ಚಿತ್ರದುರ್ಗ ಮೇ. 05 : ಕೇಂದ್ರ ಸರ್ಕಾರ ಕಾರ್ಮಿಕರಿಗಾಗಿ ವಿವಿಧ ರೀತಿಯ ಯೋಜನೆಗಳನ್ನು ಜಾರಿ ಮಾಡಿದೆ ಆದರೆ ಕೆಲವು ಕಾರ್ಮಿಕರಿಗೆ ಇದರ ಬಗ್ಗೆ ಅರಿವು ಇರುವುದಿಲ್ಲ ಈ ಹಿನ್ನಲೆಯಲ್ಲಿ ಸಂಘದ ಪದಾಧಿಕಾರಿಗಳು ಅವರಿಂದ ಮಾಹಿತಿಯನ್ನು ಪಡೆಯುವುದರ ಮೂಲಕ ಅರ್ಜಿಯನ್ನು ಹಾಕಿಸಿ ನನಗೆ ಪಟ್ಟಿಯನ್ನು ನೀಡಿದರೆ ನಾನು ಮಂಜೂರು ಮಾಡಿಸುತ್ತೇನೆ ಎಂದು ಮಾಜಿ ಉಪ ಮುಖ್ಯಮಂತ್ರಿಗಳು ಸಂಸದರಾದ ಗೋವಿಂದ ಕಾರಜೋಳ ಸಂಘದ ಪದಾಧಿಕಾರಿಗಳಿಗೆ ಭರವಸೆಯನ್ನು ನೀಡಿದ್ದಾರೆ.
ಚಿತ್ರದುರ್ಗ ನಗರದ ಎಸ್.ಆರ್.ಬಿ.ಎಂ.ಎಸ್ ರೋಟರಿ ಬಾಲಭವನದಲ್ಲಿ ಮಂಗಳವಾರ ಚಿತ್ರದುರ್ಗ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದವತಿಯಿಂದ ಹಮ್ಮಿಕೊಂಡಿದ್ದ 17 ನೇ ವರ್ಷದ ಕಟ್ಟಡ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸದರು, ದೇಶದಲ್ಲಿ ನರೇಂದ್ರ ಮೋದಿಯವರ ಪ್ರಧಾನ ಮಂತ್ರಿಗಳಾದ ಮೇಲೆ ಲಿಂಗಭೇಧ ಇಲ್ಲದೆ ಎಲ್ಲರಿಗೂ ಸಹಾ ವಿವಿಧ ರೀತಿಯ ಸೌಲಭ್ಯಗಳನ್ನು ನೀಡಿದ್ದಾರೆ. ಆದರೆ ಅವುಗಳನ್ನು ಪಡೆಯುವಲ್ಲಿ ಕಾರ್ಮಿಕರು ಹಿಂದೆ ಬೀಳುತ್ತಿದ್ದಾರೆ. ಇವರಿಗೆ ಸರಿಯಾದ ಮಾಹಿತಿ ಇರುವುದಿಲ್ಲ ಅರ್ಜಿಯನ್ನು ಎಲ್ಲಿ ಹಾಕಬೇಕು ಎಂಬುದು ಗೊತ್ತಿರುವುದಿಲ್ಲ, ಈ ಹಿನ್ನಲೆಯಲ್ಲಿ ಸರ್ಕಾರ ಯೋಜನೆಗಳನ್ನು ಪಡೆದವರೇ ಮತ್ತೆ ಪಡೆಯುತ್ತಿದ್ದಾರೆ ಇದರಿಂದ ಅರ್ಹರು ಯೋಜನೆಯ ಲಾಭದಿಂದ ಹೊರಗಡೆ ಉಳಿಯುತ್ತಿದ್ದಾರೆ ಎಂದು ವಿಷಾಧಿಸಿ ಇದರ ಬಗ್ಗೆ ಸಂಘದ ಪದಾಧಿಕಾರಿಗಳು ಸರಿಯಾದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸರ್ಕಾರದ ಸೌಲಭ್ಯಗಳು ಸಿಗುವಂತೆ ಮಾಡಬೇಕಿದೆ ಎಂದು ಕರೆ ನೀಡಿದರು.
