ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 16 : ರೈತರ ಕೃಷಿ ಪಂಪ್‍ಸೆಟ್‍ಗೆ ಸೋಲಾರ್ ಅಳವಡಿಕೆ ಕಾರ್ಯ ನಡೆಯುತ್ತಿದ್ದು, ಕಂಪನಿಯವರಿಂದಲೆ ಸಿವಿಲ್ ಕಾಮಗಾರಿ ಪೂರ್ಣಗೊಳಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದಿಂದ ಅಪರ ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

ಜಿಲ್ಲೆಯ ಕೃಷಿ ಪಂಪ್‍ಸೆಟ್‍ಗಳಿಗೆ ಸೋಲಾರ್ ಮೋಟಾರ್ ಹಾಗೂ ಪೆನಾಲ್ ಬೋರ್ಡ್ ಅಳವಡಿಕೆ ಕಾಮಗಾರಿಯನ್ನು ಟೆಂಡರ್ ಮೂಲಕ ಅನೇಕ ಕಂಪನಿಗಳಿಗೆ ನೀಡಲಾಗಿದೆ. ರೈತರ ವಂತಿಕೆ ಶೇ.20, ಸರ್ಕಾರದ್ದು, ಶೇ.80 ಪರ್ಸೆಂಟ್ ಹಣ ಬಳಸಬೇಕೆಂಬ ನಿಯಮವಿದೆ. ಶಕ್ತಿ, ಸಿ.ಆರ್.ಐ. ಆಸ್ಟ್ರೇಲಿಯನ್, ಮೆಗಾ, ಸ್ವಸ್ತಿಕ್ ಹಾಗೂ ಮತ್ತಿತರೆ ಕಂಪನಿಗಳು ಕಾಮಗಾರಿಯನ್ನು ನಿರ್ವಹಿಸುತ್ತಿದ್ದು, ಕೆಲ ಕಂಪನಿಯವರು ಸಿವಿಲ್ ಕಾಮಗಾರಿಯನ್ನು ರೈತರಿಂದಲೆ ಮಾಡಿಸಿಕೊಳ್ಳುತ್ತಿರುವುದು ರೈತರಿಗೆ ನಷ್ಟವುಂಟಾಗುತ್ತಿದೆ. ಒಬ್ಬ ರೈತ ಸುಮಾರು ಹದಿನೈದರಿಂದ ಇಪ್ಪತ್ತು ಸಾವಿರ ರೂ.ಗಳನ್ನು ಖರ್ಚು ಮಾಡಿಕೊಳ್ಳುವಂತಾಗಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಬೆಸ್ಕಾಂ ಇಂಜಿನಿಯರ್‍ಗಳ ಹಾಗೂ ಕಂಪನಿಯವರ ಸಭೆ ನಡೆಸಿ ರೈತರಿಗೆ ಅನುಕೂಲವಾಗುವ ರೀತಿ ಕ್ರಮ ಕೈಗೊಂಡು ಇಲ್ಲಿಯವರೆಗೂ ರೈತರು ಕೈಯಿಂದ ಖರ್ಚು ಮಾಡಿರುವ ಹಣವನ್ನು ಹಿಂದಿರುಗಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ ಹಂಪಯ್ಯನಮಾಳಿಗೆ ಅಪರ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.
ಬಸ್ತಿಹಳ್ಳಿ ಜಿ.ಸುರೇಶ್‍ಬಾಬು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಕೆ.ಎಂ.ಕಾಂತರಾಜು, ಮಾರುತಿ, ಜಿ.ಬಿ.ಪಾಪಣ್ಣ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.














