ಬೆಂಗಳೂರು: ಸಚಿವ ಸುಧಾಕರ್ ಅವರ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದು, ಚಿಕಿತ್ಸೆ ಮುಂದುವರೆದಿದೆ. ಇಂದು ಸಿಎಂ ಸಿದ್ದರಾಮಯ್ಯ ಅವರು ಕೂಡ ಸುಧಾಕರ್ ಅವರನ್ನು ನೋಡಲು ಆಸ್ಪತ್ರೆಗೆ ಬಂದು, ಆರೋಗ್ಯ ವಿಚಾರಿಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕೃಷ್ಣ ಆರೋಗ್ಯ ವಿಜ್ಞಾನ ಸಂಸ್ಥೆಗೆ (kims) ನಲ್ಲಿ ಸುಧಾಕರ್ ಅವರನ್ನು ಅಡ್ಮಿಟ್ ಮಾಡಲಾಗಿದೆ. ಇಲ್ಲಿಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿ ಸಚಿವ ಸುಧಾಕರ್ ಅವರ ಆರೋಗ್ಯ ವಿಚಾರಿಸಿದರು.
ಸಚಿವರಿಗೆ ನೀಡುತ್ತಿರುವ ಚಿಕಿತ್ಸೆ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದ ಮುಖ್ಯಮಂತ್ರಿಗಳು ಸಚಿವರ ಕುಟುಂಬದವರೊಂದಿಗೂ ಮಾತನಾಡಿದರು. ಇವರ ಜೊತೆಗೆ ಸಚಿವರಾದ ಜಮೀರ್ ಅಹಮದ್ ಖಾನ್, ಬೈರತಿ ಸುರೇಶ್, ವಿಧಾನಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ, ಮಾಯಕೊಂಡ ಶಾಸಕ ಬಸವಂತಪ್ಪ ಹಾಜರಿದ್ದರು.
ಬಳಿಕ ಸುಧಾಕರ್ ಅವರ ಆರೋಗ್ಯದ ಬಗ್ಗೆ ಮಾತನ್ನಾಡಿದ ಸಿಎಂ ಸಿದ್ದರಾಮಯ್ಯ ಅವರು, ಈ ಬಗ್ಗೆ ನಾಳೆ ತೀರ್ಮಾನ ಮಾಡ್ತಾರೆ. ಯಾಕಂದ್ರೆ ಲಂಗ್ಸ್ ಟ್ರಾನ್ಸ್ ಪ್ಲೆಂಟೇಷನ್ ಮಾಡಬೇಕಾದ್ರೆ ಎಚ್ಚರ ಆಗ್ಬೇಕಲ್ಲ. ವೆಂಟಿಲೇಟರ್ ನಲ್ಲೇ ಇದಾರೆ. ಬೇರೆ ಅಂಗಾಂಗಗಳು ಚೆನ್ನಾಗಿದಾವೆ ಎಂಬ ವರದಿ ಬಂದಿದೆ. ಬ್ರೈನ್ ಇನ್ನು ಕಾನ್ಶಿಷಸ್ ಬಂದಿಲ್ಲ. ಸಿಟಿ ಸ್ಕ್ಯಾನ್ ಮಾಡಿದ ಮೇಲೆ ಸಮಸ್ಯೆ ಏನು ಅಂತ ಗೊತ್ತಾಗುತ್ತೆ. ಆಮೇಲೆ ವೈದ್ಯರು ನಿರ್ಧಾರ ಮಾಡ್ತಾರೆ ಎಂದಿದ್ದಾರೆ.


















