Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಎಸ್ಸಿ ಒಳಮೀಸಲಾತಿ ಆಯ್ತು.. ಈಗ ಎಸ್ಟಿ ಸಮುದಾಯದವರ ಬೇಡಿಕೆಗೆ ಏನಂದ್ರು ಪ್ರಿಯಾಂಕ್ ಖರ್ಗೆ..?

---Advertisement---

ಬೆಂಗಳೂರು: ಒಳಮೀಸಲಾತಿ ಸಂಬಂಧ ಬಹಳ ಸ್ಪಷ್ಟವಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಇದನ್ನ ಸರಿ ಮಾಡಿದ್ದೀವಿ. ನಮ್ಮ ಒಂದು ಪ್ರಾಮಾಣಿಕ ಪ್ರಯತ್ನ, ಸಾಮಾಜಿಕ ನ್ಯಾಯದ ಪರವಾಗಿದೆ. ಯುವಕರ ಒಂದು ಭವಿಷ್ಯ ಕಟ್ಟುವ ನಿಟ್ಟಿನಲ್ಲಿ ಇದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ನೋಟಿಫಿಕೇಶನ್ ಕೂಡ ಇನ್ನೆರಡು ದಿನದಲ್ಲಿ ಹೊರಡಿಸುತ್ತೇವೆ. ನಮ್ಮ ಮನವಿ ಅಂದ್ರೆ, ಯುವಕರು ಆ ನೋಟಿಫಿಕೇಷನ್ ಕಡೆ ಸರಿಯಾಗಿ ಗಮನ ಕೊಡಿ. ನಿಮ್ಮ ಧ್ವನಿ ಏನಿದೆ, ಸರ್ಕಾರಕ್ಕೆ ಮುಟ್ಟಿದೆ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸೋದಕ್ಕೆ ಸರ್ಕಾರ ಯಾವಾಗ್ಲೂ ಸಿದ್ಧವಾಗಿದೆ ಎಂದಿದ್ದಾರೆ.

ಇನ್ನು ಎಸ್ಸಿ ಸಮುದಾಯದ ಒಳ ಮೀಸಲಾತಿ ಬಂದ್ಮೇಲೆ ಎಸ್ಟಿ ಸಮುದಾಯದವರು ಕೂಡ ಮೀಸಲಾತಿಯನ್ನ ಕೇಳ್ತಾ ಇದ್ದಾರೆ. ಈ ಬಗ್ಗೆ ಪ್ರಿಯಾಂಕ್ ಖರ್ಗೆ ಮಾತನ್ನಾಡಿ, ಇದನ್ನು ಕೂಡ ಸರ್ಕಾರ ನಿನ್ನೆ ಬಹಳ ಸ್ಪಷ್ಟವಾಗಿ ಹೇಳಿದೆ. ನಾವೂ 24% ರಿಸರ್ವೇಷನ್ ಕಮಿಟ್ ಆಗಿದ್ದೇವೆ. ಈಗ ಅದನ್ನ 6% ಬ್ಯಾಕ್ ಲಾಗ್ ಅಂತ ಇಡುತ್ತಾ ಇದ್ದೀವಲ್ಲ. ಅದನ್ನು ಸ್ಪಷ್ಟವಾಗಿ ಹೇಳ್ತಾ ಇದ್ದೀವಿ. ಕೋರ್ಟ್ ನಿರ್ಧಾರ ತೆಗೆದುಕೊಂಡ ತಕ್ಷಣ ನಿರ್ದೇಶನ ಏನು ಕೊಡುತ್ತೆ ಅದರ ಪ್ರಕಾರ ನಡೆದುಕೊಳ್ಳುತ್ತೇವೆ ಎಂದಿದ್ದಾರೆ.

ಇನ್ನು ಸರ್ಕಾರ ಬೀಸೋ ದೊಣ್ಣೆಯಿಂದ ಪಾರಾಗಿದೆ. ಜನರಿಗೆ ವಂಚನೆ ಮಾಡಿದೆ ಅಂತ ಬಿಜೆಪಿ ನಾಯಕ ಛಲವಾ್ಇ ನಾರಾಯಣಸ್ವಾಮಿ ಅವರು ಹೇಳಿದ ಮಾತಿಗೆ, ಆಯ್ತು ಪ್ರತಿಭಟನೆ ಮಾಡೋದಕ್ಕೆ ಹೇಳ್ರೀ ಛಲವಾದಿಗೆ. ಇವರ ಸರ್ಕಾರದಲ್ಲಿ ವಿಧಾನಸೌಧವನ್ನ ವ್ಯಾಪಾರ ಸೌಧ ಮಾಡಿದ್ರು. ಪಿಎಸ್ಐ ಹಗರಣ ಎಲ್ಲಾ ಆದಾಗ ಬಾಯಿಗೆ ಬೀಗ ಬಿದ್ದಿತ್ತಾ. ಅವಾಗೆಲ್ಲಾ ಯಾಕೆ ಏನು ಮಾಡಿಲ್ಲ ಇವರು. ಯುವಕರ ಭವಿಷ್ಯವನ್ನು ಇವರು ಮಾರಾಟಕ್ಕೆ ಇಟ್ಟಿದ್ದಕ್ಕೆ ತಾನೇ ಇವತ್ತು ಅವರನ್ನ ವಿರೋಧ ಪಕ್ಷದಲ್ಲಿ ಕೂರಿಸಿರೋದು ಅಂತ ಗರಂ ಆಗಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...