Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಂತ್ರಿಗಳ ಕುಟುಂಬವಿದ್ದರೂ ಮಗನ ಗೆಲುವಿಗೆ ಪರದಾಟ: ದಾವಣಗೆರೆ ದಕ್ಷಿಣದ ಬಗ್ಗೆ ಮುನಿರತ್ನ ಟೀಕೆ

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಮೇ. 05 :
ಅಪ್ಪ ಮಂತ್ರಿ, ಅಮ್ಮ ಲೋಕಸಭಾ ಸದಸ್ಯರು ಇಷ್ಠಾದರೂ ಸಹಾ ಮಗನನ್ನು ಗೆಲಿಸಲಿಕ್ಕೆ ಇನ್ನೊಬ್ಬರ ಮಂತ್ರಿಯ ಬಳಿ ಹೋಗಿ ತನ್ನ ಮಗನ ಗೆಲುವಿಗಾಗಿ ಅಂಗಲಾಚ ಬೇಕಾದ ಪರಿಸ್ಥಿತಿ ದಾವಣಗೆರೆ ದಕ್ಷಿಣದಲ್ಲಿ ಉಂಟಾಗಿತ್ತು ಎಂದು ಬೆಂಗಳೂರಿನ ರಾಜ ರಾಜೇಶ್ವರಿ ನಗರದ ಶಾಸಕರಾದ ಮುನಿರತ್ನ ಟೀಕಿಸಿದರು.

 

ಚಿತ್ರದುರ್ಗ ನಗರದಲ್ಲಿ ಮೇ 9 ರಂದು ನಡೆಯಲಿರುವ ಯಡೆಯೂರಪ್ಪರವರ ಅಭೀಮಾನೋತ್ಸವ ಸಮಾ ರಂಭದ ಪೂರ್ವಬಾವಿ ಸಿದ್ದತೆಯನ್ನು ಪರೀಶೀಸಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪಂಚ ರಾಜ್ಯ ಚುನಾವಣೆಯಲ್ಲಿ ಪ್ರಮುಖವಾಗಿ ಪಶ್ಚಿಮ ಬಂಗಾಳ ಅದು ಒಂದು ರಾಜ್ಯ ಎನ್ನುವುದಕ್ಕಿಂತ ದೇಶಕ್ಕೆ ಹಿಡಿದಂತಹ ಕೆಟ್ಟ ವ್ಯಕ್ತಿ ಕೆಟ್ಟ ಪರಿಸ್ಥಿತಿಯನ್ನು ನಿರ್ಮಾಣ ಮಾಡಲು ಹೊರಟಿದಂತಹ ತೃಣ ಮೂಲ ಕಾಂಗ್ರೆಸ್ ಅದನ್ನು ಕಿತ್ತಾಕಿರುವುದು ದೇಶಕ್ಕೆ ಇದರಿಂದ ಒಳ್ಳೇಯದಾಗಿದೆ. ಅದನ್ನು ಹೀಗೇಯೇ ಬಿಟ್ಟಿದ್ದರೆ 5-10 ವರ್ಷದಲ್ಲಿ ದೇಶದ ಅರ್ಧ ಭಾಗಕ್ಕೆ ಹಬ್ಬುತ್ತಿತ್ತು ಅದನ್ನು ಕ್ಲೀನ್ ಮಾಡಲಾಗಿದೆ. ದೇಶದ ರಕ್ಷಣೆ ನಮ್ಮ ಕರ್ತವ್ಯವಾಗಿದೆ ದೇಶದ ಗಡಿ ಆಚೆ ಇರುವವರನ್ನು ಏನು ಬೇಕಾದರ ಮಾಡಬಹುದು ಆದರೆ ದೇಶದ ಒಳಗಡೆ ಇರುವವರನ್ನು ಏನು ಮಾಡಲಾಗುವುದಿಲ್ಲ ದೇಶದ ಒಳಗಿನ ಕೀಟಗಳನ್ನು ಕ್ಲೀನ್ ಮಾಡುವುದು ತುಂಬಾ ಕಷ್ಟವಾಗಿದೆ ಇಂತಹ ಕೆಲಸವನ್ನು ನರೇಂದ್ರ ಮೋದಿ ಅಮಿತಾ ಷಾ ಸೇರಿದಂತೆ ಎಲ್ಲರು ಸೇರಿ ಇದನ್ನು ಕ್ಲೀನ್ ಮಾಡಿದ್ದಾರೆ. ಮುಂದಿನ ದಿನದಲ್ಲಿ ಪಶ್ಚಿಮ ಬಂಗಾಳಕ್ಕೆ ಉತ್ತಮ ದಿನಗಳು ಬರಲಿವೆ. ಎಂದರು.

