Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಾಂಸ್ಕೃತಿಕ ಮೌಲ್ಯಗಳಿಂದ ಸಮಾಜದ ಪುನರ್ ನಿರ್ಮಾಣ ಅಗತ್ಯ: ಡಾ. ಬಿ.ಎಂ. ಗುರುನಾಥ

---Advertisement---

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 25 : ಸಾಂಸ್ಕøತಿಕವಾಗಿ ಅಧಃಪತನಕ್ಕೆ ಹೋಗಿರುವ ಪ್ರಸ್ತುತ ದಿನಗಳಲ್ಲಿ ಕುಟುಂಬ, ಸಮಾಜವನ್ನು ಸರಿದಾರಿಗೆ ತೆಗೆದುಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ ತಿಳಿಸಿದರು.

 

ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಆದರ್ಶ ಯುವಕ/ಯುವತಿ ಸಂಘ(ರಿ) ಹಿಂದುಳಿದ ವರ್ಗಗಳ ಇಲಾಖೆ ಸಹಯೋಗದೊಂದಿಗೆ ತುರುವನೂರು ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ಬಾಲಕಿಯರ ವಸತಿ ನಿಲಯದಲ್ಲಿ ಏರ್ಪಡಿಸಲಾಗಿದ್ದ ಸಾಂಸ್ಕøತಿಕ ಸಂಭ್ರಮ-2026 ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

 

ಮಕ್ಕಳಿಗೆ ಸಾಂಸ್ಕøತಿಕ ಸಂಭ್ರಮ ಮುಖ್ಯ. ಪಠ್ಯೇತರ ಭಾಗವಾಗಿ ಇಂತಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದರಿಂದ ಮನಸ್ಸಿಗೆ ಉಲ್ಲಾಸವೆನಿಸುತ್ತದೆ. ಮನುಷ್ಯ ನೈತಿಕತೆ, ವಿವೇಕವಂತನಾಗಿ ಮೌಲ್ಯಯುತ ಬದುಕನ್ನು ಕಟ್ಟಿಕೊಳ್ಳಬೇಕಾದರೆ ಕಲೆ ಬೇಕು. ಕಲಾವಿದರನ್ನು ಪ್ರೋತ್ಸಾಹಿಸಿದರೆ ಪ್ರತಿಭೆಯನ್ನು ಗುರುತಿಸಿ ನಾಡು ದೇಶವನ್ನು ಕಟ್ಟಬಹುದು ಎಂದು ಹೇಳಿದರು.

 

ಸಂಸ್ಕøತಿ ಎಂದರೆ ಬದುಕು. ಸಾಂಸ್ಕøತಿಕ ಕಲೆಯಿಂದ ಸಮಾಜಕ್ಕೆ ವಿವೇಕ ಹೇಳುವ ಪ್ರಜ್ಞೆ ಮೂಡುತ್ತದೆ. ಪರಂಪರೆ ಜೊತೆ ಪಿಸು ಮಾತುಗಳನ್ನಿಟ್ಟುಕೊಳ್ಳಬೇಕು. ಧರ್ಮ ಜಾತಿ, ಲಿಂಗದ ನಡುವೆ ತಾರತಮ್ಯವಾಗುತ್ತಿದೆ. ಯುದ್ದ ಜೀವಗಳನ್ನು ಬಲಿ ತೆಗೆದುಕೊಂಡು ದೇಶವನ್ನು ಸುಡುತ್ತದೆ. ಸ್ವಾರ್ಥ, ಅಹಂಕಾರ, ಪ್ರತಿಷ್ಟೆಯನ್ನು ಹೋಗಲಾಡಿಸಬೇಕಾದರೆ ಇಂತಹ ಸಾಂಸ್ಕøತಿಕ ಸಂಭ್ರಮಗಳ ಅವಶ್ಯಕತೆಯಿದೆ. ಸಂಗೀತ, ಧ್ಯಾನ ತಪಸ್ಸಿಂದತೆ, ಪ್ರತಿಯೊಬ್ಬರು ಕ್ಷೋಭೆಗಳಲ್ಲಿ ಬದುಕುವಂತಾಗಿದೆ. ಕಲೆಯನ್ನು ಅನೌಪಚಾರಿಕವಾಗಿ ಕಲಿಯುವುದರಿಂದ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸಿಕೊಳ್ಳಬಹುದು. ಸಾಂಸ್ಕøತಿಕ ವಾತಾವರಣ ಕ್ಷಮಾ ಗುಣವನ್ನು ಕಲಿಸುತ್ತದೆ. ವಿದ್ಯಾರ್ಥಿಗಳು ಕೇವಲ ಅಂಕಪಟ್ಟಿಗಳಿಗಷ್ಟೆ ಓದುವುದಕ್ಕೆ ಸೀಮಿತವಾಗುವುದು ಸರಿಯಲ್ಲ. ಪಠ್ಯೇತರ ಚಟುವಟಿಕೆಗಳ ಕಡೆಗೂ ಆಸಕ್ತಿಯಿಟ್ಟುಕೊಳ್ಳುವಂತೆ ಸಲಹೆ ನೀಡಿದರು.