ಕಟ್ಟಡ ಕಾರ್ಮಿಕರು ಕೆಲಸದ ಮೇಲೆ ಬೇರೆ ಬೇರೆ ಕಡೆಗಳಿಗೆ ಹೋಗುವ ಅನಿವಾರ್ಯತೆ ಬರುತ್ತದೆ ಈ ಸಮಯದಲ್ಲಿ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ ಈ ಹಿನ್ನಲೆಯಲ್ಲಿ ಸರ್ಕಾರದವತಿಯಿಂದ ನಿರ್ಮಾಣ ಮಾಡಲಾದ ವಸತಿನಿಲಯಗಳಲ್ಲಿ ನಿಮ್ಮ ಮಕ್ಕಳನ್ನು ಸೇರಿಸುವುದರ ಮೂಲಕ ಮಕ್ಕಳ ವಿದ್ಯಾಭ್ಯಾಸ ಸುಗಮವಾಗಿ ಸಾಗುವಂತೆ ಮಾಡಬೇಕಾದ ಹೊಣೆಗಾರಿಕೆ ಪಾಲಕರಾದ ನಿಮ್ಮ ಮೇಲೆ ಇದೆ. ನಾನು ಸಮಾಜ ಕಲ್ಯಾಣ ಮಂತ್ರಿಯಾಗಿದ್ಧಾಗ ರಾಜ್ಯದಲ್ಲಿ 200ಕ್ಕೂ ಹೆಚ್ಚು ಹಾಸ್ಟಲ್ಗಳನ್ನು ತಲಾ 25 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ, ಇದ್ದಲ್ಲದೆ ವಸತಿ ನಿಲಯಗಳನ್ನು ಸಹಾ ನಿರ್ಮಾಣ ಮಾಡಲಾಗಿದೆ ಇದರ ಸದುಪಯೋಗವನ್ನು ಪಡೆಯುವುದರ ಮೂಲಕ ನಿಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡುವಂತೆ ಕರೆ ನೀಡಿ ನಮ್ಮ ಸರ್ಕಾರದ ವಸತಿ ನಿಲಯಗಳಲ್ಲಿ ಉತ್ತಮವಾದ ಫಲಿತಾಂಶಗಳು ಬಂದಿವೆ ಎಂದು ಸಂಸದರು ತಿಳಿಸಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಾಲಚಂದ್ರ ಬಗಟಿ ಮಾತನಾಡಿ, ಸರ್ಕಾರ ಕಾರ್ಮಿಕರಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ನೀಡಿದೆ ಇವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳುವುದರ ಮೂಲಕ ನೀವು ಆರ್ಥಿಕವಾಗಿ ಸಬಲರಾಗುಬೇಕಿದೆ. ಹಗಲು ಇರುಳು ದುಡಿಯುವ ಕಾರ್ಮಿಕ ವರ್ಗದವರಿಗೆ ಸರ್ಕಾರ ವಿವಿಧ ರೀತಿಯ ಯೋಜನೆಯನ್ನು ಜಾರಿ ಮಾಡಿದೆ ಇವುಗಳ ಮಾಹಿತಿಯನ್ನು ಪಡೆಯುವುದರ ಮೂಲಕ ನಿಮ್ಮ ಸಂಘದ ಮೂಲಕವಾಗಲಿ, ವೈಯುತ್ತಿಕವಾಗಲಿ ಅರ್ಜಿಯನ್ನು ಸಲ್ಲಿಸುವುದರ ಮೂಲಕ ಸರ್ಕಾರದ ಸೌಲಭ್ಯವನ್ನು ಪಡೆಯಲು ಅರ್ಹರಾಗುತ್ತಾರೆ, ಕಾರ್ಮಿಕ ಕಾರ್ಡ ಪಡೆಯುವುದರ ಮೂಲಕ ಸರ್ಕಾರದ ಯಾವುದಾದರೂ ಯೋಜನೆ ಪಡೆಯಬೇಕಾದರೆ ಕಾರ್ಡ ಚಾಲ್ತಿಯಲ್ಲಿ ಇರಬೇಕಿದೆ ಚಾಲ್ತಿಯಲ್ಲಿ ಇಲ್ಲದ ಕಾರ್ಡಗೆ ಯಾವುದೇ ರೀತಿಯ ಸರ್ಕಾರ ಸೌಲಭ್ಯ ಸಿಗವುದಿಲ್ಲ ಎಂದು ತಿಳಿಸಿದರು.
