂದಾನ ಮಾಡಿ ಲಿಖಿತವಾಗಿ ಭರವಸೆ ನೀಡಿದರೆ ಮಾತ್ರ ಮುಷ್ಕರವನ್ನು ಹಿಂಪಡೆಯಲಾಗುವುದು ಎಂದರು.

ಮೇ-19 ರಂದು ತುಮಕೂರಿನಲ್ಲಿ ನಡೆಯಲಿರುವ ಸರ್ಕಾರದ ಸಮಾವೇಶದಲ್ಲಿ ಸರ್ಕಾರಿ ಸಾರಿಗೆ ನೌಕರರು ಕಪ್ಪು ಪಟ್ಟಿ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸಲು ಮುಂದಾಗಿದ್ದೆವು ಆದರೆ ನಿಗಮದ ಆಯುಕ್ತರು ಮಾಡಿಕೊಂಡ ಮನವಿ ಮೇರೆಗೆ ಅದನ್ನು ಹಿಂಪಡೆಯಲಾಗಿದೆ. ಇದಲ್ಲದೇ ಈ ಮುಂಚೆ ಸರ್ಕಾರ ಮೇ -20ರಂದು ತುಮಕೂರಿನಲ್ಲಿ ಸಮಾವೇಶ ಮಾಡಲು ಮುಂದಾಗಿತ್ತು.. ಅದೇ ದಿನ ನಮ್ಮ ಮುಷ್ಕರ ನಿಗದಿಯಾಗಿದ್ದರಿಂದ ನಮ್ಮ ಮುಷ್ಕರಕ್ಕೆ ಹೆದರಿ ಒಂದು ದಿನ ಹಿಂದಕ್ಕೆ ನಿಗದಿಪಡಿಸಿಕೊಂಡಿದೆ ಎಂದು ಸರ್ಕಾರದ ಕ್ರಮವನ್ನು ಖಂಡಿಸಿದರು.

ಎಐಟಿಯುಸಿಯ ಕಾರ್ಯದರ್ಶಿ ಟಿ.ಆರ್.ಉಮಾಪತಿ, ಕೆಎಸ್‍ಆರ್‍ಟಿಸಿ ಚಿತ್ರದುರ್ಗ ವಿಭಾಗದ ನಿವೃತ್ತ ಸಂಘದ ಅಧ್ಯಕ್ಷರಾದ ಎ.ಕೆ.ಮಹಾದೇವ, ಕೆಎಸ್‍ಆರ್‍ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಯೂನಿಯನ್ ಚಿತ್ರದುರ್ಗ ವಿಭಾಗದ ಅಧ್ಯಕ್ಷರಾದ ಡಿ.ಆರ್ ಉಮೇಶ್, ಪ್ರಧಾನ ಕಾರ್ಯದರ್ಶಿ ಟಿ.ಅಶೋಕ್, ಎಸ್.ಸಿ. ಎಸ್.ಟಿ. ಯೂನಿಯನ್ ಕೆಎಸ್‍ಆರ್‍ಟಿಸಿ ಚಿತ್ರದುರ್ಗ ವಿಭಾಗದ ಉಪಾಧ್ಯಕ್ಷರಾದ ಮೂರ್ತಿ ನಾಯ್ಕ್, ರಾಮಾಂಜನೇಯ, ವಿಜಯಕುಮಾರ್ ಸೇರಿದಂತೆ ಇತರರ ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...