ಚಿತ್ರದುರ್ಗ: 18 ಏಪ್ರಿಲ್, ಮಹಾಮಾನತವಾದಿ ಸಾಂಸ್ಕøತಿಕ ನಾಯಕ ಶ್ರೀ ಬಸವೇಶ್ವರ ಜಯಂತಿ ನಿಮಿತ್ತ ನಗರದ ಐಎಂಎ ಸಭಾಂಗಣದಲ್ಲಿ ಶ್ರೀಮನ್ಮಹಾರಾಜ ನಿರಂಜನ ಜಗದ್ಗುರು ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಕುರಿತ ಆರ್ಥಿಕ ಚಿಂತಕ ಹಾಗೂ ಸಾಹಿತಿ ಡಾ. ಜಿ ಎಂ ಮಲ್ಲಿಕಾರ್ಜುನಪ್ಪನವರು ರಚಿಸಿರುವ ಜಯದೇವ ಸಿರಿ ನಾಟಕದ ಜನಾರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕೃತಿಯನ್ನು ಜನಾರ್ಪಣೆಮಾಡಿದ ಶ್ರೀ ಜಗದ್ಗುರು ಮುನುಡಿದರು. ಬೃಹನ್ಮಠ ಹಾಗೂ ಎಸ್‍ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿಗಳು ಮಾತನಾಡಿ, ಜಯದೇವ ಜಗದ್ಗುರುಗಳ ಬಗ್ಗೆ ಹೆಚ್ಚಿನ ಜನರಿಗೆ ತಿಳಿಯದಿರುವುದು ವಿಷಾದಕರ ಸಂಗತಿ. ಶ್ರೀಗಳ ಅಗಾಧ ಸಾಧನೆ ಚಟುವಟಿಕೆಗಳನ್ನು ನಾವು ಮುಂದುವರಿಸಿದರೆ ಸಾಕು. ಬಸವ ಜಯಂತಿಗೆ ಮುಖ್ಯ ಕಾರಣ ಹರ್ಡೇಕರ್ ಮಂಜಪ್ಪನವರು. ಅವರಿಗೆ ನೈತಿಕ ಶಕ್ತಿ ನೀಡಿದವರು ಜಯದೇವ ಜಗದ್ಗುರುಗಳು. ಅವರ ಸತ್ಕಾರ್ಯಗಳಿಗೆ ಚೇತೋಹಾರಿ ಕಾರ್ಯ ನಡೆಯಬೇಕಾಗಿದೆ. ಶ್ರೀಮಠದಲ್ಲಿ ಜಯದೇವರ ಮೂರ್ತಿಯನ್ನು ಸ್ಥಾಪಿಸುವ ಚಿಂತನೆಯನ್ನು ಮಾಡುತ್ತಿದ್ದೇವೆ. ಜೆ.ಎಂ.ಐ.ಟಿ. ಸರ್ಕಲ್‍ನಲ್ಲಿ 50 ಲಕ್ಷ ರೂಗಳ ವೆಚ್ಚದಲ್ಲಿ ಜಯದೇವ ಸ್ವಾಮಿಗಳ ಮೂರ್ತಿ ಸ್ಥಾಪನೆಯು ಅತಿ ಶೀಘ್ರದಲ್ಲಿ ಮಾಡುವವರಿದ್ದೇವೆ. ಜಯದೇವ ಜಗದ್ಗುರುಗಳ ಬಗ್ಗೆ ಹೆಚ್ಚಿನ ಪ್ರಚಾರ ಅಗತ್ಯವಿದೆ. ಅವರ ಕೊಡುಗೆ ಸಮಾಜಕ್ಕೆ ಅಪಾರವಾದದ್ದು. ಅಂದಿನ ಕಾಲದ ಶಿಷ್ಯ ವೃಂದದವರ ಭಕ್ತಿ ಪರಾಕಾಷ್ಠೆಯನ್ನು ಕಾಣಬಹುದು. ಶ್ರೀಗಳು ಸರ್ವ ಕ್ಷೇತ್ರಕ್ಕೆ ಕೊಡುಗೆ ನೀಡಿದವರು. ಶ್ರೀಗಳ ಬಗ್ಗೆ ಸಂಶೋಧನಾತ್ಮಕ ಕೃತಿ ರಚನೆಯಾಗಬೇಕಿದೆ. ಅವರು ನಿರ್ಮಿಸಿದ ಹಾಸ್ಟೆಲ್‍ಗಳು ಅರಮನೆ ರೀತಿ ಕಾಣುತ್ತವೆ. ಅನೇಕ ಮಹನೀಯರು ಜಯದೇವ ವಿದ್ಯಾರ್ಥಿ ನಿಲಯದ ಆಶ್ರಯದಲ್ಲಿ ಓದಿ ಉನ್ನತ ಸಾಧನೆ ಮಾಡಿದ್ದಾರೆ. ಕಂತೆ ಭಿಕ್ಷೆಯ ಮೂಲಕ ವಿದ್ಯಾರ್ಥಿಗಳಿಗೆ ಅನ್ನದಾಸೋಹ ಮಾಡಿದವರಾಗಿದ್ದಾರೆ. ಕೊಡಗಿನ ಮಹಾರಾಜರು ಜಮೀನು ನೀಡಲು ಜಯದೇವ ಶ್ರೀಗಳು ಕಾರಣ ಎಂದು ನುಡಿದರು.