 

ಕರ್ನಾಟಕದಲ್ಲಿ ನಡೆದ ಉಪ ಚುನಾವಣೆಯಲ್ಲಿ ಆ ರಾಜ್ಯದಲ್ಲಿ ಯಾವ ಸರ್ಕಾರ ಇರುತ್ತದ್ದೇಯೂ ಅವರು ಗೆಲುವು ಸಾಧಿಸುವುದು ಸಾಮಾನ್ಯ ಏಕೆಂದರೆ ಸರ್ಕಾರ ಮಟ್ಟದಲ್ಲಿ ಏನಾದರೂ ಕೆಲಸಗಳು ಆಗುತ್ತವೆ ಎಂದು, ಒಂದು ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಲಿಕ್ಕೆ ಮುಖ್ಯಮಂತ್ರಿಗಳು 10 ಬಾರಿ ಹಾಗೂ ಪಕ್ಷದ ಅಧ್ಯಕ್ಷರು 20 ಬಾರಿ ಹೋಗಿದ್ದಾರೆ ಅಲ್ಲದೆಸಚಿವ ಸಂಪುಟದ ಮಂತ್ರಿಗಳು ಅಲೇ ಕ್ಷೇತ್ರಗಳಲ್ಲಿ ಠೀಕಾಣಿಯನ್ನು ಹೊಡಿದ್ದರು, ಇತಿಹಾಸದಲ್ಲಿ ಇಷ್ಟು ಕಷ್ಟ ಮಟ್ಟು ಗೆದ್ದಿರುವುದು ಯಾವುದಾದರೂ ಇದ್ದರೆ ಅದು ಬಾಗಲಕೋಟೆ ಮತ್ತು ದಾವಣಗೆರೆ ದಕ್ಷೀಣವಾಗಿದೆ. ಒಂದು ಉಪ ಚುನಾವಣೆಗೆ ಮನೆ ಮಂದಿಯಲ್ಲ ಕಷ್ಟ ಪಟ್ಟಿದ್ದಾರೆ. ಕೂನೆಯ ಕ್ಷಣದಲ್ಲಿ ಸಚಿವ ಜಮೀರರವನ್ನು ಕಾಲಿಡಿದು ಕರೆದುಕೊಂಡು ಬಂದು ಗೆಲುವಂತ ಅನಿವಾರ್ಯತೆ ಎಂ.ಪಿ. ಮತ್ತು ಸಚಿವರಿಗೆ ಇರಲಿಲ್ಲ, ಸಚಿವ ಜಮೀರ ಕಾಲಿಡುಕೊಂಡು ಬೇಡಿಕೊಂಡಿದ್ದು ನಿಮಗೆ ಹೇಳಿದ್ದು ತಪ್ಪಾಗಿದೆ, ನಿಮ್ಮನ್ನು ಏಕವಚನದಲ್ಲಿ ಮಾತನಾಡಿದ್ದು ತಪ್ಪಾಗಿದೆ ನೀವು ಬಂದು ನಮ್ಮ ಪರವಾಗಿ ಮತಯಾಚನೆಯನ್ನು ಮಾಡುವಂತೆ ಕೇಳಿದಾಗ ಜಮೀರರವರನ್ನು ಸಚಿವರ ಮನೆಗೆ ಬಂದು ಉಟವನ್ನು ಮಾಡಿಕೊಂಡು ಹಾಗೇಯೇ ಹೋದರು ಎಲ್ಲಿಯೂ ಸಹಾ ಮತಯಾಚನೆ ರ್ಯಾಲಿಯನ್ನು ಮಾಡಲಿಲ್ಲ ಎಂದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...