Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಾವಣಗೆರೆ ಗೆಲುವಿಗೆ ಜಮೀರ್ ಕಾರಣ : ಜಬ್ಬರ್ ಫಸ್ಟ್ ರಿಯಾಕ್ಷನ್

---Advertisement---

 

ಬೆಂಗಳೂರು: ದಾವಣಗೆರೆ ದಕ್ಷಿಣ ಮತ್ತೆ ಕಾಂಗ್ರೆಸ್ ಪಾಲಾಗಿದೆ. ಆದರೆ ಫಲಿತಾಂಶಕ್ಕೂ ಮುನ್ನ ಕಾಂಗ್ರೆಸ್ಸಿಗರಿಗೆ ಅನುಮಾನವಿದ್ದ ಕಾರಣ ಒಂದಷ್ಟು ಜನರ ತಲೆದಂಡವಾಗಿತ್ತು. ಅದರಲ್ಲಿ ಜಬ್ಬರ್ ಕೂಡ ಒಬ್ಬರು. ಅಮಾನತುಗೊಂಡ ಜಬ್ಬರ್ ಅವರು ದಾವಣಗೆರೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಕಾರ್ಯಕ್ರಮಗಳು ಏನು ಗ್ಯಾರಂಟಿ ಕಾರ್ಯಕ್ರಮಗಳು ಇದಾವೆ, ಅದು ಗೆಲ್ಲುವುದಕ್ಕೆ ಬಹಳ ಮುಖ್ಯವಾಯ್ತು. ಎರಡನೆಯದು ಜಮೀರ್ ಅಹ್ಮದ್ ಖಾನ್ ಸಾಹೇಬ್ರು ಮೂರ್ನಾಲ್ಕು ಗಂಟೆ ಅಲ್ಲಿಗೆ ಬಂದು ಹೋದ್ರಲ್ವಾ ಅದು, ರಿಯಾಕ್ಷನ್ ಇತ್ತಲ್ಲ ಅದು ತಣ್ಣಗೆ ಆಗಿದೆ ಎಂದು ಗೆಲುವಿ‌ ಕ್ರೆಡಿಟ್ ಅನ್ನು ಜಮೀರ್ ಅವರಿಗೆ ನೀಡಿದ್ದಾರೆ.

ನಮ್ಮ ಪಕ್ಷ 5 ಸಾವಿರ ಚಿಲ್ಲರೆಯಿಂದ ಗೆಲ್ಲುವುದಕ್ಕೆ ಅವಕಾಶವಾಗಿದೆ. ರಿಜ್ವಾನ್‌ನಿಂದ, ಸಲೀಂ ರಿಂದ ಎಷ್ಟು ಆಗಿದೆ ಗೊತ್ತಿಲ್ಲ. ಒಗ್ಗಟ್ಟಾಗಿ ಕೆಲಸ ಮಾಡೋದಕ್ಕೆ ನಂಗೆ ಆರೋಗ್ಯ ಸರಿ ಇರಲಿಲ್ಲ. ಎರಡನೇಯದು ನಂಗೆ ಯಾರೂ ಕೂಡ ಕರೆದಿರಲಿಲ್ಲ. ಬೇಜಾರ್ ಆದ್ಮೇಲೆ ಆರೋಗ್ಯ ಕೆಡುತ್ತೆ. ಬೇಜಾರಾದಾಗ ಶುಗರ್ ಜಾಸ್ತಿ ಆಗುತ್ತೆ, ಬಿಪಿ ಜಾಸ್ತಿ ಆಗುತ್ತೆ. ಡಿಕೆ ಶಿವಕುಮಾರ್ ಅವರಿಗೆ ಈ ಸಂಬಂಧ ಹೇಳಿದ್ದೆ. ಅವರು ಪ್ರೆಸ್ ಕಾನ್ಫರೆನ್ಸ್ ಮಾಡೋದಕ್ಕೆ ಹೇಳಿದ್ದರು. ನಾನು ಮಾಡಿದ್ದೆ ಕೂಡ ಎಂದಿದ್ದಾರೆ.