ಕೃತಿ ಆವಲೋಕನ ಮಾಡಿ ಮಾತನಾಡಿದ ಹೆಚ್ಚುವರಿ ಪೆÇಲೀಸ್ ವರಿμÁ್ಠಧಿಕಾರಿಗಳಾದ ಡಾ.ಶಿವಕುಮಾರ್ ದಂಡಿನ, ನಾಟಕ ನಮಗೆ ಏಕೆ ಬೇಕೆಂದರೆ ಸಾಹಿತ್ಯವೆಂದರೆ ಕಾವ್ಯ ಎಂಬುದಾಗಿತ್ತು. ಕಥೆ ಕಾದಂಬರಿಗಳು ಇದ್ದವು. ನಾಟಕ ಜನ ಮನ ತಲುಪುವಲ್ಲಿ ಹೆಚ್ಚಿನ ಪಾತ್ರ ವಹಿಸುತ್ತದೆ. ಇದು ಜನರಿಗೆ ಸಂದೇಶಗಳನ್ನು ಬೇಗ ತಿಳಿಸಲು ಸಹಾಯಕವಾಗಿರುತ್ತದೆ. ನಾಟಕಗಳಲ್ಲಿ ಅನೇಕ ವಿಧಗಳಿವೆ ಇವುಗಳು ದೃಶ್ಯ & ಶ್ರವ್ಯದ ಮೂಲಕ ಅಳವಡಿಕೆ ಆಗುತ್ತದೆ. ನಾಟಕ ಮನುಷ್ಯನ ಹುಟ್ಟಿನಿಂದ ಒಂದಲ್ಲ ಒಂದು ರೀತಿಯ ಪಾತ್ರ ವಹಿಸುತ್ತದೆ. ಜಯದೇವ ಸಿರಿ ನಾಟಕವು ಜಯದೇವ ಶ್ರೀಗಳ ಬಗ್ಗೆ ಅವರು ತಿಳಿಸುತ್ತಾ ಗುರುವಿನ ಭಕ್ತಿಯನ್ನು ವ್ಯಕ್ತಪಡಿಸಿದ್ದಾರೆ .
