ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಹ್ಯಾರಿಸ್ ಗೆ ಇಡಿ ಬಿಗ್ ಶಾಕ್ ನೀಡಿದೆ. ಹ್ಯಾರಿಸ್ ಅವರ ಬೆಂಗಳೂರಿನ ಮನೆ ಮೇಲೆ ಇಡಿ ದಾಳಿ ನಡೆಸಿದೆ. ಅಶೋಕನಗರದಲ್ಲಿರುವ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ಮಡೆಸಿದ್ದಾರೆ. ಬೆಂಗಳೂರು ಸೇರಿ, ಇತರೆ 12 ಸ್ಥಳದಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಿಗಿ ಭದ್ರತೆಯೊಂದಿಗೆ ಪರಿಶೀಲನೆ ನಡೆಸುತ್ತಾ ಇದ್ದಾರೆ.
ನಾಲ್ಕು ವಾಹನಗಳಲ್ಲಿ ಇಡಿ ಅಧಿಕಾರಿಗಳು ಬಂದಿದ್ದು, ಬೆಳಗ್ಗೆಯೇ ಅಧಿಕಾರಿಗಳು ದಿಢೀರ್ ಎಂದು ಬಂದಿದ್ದಾರೆ. ಅಧಿಕಾರಿಗಳು ಬಂದಾಗ ಹ್ಯಾರೀಸ್ ಅವರು ಮನೆಯಲ್ಲಿಯೇ ಇದ್ದರು. ಇಂಚಿಂಚು ಶೋಧನೆ ನಡೆಸುತ್ತಿರುವ ಅಧಿಕಾರಿಗಳು ನಲಪಾಡ್ ಗೆ ಸಂಬಂಧಿಸಿದ ನಿವಾಸಗಳಲ್ಲೂ ಪರಿಶೀಲನೆ ನಡೆಸಲಾಗುತ್ತಿದೆ. ಹ್ಯಾರೀಸ್ ಅವರ ನಿವಾಸ, ನಲಪಾಡ್ ನಿವಾಸ, ಉಮರ್ ನಲಪಾಡ್ ಕಚೇರಿಯಲ್ಲೂ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಹ್ಯಾರೀಸ್ ಅವರಿಗೆ ಸೇರಿದ ಕಚೇರಿಯಲ್ಲೂ ಪರಿಶೀಲನೆ ನಡೆಸಿದ್ದಾರೆ.
2020ರಲ್ಲಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಟ ಮೇಲೆ ಎಫ್ಐಆರ್ ಆಗಿತ್ತು. ಈ ಪ್ರಕರಣದ ತನಿಖೆಯನ್ನ ಸರ್ಕಾರ ಎಸ್ಐಟಿಗೆ ವಹಿಸಿತ್ತು. ಅಶೋಕನಗರ ಠಾಣೆಯಲ್ಲಿ ಯಶೋಧಾ ದೇವಿ ದೂರು ನೀಡಿದ್ದರು. ಶ್ರೀಕಿ, ರಾಬಿನ್ ಖಂಡೆರಲ್ವಾಲ, ಅಜಿತ್ ಖಂಡರೆಲ್ವಾಲ ವಿರುದ್ಧ ದೂರು ದಾಖಲಿಸಿದ್ದರು. 28 ಲಕ್ಷ ಹೂಡಿಕೆ ಮಾಡಿದರೆ, 45 ಲಕ್ಷ ಬರುತ್ತೆ ಎಂದಿದ್ದರು. ಆರೋಪಿಗಳ ಮಾತು ನಂಬಿ, ಹೂಡಿಕೆ ಮಾಡಲಾಗಿತ್ತು. ಯಶೋಧಾಗೆ ಹಣ ನೀಡದೆ ವಂಚನೆ ಮಾಡಿದ್ದರು. ಆ ಗ್ಯಾಂಗ್ ನಲ್ಲಿ ನಲಪಾಡ್ ಹೆಸರು ಕೂಡ ಕೇಳಿ ಬಂದಿತ್ತು. ಓಮರ್ ನಲಪಾಡ್ ಕ್ಲಾಸ್ ಮೇಟ್ ಆಗಿದ್ದ ಶ್ರೀಕಿ. ಬಿಟ್ ಕಾಯಿನ್ ಹ್ಯಾಕ್ ಮಾಡಿ ಬಾಂಬೆ ವ್ಯಕ್ತಿಗೆ ಜಮೆ ಮಾಡಲಾಗಿತ್ತು. ಬಾಂಬೆ ವ್ಯಕ್ತಿಯಿಂದ ನಲಪಾಡ್ ಅಕೌಂಟ್ ಗೆ 10 ಲಕ್ಷ ಜಮೆಯಾಗಿತ್ತು. ಆ ಸಂಬಂಧ ಎಸ್ಐಟಿ ತನಿಖೆ ನಡೆಸಿತ್ತು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