ಮುಖ್ಯಮಂತ್ರಿ ಅವರು ದೊಡ್ಡ ಮನಸ್ಸು ಮಾಡಿ ನೂರು ಕೋಟಿ ರೂಪಾಯಿಯನ್ನು ದಾವಣಗೆರೆ ದಕ್ಷಿಣಕ್ಕೆ ಕೊಟ್ಟಿದ್ದಾರೆ. ನಾನು ಗೆದ್ದಿರುವ ಅಭ್ಯರ್ಥಿಗಾಗಲಿ, ಜಿಲ್ಲಾ ಮಂತ್ರಿಗಾಗಲಿ, ಮುಖ್ಯಮಂತ್ರಿಗಳಿಗೆ ಬೇಡಿಕೊಳ್ಳುವುದು ಏನಂದ್ರೆ ನೂರು ಕೋಟಿ ಕೊಟ್ಟಿದ್ದೀರಲ್ಲ, 40-50 ವರ್ಷದಿಂದ ಬೇಡಿಕೆ ಇರುವಂತದ್ದು ಇದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಪದವಿ ಕಾಲೇಜೇ ಇಲ್ಲ ಅಲ್ಲಿ. ಸ್ವತಂತ್ರ ಸಿಕ್ಕಾಗಿನಿಂದಲೂ ಸೌಲಭ್ಯ ಇಲ್ಲ. ಆಸ್ಪತ್ರೆಗೆ ಹೋಗ್ಬೇಕು ಅಂದ್ರೆನೆ ನೂರು ಇನ್ನೂರು ಕೊಟ್ಟು ಆಟೋಗೆ ಹೋಗ್ಬೇಕು. ಗೆದ್ದಿದ್ದೀರ, ಹಣ ಬಂದಿದೆ. ನಮ್ಮಲ್ಲಿ ಜಾಗ ಇದೆ. ಅದನ್ನ ಮಾಡಿ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಉದ್ಯೋಗ ಸೃಷ್ಟಿ ಹಾಗೂ ಕೌಶಲ್ಯಾಭಿವೃದ್ಧಿಗೆ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಕೈಗಾರಿಕಾ ಸಹಭಾಗಿತ್ವದ “ಹೈಪರ್-ಆಕ್ಟಿವ್ ಇನ್ನೋವೇಷನ್ ಹಬ್”ಗಳ ನಿರ್ಮಾಣ ಅತ್ಯಗತ್ಯ

ತೆಳ್ಳಗಿದ್ದರೆ ಮಾತ್ರ ಫಿಟ್ ಎಂದರ್ಥವಲ್ಲ: ನಿಜವಾದ ಫಿಟ್‌ನೆಸ್‌ನ ಗುರುತುಗಳೇನು? ತಜ್ಞರ ಸಲಹೆ ಇಲ್ಲಿದೆ

ಕೂದಲು ಉದುರುವಿಕೆ ತಡೆದು, ದಟ್ಟವಾಗಿ ಬೆಳೆಯಲು ಈ ‘ಸೂಪರ್‌ಫುಡ್‌’ಗಳನ್ನು ನಿಮ್ಮ ಆಹಾರದಲ್ಲಿ ತಪ್ಪದೇ ಸೇರಿಸಿ!

ಚಿತ್ರದುರ್ಗ : ಮೊಳಕಾಲ್ಮೂರಿನಲ್ಲಿ ಭೀಕರ ರಸ್ತೆ ಅಪಘಾತ : ಸೇತುವೆಗೆ ಕಾರು ಡಿಕ್ಕಿಯಾಗಿ ಇಬ್ಬರು ಸಾವು!

ಮೊಬೈಲ್‌-ಸ್ಕ್ರೀನ್‌ಗೆ ಬ್ರೇಕ್ ನೀಡಿ: ಮಾನಸಿಕ ಆರೋಗ್ಯ ಕಾಪಾಡಲು ‘ಡಿಜಿಟಲ್ ಡಿಟಾಕ್ಸ್’ ಏಕೆ ಮುಖ್ಯ?

ನೀತಿ ಕಥೆ: ನಂಬಿಕೆದ್ರೋಹಕ್ಕೆ ಕ್ಷಮೆಯಿಲ್ಲ (ಯುವರಾಜ ಮತ್ತು ಕರಡಿಯ ಕಥೆ)