ಕೃತಿಕಾರರು ಈ ಮುಂಚೆ 6 ವಿವಿಧ ನಾಟಕಗಳನ್ನ್ನು ರಚಿಸಿ ಪ್ರದರ್ಶನಗೊಳಿಸಿದ್ದಾರೆ. ಈ ನಾಟಕ ಲಾವಣಿಕಾರರ ಮುಖಾಂತರ ಪ್ರಾರಂಭವಾಗುತ್ತದೆ. ಕಥಾನಾಯಕರನ್ನಾಗಿ ಜಯದೇವ ಶ್ರೀಗಳನ್ನು ಆಯ್ದುಕೊಂಡು ಜಯದೇವ ಶ್ರೀಗಳು ಶ್ರೀಮಠಕ್ಕೆ ಬರುವ ಮುಂಚೆ ಅವರ ಬಾಲ್ಯಾವಸ್ಥೆಯನ್ನು ತಿಳಿಸಿದ್ದಾರೆ. ಈ ನಾಟಕದಲ್ಲಿ 13 ದೃಶ್ಯಗಳನ್ನು ರಚಿಸಿದ್ದಾರೆ. ಕಾಶಿಯ ವಿದ್ಯಾಭ್ಯಾಸ, ಚಳುವಳಿಯ ಬಗ್ಗೆ ಬಾಲಗಂಗಾಧರ ತಿಲಕರ ಭೇಟಿ, ಸನ್ಯಾಸಿಗಳ ಜೀವನಶೈಲಿ ಬಗ್ಗೆ ತಿಳಿಸಿದ್ದಾರೆ. ಕಾಶಿಯಲ್ಲಿ ವೇದ ಉಪನಿಷತ್ತುಗಳ ಅಧ್ಯಯನ ನಂತರ ಶ್ರೀಗಳ ಸಂಚಾರ ಪ್ರವಚನ ಬಗ್ಗೆ ಅವರ ಉನ್ನತ ವ್ಯಾಸಂಗಕ್ಕಾಗಿ ಸಹಕರಿಸಿದವರ ಬಗ್ಗೆ ಹೇಳಲು ಈ ನಾಟಕದಲ್ಲಿ ಪ್ರಯತ್ನಿಸಿದ್ದಾರೆ. ಆಣಿ ಟಿಪ್ಪಣಿಗಳನ್ನು ನಾಟಕದಲ್ಲಿ ಚಿತ್ರಿಸಿ ನಂತರ 1906ರಲ್ಲಿ ಪೀಠಾಧ್ಯಕ್ಷರಾದ ಸನ್ನಿವೇಶ ಚಿತ್ರಿಸಿದ್ದಾರೆ. ಜ್ಞಾನ ಮತ್ತು ಜೋಳಿಗೆಯ ಪಾತ್ರದ ಬಗ್ಗೆ ಚಿತ್ರಿಸಿದ್ದಾರೆ. 12ನೇ ಶತಮಾನದ ಬಸವಾದಿ ಶರಣರ ವೈಚಾರಿಕ ಪ್ರಜ್ಞೆಯ ಬಗ್ಗೆ ವಿವರವಾಗಿ ತಿಳಿಸುವ ಪ್ರಯತ್ನವಿದೆ. ಪ್ರಸಾದ ಶಿಕ್ಷಣದ ಬಗ್ಗೆ ವಿವರವಾಗಿ ತಿಳಿಸಲು ಪ್ರಯತ್ನಿಸಿದ್ದಾರೆ. ಮೈಸೂರು ರಾಜರು ಮಹಾತ್ಮ ಗಾಂಧೀಜಿಯವರು ಸಾಹುಮಹಾರಾಜರ ಬಗ್ಗೆ ತಿಳಿಸಿರುವಂತದ್ದನ್ನು ಕಾಣಬಹುದು. ಜಂಗಮಪೀಠ ಸ್ಥಾವರ ಪೀಠ ಹೇಗಾಯಿತು ಎಂಬುದನ್ನು ತಿಳಿಸಿದ್ದಾರೆ. ಕೊಡಗಿನಿಂದ ಕೊಲ್ಲಾಪುರದವರೆಗೆ ಸುಮಾರು 500 ಮಠಗಳ ಬಗ್ಗೆ ಮತ್ತು ಹಾಸ್ಟೆಲ್ ಹಾಗೂ ಶಿಕ್ಷಣದ ಬಗ್ಗೆ ತಿಳಿಸಿದ್ದಾರೆ. ಪೂಜೆ, ಧ್ಯಾನ, ಪ್ರಸಾದಕ್ಕೆ ಮಾತ್ರ ಸೀಮಿತವಾಗಿರದೆ ಇಷ್ಟಲಿಂಗಧಾರಣೆಗೆ ಕರೆ ನೀಡಿರುವ ಬಗ್ಗೆ ದೃಶ್ಯ ಆರರಲ್ಲಿ ನೋಡಬಹುದು. ತನ್ನ ತಾಯಿಗೆ ಸೀರೆಯನ್ನು ಮಠದವರು ನೀಡಿದ್ದನ್ನು ವಿರೋಧಿಸಿ ವೈರಾಗ್ಯ ಜೀವನದ ಮಹತ್ವವನ್ನು ತಿಳಿಸುವ ಪ್ರಯತ್ನವಿದೆ.