ಸರ್ಕಾರ ಸಂಘಟಿತರಿಗೆ ಮತ್ತು ಆಸಂಘಟಿತರಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ನೀಡಿದೆ. ನಮ್ಮ ಇಲಾಖೆಯಲ್ಲಿ ವಿವಿಧ ರೀತಿಯ ಯೋಜನೆಗಳು ಇವೆ, ಇವುಗಳ ಮಾಹಿತಿಯನ್ನು ಪಡೆಯುವುದರ ಮೂಲಕ ನಿಮಗೆ ಅರ್ಹವಾದ ಯೋಜನೆಯ ಸದುಪಯೋಗವನ್ನು ಪಡೆಯಬಹುದಾಗಿದೆ, ಇಂದಿನ ದಿನಮಾನದಲ್ಲಿ ಕಾರ್ಮಿಕರಲಿಲ್ಲದೆ ಏನು ಸಹಾ ನಡೆಯುವುದಿಲ್ಲ ನಮ್ಮಲ್ಲಿ ಎಷ್ಟೇ ಯಂತ್ರಗಳು ಬಂದರೂ ಸಹಾ ಕಾರ್ಮಿಕರ ಅಗತ್ಯ ಇದ್ದೇ ಇರುತ್ತದೆ, ಕಾರ್ಮಿಕರಿಲ್ಲದೆ ನಮ್ಮ ಕೆಲಸಗಳು ಆಗುವುದಿಲ್ಲ ಈ ಹಿನ್ನಲೆಯಲ್ಲಿ ಕಾಮೀಕರಿಗಾಗಿ ಸರ್ಕಾರ ಯೋಜನೆಗಳನ್ನು ಜಾರಿ ಮಾಡಿದೆ ಅದರ ಸದುಪಯೋಗವನ್ನು ಪಡೆಯುವಂತೆ ಅನಿಲ್ ಬಿ.ಬಗಟಿ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಚಿತ್ರದುರ್ಗ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರಾದ ವೈ.ತಿಪ್ಪೇಸ್ವಾಮಿ ಮಾತನಾಡಿ, ಸರ್ಕಾರ ಕಾರ್ಮಿಕರಿಗೆ ತುಂಬಾ ಅನ್ಯಾಯವನ್ನು ಮಾಡುತ್ತಿದೆ, ಮಕ್ಕಳ ಶಿಕ್ಷಣಕ್ಕಾಗಿ ನೀಡುತ್ತಿದ್ದ ಶಿಷ್ಯ ವೃತನದಲ್ಲಿ ಕಡಿತವನ್ನು ಮಾಡಲಾಗಿದೆ, ನಮ್ಮ ಕಾರ್ಮಿಕ ಮಂಡಳಿಯಲ್ಲಿ ಹೇರಳವಾಗಿ ಹಣ ಇತ್ತು ಆದರೆ ಇದನ್ನು ಇಂದಿನ ಸರ್ಕಾರ ದುರಪಯೋಗವನ್ನು ಮಾಡಿಕೊಂಡಿದೆ. ನಮೆಗ ನೀಡುವ ಸೌಲಭ್ಯಗಳಲ್ಲಿ ವಂಚನೆ ಮಾಡಲಾಗುತ್ತಿದೆ ಇದರ ಬಗ್ಗೆ ಹಲವಾರು ಬಾರಿ ಪ್ರತಿಭಟನೆ, ಹೋರಾಟವನ್ನು ಮಾಡಿದರೆ ಸಹಾ ಸರ್ಕಾರ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ದೂರಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಎಸ್.ಮಹೇಶ್ವರಪ್ಪ, ಆರ್ಕಿಟೆಕ್ಟರ್ ಸಿವಿಲ್ ಇಂಜಿನಿಯರ್ ಅಸೋಸಿಯೇಷನ್ ಅಧ್ಯಕ್ಷರಾದ ಎಸ್.ಎಸ್.ಪ್ರಸಾದ್, ಚಿತ್ರದುರ್ಗ ಜಿಲ್ಲಾ ಸ್ಟೀಲ್ ವೆಲ್ಟಿಂಗ್ ಇಂಡಸ್ಟ್ರೀಲ್ಸ್ ಕಾರ್ಮಿಕದ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಗೌರವಾಧ್ಯಕ್ಷರಾದ ಹಾಲೇಶಪ್ಪ, ನ್ಯಾಯವಾದಿಗಳಾದ ಜಗದೀಶ್ ಗುಂಡೇರಿ, ಶಿವಮೂರ್ತಿ, ದ್ವಿಚಕ್ರ ವಾಹನ ಮೆಕಾನಿಕ್ ಸಂಘದ ಉಪಾಧ್ಯಕ್ಷರಾಧ ಅಣ್ಣೇಶ್, ಅಂಜಿನಪ್ಪ ಭಾಗವಹಿಸಿದ್ದರು.







