ದಾವಣಗೆರೆ: ದಕ್ಷಿಣ ಕ್ಷೇತ್ರ ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದೆ. ಆರಂಭದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಶಾಮನೂರು ಕುಟುಂಬದ ಕುಡಿ ಸಮರ್ಥ್ ನಂತರದಲ್ಲಿ ಹಿನ್ನಡೆಯಾಗಿದ್ದರು. ಇದೀಗ ಮತ್ತೆ ಮುನ್ನಡೆ ಕಾಯ್ದುಕೊಂಡಿದ್ದರು. ಇದೀಗ ಏಳನೇ ಸುತ್ತಿನ ಮತ ಎಣಿಕೆ ನಡೆಯುತ್ತಿದ್ದು, ಮತ್ತೆ ಬಿಜೆಪಿ ಮುನ್ನಲೆಗೆ ಬಂದಿತ್ತು. ಇದೀಗ ಎಂಟನೇ ಸುತ್ತಿನಲ್ಲಿ ಸಮರ್ಥ್ ಮುನ್ನಡೆ ಸಾಧಿಸಿದ್ದಾರಡ.
ಶ್ರೀನಿವಾಸ್ ದಾಸಕರಿಯಪ್ಪ ಅವರು ಏಳನೇ ಸುತ್ತಿನವರೆಗೂ ಒಂದು ಹಂತಕ್ಕೆ ಮುನ್ನಡೆ ಸಾಧಿಸಿದ್ದರು. ಸಮರ್ಥ್ ಶಾಮನೂರು 26,878 ಮತಗಳನ್ನು ಗಳಿಸಿ ಸಾವಿರ ಮತಗಳ ಅಂತರದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರು 25,878 ಮತಗಳನ್ನ ಪಡೆದಿದ್ದಾರೆ.