ನಿಜಲಿಂಗಪ್ಪ ಹಾಗೂ ಅನೇಕ ಬಡವರಿಗೆ ಶಿಕ್ಷಣಕ್ಕಾಗಿ ಧನ ಸಹಾಯ ಮಾಡಿದ ದೃಶ್ಯವಿದೆ. ಈ ನಾಟಕದಿಂದ ಅಕ್ಷರ, ಅನ್ನ, ಅರಿವು ಇದರ ಬಗ್ಗೆ ನಾಟಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಹರಿದು ಹಂಚಿ ಹೋದ ಶಾಖಾ ಮಠಗಳ ಬಗ್ಗೆ ಅದನ್ನು ಒಂದುಗೂಡಿಸುವ ಬಗ್ಗೆ ಚರ್ಚೆ ನಡೆಸಿ ಯಾವ ಉಪದೇಶ ಮಾಡಿದರು ಎಂಬುದನ್ನು ಪ್ರಸ್ತುತಪಡಿಸಿದ್ದಾರೆ. ಗುರು ಆದವರಿಗೆ ಚಾರಿತ್ರ್ಯ ಎಷ್ಟು ಮುಖ್ಯವೆಂಬುದನ್ನು, ಸಮಾಜ ಮಠದಿಂದ ಏನು ಬಯಸುತ್ತದೆ ಹಾಗೂ ಮಠ ಜನರಿಂದ ಏನು ಬಯಸುತ್ತದೆ ಎಂಬುದನ್ನು ಸವಿಸ್ತಾರವಾಗಿ ವಿಶ್ಲೇಷಿಸಿದ್ದಾರೆ. ಹಾವೇರಿಯಲ್ಲಿ ಹರ್ಡೇಕರ್ ಮಂಜಪ್ಪ ಹಾಗೂ ಗಾಂಧೀಜಿಯವರು ಜಯದೇವ ಶ್ರೀಗಳು ಭೇಟಿಯಾದ ಸನ್ನಿವೇಶವನ್ನು ವಿವರಿಸಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ ವೈದ್ಯಕೀಯ ಶಿಕ್ಷಣಕ್ಕೆ ಶ್ರೀಮಠದಿಂದ ಕಾಣಿಕೆ ನೀಡಿರುವ ಬಗ್ಗೆ ನೋಡಬಹುದು. ಹಣವು ಅನಾಹುತಕ್ಕೆ ಕಾರಣ ಎಂಬುದನ್ನು ಸೂಚ್ಯವಾಗಿ ತಿಳಿಸುವ ಪ್ರಯತ್ನವಿದೆ. ವಾರದ ಮಲ್ಲಪ್ಪನವರ ಭೇಟಿ ಹಾಗೂ ಭಕ್ತಿಬಾಂಧವ್ಯದ ಬಗ್ಗೆ ತಿಳಿಸಿದ್ದಾರೆ. ಏಕೀಕರಣ ವಿಚಾರವನ್ನು ಶ್ರೀಗಳು ಯಾವ ರೀತಿ ಪಾತ್ರವಹಿಸಿದರು ಎಂಬುದನ್ನು ಕಾಣಬಹುದು. ಕೊನೆಯ ದೃಶ್ಯದಲ್ಲಿ 40 ವರ್ಷ ಪೀಠಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಬಗ್ಗೆ ಅವರು ಹೊಸ ಪರಂಪರೆಯ ಬಗ್ಗೆ ನಾಂದಿ ಹಾಡಿರುವ ವಿಚಾರವನ್ನು ನಾವು ನಾಟಕದಲ್ಲಿ ಕಾಣಬಹುದು ಎಂದು ನುಡಿದರು.