 

ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೈ.ರವಿಕುಮಾರ್ ಹಾರ್ಮೊನಿಯಂ ನುಡಿಸುವ ಮೂಲಕ ಸಂಗೀತ ಸಂಭ್ರಮ ಉದ್ಘಾಟಿಸಿ ಮಾತನಾಡುತ್ತ ಒತ್ತಡದ ಜೀವನದಲ್ಲಿ ಇಂತಹ ಮನರಂಜನೆ ಕಾರ್ಯಕ್ರಮಗಳು ಮನಸ್ಸಿಗೆ ತುಸು ಮುದ ನೀಡುತ್ತವೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಒಂದೊಂದು ಅಂಕಗಳಿಗೂ ಪ್ರಾಮುಖ್ಯತೆಯಿರುವುದರಿಂದ ಶಿಕ್ಷಣದ ಕಡೆ ಹೆಚ್ಚಿನ ಗಮನ ಕೊಡಬೇಕು. ಪಠ್ಯೇತರ ಭಾಗವಾಗಿ ಇಂತಹ ಸಂಭ್ರಮಗಳಲ್ಲಿ ಭಾಗವಹಿಸಬೇಕು. ಉಳಿದಂತೆ ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡುವಂತೆ ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.

 

ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಉಪ ಸಭಾಪತಿ ಇ.ಅರುಣ್‍ಕುಮಾರ್, ಮಹಿಳಾ ಪೊಲೀಸ್ ಠಾಣೆ ಸಬ್‍ಇನ್ಸ್‍ಪೆಕ್ಟರ್ ಯಶೋಧಮ್ಮ, ಹಿಂದುಳಿದ ವರ್ಗಗಳ ವಸತಿ ನಿಲಯದ ಮೇಲ್ವಿಚಾರಕಿಯರಾದ ಲಕ್ಷ್ಮಿದೇವಿ, ದೀಪಾರಾಣಿ, ಸಕೀನಾಬಿ, ಜಿಲ್ಲಾ ಯುವ ಪ್ರಶಸ್ತಿ ಪುರಸ್ಕøತೆ ಓಂಕಾರಮ್ಮ ಶ್ರೀನಿವಾಸ್, ಎಸ್.ಜೆ.ಎಂ. ಚಿತ್ರಕಲಾ ಕಾಲೇಜಿನ ಪ್ರಾಚಾರ್ಯರಾದ ಸಿ.ಕಣ್ಮೇಶ್ ಇವರುಗಳು ವೇದಿಕೆಯಲ್ಲಿದ್ದರು.

ಎಂ.ಕೆ.ಹರೀಶ್ ಮತ್ತು ತಂಡ, ಕೆ.ಗಂಗಾಧರ್, ಹಿಮಂತರಾಜ್, ಜಗದೀಶ್ ಮತ್ತು ಸಂಗಡಿಗರು ಜಾನಪದ ಗೀತೆ, ಚಿತ್ರಗೀತೆ, ಭಾವಗೀತೆಗಳನ್ನು ಹಾಡಿ ವಿದ್ಯಾರ್ಥಿನಿಯರನ್ನು ರಂಜಿಸಿದರು. ಚನ್ನಬಸಪ್ಪ ಹಾರ್ಮೋನಿಯಂ ನುಡಿಸಿದರು. ಯಲ್ಲಪ್ಪ ಐಹೊಳೆ ಮತ್ತು ತಂಡದವರು ತಮಟೆ ಬಾರಿಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...