Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನ ಇನ್ನು ಅನರ್ಹ ಯಾಕ್ ಆಗಿಲ್ಲ : ಪರಮೇಶ್ವರ್ ಹೇಳಿದ್ದೇನು..?

---Advertisement---

ಬೆಂಗಳೂರು: ಶಾಸಕ ವಿನಯ್ ಕುಲಕರ್ಣಿ ಅಪರಾಧಿ ಸ್ಥಾನದಲ್ಲಿದ್ದು, ಈಗಾಗಲೇ ಜೀವಾವಧಿ ಶಿಕ್ಷೆಗೂ ಗುರಿಯಾಗಿದ್ದಾರೆ. ಯಾರೇ ಶಾಸಕರಾದರೂ, ಸಚಿವರಾದರೂ ಎರಡು ವರ್ಷಕ್ಕಿಂತ ಮೇಲ್ಪಟ್ಟು ಶಿಕ್ಷೆಗೆ ಗುರಿಯಾದರೆ ಅವರ ಸ್ಥಾನ ಅನರ್ಹಗೊಳ್ಳುತ್ತದೆ. ಆದರೆ ಶಾಸಕ ವಿನಯ್ ಕುಲಕರ್ಣಿ ವಿಷಯದಲ್ಲಿ ರಾಜ್ಯಪಾಲರು ಇನ್ನು ಆ ನಿರ್ಧಾರ ತೆಗೆದುಕೊಂಡಿಲ್ಲ. ಇದರ ಬಗ್ಗೆ ಗೃಹ ಸಚಿವ ಪರಮೇಶ್ವರ್ ಅವರು ಹೇಳಿದ್ದು ಹೀಗೆ.

ಅದು ಪ್ರೊಸೂಜರ್. ಸ್ಪೀಕರ್ ಹಾಗೂ ರಾಜ್ಯಪಾಲರಿಗೆ ಬಿಟ್ಟಿರುವುದು. ಕಾನೂನು ವ್ಯವಸ್ಥೆಯಲ್ಲಿ ಯಾವ ರೀತಿ ಮಾಡಬೇಕು ಅದನ್ನು ನಿಯಮಾನುಸಾರ ಮಾಡ್ತಾರೆ. ಒಂದು ದಿನ ತಡವಾಗಬಹುದು, ಎರಡು ದಿನ ತಡವಾಗಬಹುದು. ಅದನ್ನ ಯಾರು ಕೂಡ ಉಲ್ಲಂಘನೆ ಮಾಡುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ.

ಹುದ್ದೆಗಳ ನೇಮಕಾತಿ ಬಗ್ಗೆ ಮಾತನ್ನಾಡಿ, ನಾವೂ 56 ಸಾವಿರ ಹುದ್ದೆಗಳ ನೇಮಕಾತಿ ಮಾಡಬೇಕು ಅಂತ ಇದ್ದಾರೆ. ಈ ಅಧಿಸೂಚನೆಯಾದ ನಂತರವೆ ನೋಟಿಫಿಕೇಷನ್ಸ್ ಗಳನ್ನು ಎಲ್ಲಾ ಇಲಾಖೆಗಳು ಮಾಡುತ್ತವೆ. ತೀರ್ಮಾನ ಆಗಿದೆ, ತೀರ್ಮಾನಕ್ಕೆ ತಕ್ಕ ಹಾಗೇ ಅಧಿಸೂಚನೆಯನ್ನು ಮಾಡಿದ್ದಾರೆ. ನಮ್ಮ ಇಲಾಖೆಯಲ್ಲಿಯೇ 8 ಸಾವಿರ ಸಿಬ್ಬಂದಿ ನೇಮಕಾತಿ ಮಾಡುವುದಕ್ಕೆ ಪ್ರಸ್ತಾವನೆ ಇದೆ.‌

ಈಗ ನಾವೂ ಕೂಡ ತಕ್ಷಣಕ್ಕೆ ನೋಟಿಫಿಕೇಷನ್ ಮಾಡ್ತೇವೆ.‌ ಹಣಕಾಸು ಇಲಾಖೆ ಅವರು ಮಾರ್ಗದರ್ಶನ ನೀಡಿದ್ದಾರೆ. ತಕ್ಷಣವೇ ನೋಟಿಫಿಕೇಷನ್ ಮಾಡುತ್ತೇವೆ ಎಂಬ ಮಾತನ್ನ ಹೇಳಿದ್ದಾರೆ. ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿಗಾಗಿ ಕಾಯ್ತಾ ಇರುವವರು ಒಬ್ಬರಿಬ್ಬರಲ್ಲ. ಲಕ್ಷಾಂತರ ಮಂದಿ ಪರೀಕ್ಷೆಯನ್ನು ಬರೆದು ನೇಮಕಾತಿ ನೊಟಿಫಿಕೇಷನ್ ಗೆ ಕಾಯ್ತಿದ್ದಾರೆ. ಪರಮೇಶ್ವರ್ ಅವರು ಹೇಳಿದಂತೆ ಆದಷ್ಟು ಬೇಗ ನೋಟಿಫಿಕೇಷನ್ ಹೊರಡಿಸಿದರೆ ಅಭ್ಯರ್ಥಿಗಳಿಗೂ ಖುಷಿಯಾಗಲಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...