ಕೃತಿ ರಚನೆಕಾರರಾದ ಡಾ. ಜಿ ಎನ್ ಮಲ್ಲಿಕಾರ್ಜುನಪ್ಪ ಮಾತನಾಡಿ, ಜಯದೇವ ಜಗದ್ಗುರುಗಳ ಬಗ್ಗೆ ಹೇಳಬೇಕಾದರೆ ಸರ್ವ ಸಮುದಾಯಗಳನ್ನು ಸಮಕಾಲಿನವಾಗಿ ತೆಗೆದುಕೊಂಡವರು. ಶ್ರೀಗಳು ಆಧ್ಯಾತ್ಮ ಮತ್ತು ವೈಜ್ಞಾನಿಕ ವಿಚಾರಧಾರೆಗಳನ್ನು ಇಟ್ಟುಕೊಂಡವರು. ಅವರ ಬಗ್ಗೆ ಪಿ.ಹೆಚ್.ಡಿಯಲ್ಲಿ ಸಂಶೋಧನೆಯನ್ನು ಮಾಡಿಸಿದರು ಸಹ ಅವರ ವಿಚಾರಧಾರೆಗಳಿಗೆ ಕಡಿಮೆ ಇಲ್ಲ. ಆ ನಿಟ್ಟಿನಲ್ಲಿ ನಾನು ಅವರ ಆದರ್ಶ ವಾದಿತ್ವವನ್ನು ಜನಮನಗಳಿಗೆ ನಾಟಕ ರೂಪದಲ್ಲಿ ನೀಡಬೇಕೆಂದು ಸಾಹಿತ್ಯ ಆಧಾರದ ಮೇಲೆ ಜಯದೇವ ಸಿರಿ ನಾಟಕವನ್ನು ರಚಿಸಿದ್ದೇನೆ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಯುತ ರಾಧಕೃಷ್ಣ ಪಲ್ಲಕ್ಕಿ, ಆರ್ಥಿಕ ಸುಧಾರಣೆ ಮತ್ತು ಪ್ರಜ್ಞೆಯನ್ನು ವಚನ ಸಾಹಿತ್ಯದ ಮುಖಾಂತರ ಮಲ್ಲಿಕಾರ್ಜುನಪ್ಪನವರು ತಮ್ಮ ನಾಟಕದಲ್ಲಿ ಅದ್ಭುತವಾಗಿ ಚಿತ್ರಿಸಿದ್ದಾರೆ. ಮಹಾ ಕ್ರಾಂತಿ ಎಂಬ ನಾಟಕವನ್ನು ಪ್ರಸ್ತುತಪಡಿಸಿದ್ದಾರೆ. ಅವರು ಬರೆದಿರುವ ತಿರುಕ ಯಾನ ನಾಟಕದಲ್ಲಿ ವಚನ ಸಾಹಿತ್ಯ ಸಮ್ಮಿಶ್ರಮಣವನ್ನು 12ನೇ ಶತಮಾನದಿಂದ 21ನೇ ಶತಮಾನದ ಶರಣರುಗಳು ಬಗ್ಗೆ ಚಿತ್ರಿಸಿದ್ದಾರೆ. ಅದೇ ರೀತಿ ಜಯದೇವ ಸಿರಿ ಸಾಹಿತ್ಯ ಪುಸ್ತಕವನ್ನು ಕಥಾ ನಾಟಕ ರೂಪದಲ್ಲಿ ಅದ್ಭುತವಾಗಿ ಚಿತ್ರಿಸಿದ್ದಾರೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಬಾಪೂಜಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ.ಕೆ.ಎಂ ವೀರೇಶ್, ಎಸ್ ನಿಜಲಿಂಗಪ್ಪ ಪ್ರತಿಷ್ಠಾನದ ಅಧ್ಯಕ್ಷರಾದ ಎಸ್ ಷಣ್ಮುಖಪ್ಪ, ಪತ್ರಕರ್ತ ಜಡೇಕುಂಟೆ ಮಂಜುನಾಥ್, ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಉಪಾಧ್ಯಕ್ಷ ಟಿ ಯರಿಸ್ವಾಮಿ, ಲಿಂಗಾಯತ ಪಂಚಮಸಾಲಿ ಮಹಿಳಾ ಸಮಾಜದ ಅಧ್ಯಕ್ಷ ಉಮಾ ರಮೇಶ್, ಪಟೇಲ್ ಶಿವಕುಮಾರ್, ಗಾಯಕ ತೋಟಪ್ಪ ಉತ್ತಂಗಿ ಮೊದಲಾದವರು ಉಪಸ್ಥಿತರಿದ್ದರು. ಜಮುರಾ ಕಲಾವಿದರಾದ ತೋಟಪ್ಪ ಉತ್ತಂಗಿ, ಕೋಕಿಲ ರುದ್ರಮೂರ್ತಿ ಅವರಿಗೆ ಶ್ರೀ ಬಸವಕುಮಾರ ಶ್ರೀಗಳು ಸನ್ಮಾನಿಸಿದರು. ಜಮುರಾ ಕಲಾವಿದರು ವಚನ ಗಾಯನ ನಡೆಸಿ, ಶ್ರೀಮತಿ ಶೈಲಾಜಾ ನಿರೂಪಿಸಿದರು.



















