Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬೇಲಿಯೇ ಎದ್ದು ಹೊಲ ಮೇಯ್ದಂಗ್ ಆಯ್ತು ಈ DCRE ಕಚೇರಿಯ ಕಥೆ..!

---Advertisement---

ಬೆಂಗಳೂರು: ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲೆ ಏನೇ ದೌರ್ಜನ್ಯ ಆದ್ರೂ ಕೂಡ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದಲ್ಲಿ ಕೇಸ್ ದಾಖಲಿಸಿದರೆ ಅವರಿಗೆ ನ್ಯಾಯ‌ ಕೊಡಿಸುವ ಕೆಲಸವಾಗುತ್ತೆ. ಆದರೆ ಅಲ್ಲಿನೆ ಎಸ್ಸಿ/ಎಸ್ಟಿ ಸಮುದಾಯದವರಿಗೆ ಅನ್ಯಾಯವಾದರೆ ಕೇಳೋದು ಯಾರು. ಅಂಥದ್ದೊಂದು ಘಟನೆ ಡಿಸಿಆರ್ಸಿ ಅಧಿಕಾರಿಗಳಿಂದ ನಡೆದಿದೆ. ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದಲ್ಲಿಯೇ ಮೇಲ್ಜಾತಿ ಅಧಿಕಾರಿಗಳಿಂದ ದಲಿತ ಅಧಿಕಾರಿಗೆ ಕಿರುಕುಳ ಆರೋಪ ಕೇಳಿ ಬಂದಿದೆ.

ಪಶ್ಚಿಮ ವಲಯ DCRE ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀನಿವಾಸ್ ನೇರವಾಗಿ DCRE ಡಿಜಿ ಉಮೇಶ್ ಕುಮಾರ್ ಅವರಿಗೆ ದೂರು ಸಲ್ಲಿಕೆ ಮಾಡಿದ್ದಾರೆ. ಅಷ್ಟಲ್ಲದೆ ಈ ಬಗ್ಗೆ ಶ್ರೀನಿವಾಸ್ ವಿಡಿಯೋ ಕೂಡ ಮಾಡಿದ್ದು, ಮೇಲ್ವರ್ಗದ ಆರೋಪಿಗಳ ಪರವಾಗಿ ಕೆಲಸ ಮಾಡುವಂತೆ ಕಿರುಕುಳ ನೀಡಲಾಗ್ತಿದೆ. ಅಷ್ಟೇ ಅಲ್ಲದೆ ಈ ಬಗ್ಗೆ ಶ್ರೀನಿವಾಸ್ ವಿಡಿಯೋ ಕೂಡ ಮಾಡಿದ್ದಾರೆ.

ಮೇಲ್ವರ್ಗದ ಆರೋಪಿಗಳ ಪರವಾಗಿ ಕೆಲಸ ಮಾಡುವಂತೆ ಕಿರುಕುಳ ನೀಡಲಾಗ್ತಿದೆ. ಎಸ್ಪಿ ಕರಿಬಸನಗೌಡ ನಿರ್ದೇಶನದಂತೆ ಕೆಲ ಕೇಸ್ ಗಳಲ್ಲಿ ಮೇಲ್ಜಾತಿ ಆರೋಪಿಗಳ ಪರ ಅಂತಿಮ ವರದಿ ಸಲ್ಲಿಸಲು ಡಿವೈಎಸ್ಪಿ ಒತ್ತಡ ಹಾಕುತ್ತಿದ್ದರು. ಈ ವೇಳೆ ವಲಯ SP ಅವರಿಂದ ನಿರ್ದೇಶನ ಕೊಡಿಸುವಂತೆ ಹೇಳಿದ್ದ ಕಾರಣ ಅಂದಿನಿಂದ Dysp ಮತ್ತು SP ಕರಿಬಸನಗೌಡ ಕಿರುಕುಳ ನೀಡುತ್ತಿದ್ದಾರೆ. ದೂರುದಾರರಿಂದ ತನ್ನ ವಿರುದ್ಧ ಸುಳ್ಳು ಪಿಟಿಷನ್ ಪಡೆದು ತನಿಖೆ ಹೆಸರಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇನ್ನು ಕಳೆದ ತಿಂಗಳು ಶ್ರೀನಿವಾಸ್​​ರನ್ನ ವರ್ಗಾವಣೆ ಮಾಡಲಾಗಿತ್ತು. ಆದರೆ KATನಲ್ಲಿ ಅದಕ್ಕೆ ಅವರು ಸ್ಟೇ ತಂದಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...