Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

“ಸಮಾಜ ಸೇವೆಯೇ ನೈಜ ನಾಯಕತ್ವ” : ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸಂದೇಶ

---Advertisement---

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 16 : ಸಮಾಜದ ಋಣ ತೀರಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು. ಸಂಘಟನೆಯ ಜವಾಬ್ದಾರಿ ಸಿಕ್ಕಾಗ ಅದನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳದೆ, ಕಾಯಾ ವಾಚಾ ಮನಸಾ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ನೈಜ ನಾಯಕತ್ವದ ಲಕ್ಷಣ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ಭೋವಿಗುರುಪೀಠದಲ್ಲಿ ಜಿಲ್ಲಾ ಭೋವಿ ಸಂಘದಿಂದ ಹಮ್ಮಿಕೊಂಡ ಅಂಬೇಡ್ಕರ್ ಜಯಂತ್ಯೋತ್ಸವ ಹಾಗೂ ನೂತನ ಪದಾಧಿಕಾರಿಗಳ ಅಭಿನಂದನ ಸಮಾರಂಭದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಪೂಜ್ಯರು
ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ದೂರದೃಷ್ಟಿಯ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಭವಿಷ್ಯದಲ್ಲಿ ಸಮಾಜದ ಎಲ್ಲ ಸ್ತರದ ಜನರನ್ನು ಒಳಗೊಳ್ಳುವ ಉದ್ದೇಶದಿಂದ ಮಹಿಳಾ ಘಟಕ, ಯುವ ಘಟಕ ಮತ್ತು ವಿದ್ಯಾರ್ಥಿ ಘಟಕಗಳನ್ನು ಸೃಜಿಸಲು ನಿರ್ಧರಿಸಲಾಗಿದೆ. ಈ ಘಟಕಗಳ ರಚನೆ ಮತ್ತು ಜವಾಬ್ದಾರಿಗಳ ಕುರಿತು ಸಮಾಜದ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಲು ವಿಶೇಷ ಕಾರ್ಯಗಾರಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಘಟನೆಗೆ ಹೊಸ ಆಯಾಮ ನೀಡಲಾಗುವುದು. ಯಾವುದೇ ಸಂಘಟನೆಯ ಯಶಸ್ಸು ಅಲ್ಲಿನ ಪಾರದರ್ಶಕತೆಯ ಮೇಲೆ ನಿಂತಿರುತ್ತದೆ. ಪದಾಧಿಕಾರಿಗಳು ಹಣಕಾಸಿನ ವ್ಯವಹಾರಗಳಲ್ಲಿ ಅತ್ಯಂತ ಶಿಸ್ತು ಮತ್ತು ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವುದು ಅನಿವಾರ್ಯ. ಸಂಘಟನೆಯೇ ಪ್ರಥಮ ಆದ್ಯತೆ. ಎಂಬ ಮಂತ್ರದೊಂದಿಗೆ ಕೆಲಸ ಮಾಡಿದಾಗ ಮಾತ್ರ ಸಾರ್ವಜನಿಕ ನಂಬಿಕೆ ಗಳಿಸಲು ಸಾಧ್ಯ. ಅಧಿಕಾರ ಎನ್ನುವುದು ಶಾಶ್ವತವಲ್ಲ. ಆದರೆ ಅಧಿಕಾರದಲ್ಲಿದ್ದಾಗ ಮಾಡುವ ಕೆಲಸಗಳು ಶಾಶ್ವತವಾಗಿರಬೇಕು. ನಾಯಕತ್ವದ ಅವಕಾಶ ಸಿಕ್ಕಾಗ ಅದನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಮಾದರಿ ಸೇವೆಯನ್ನಾಗಿ ಪರಿವರ್ತಿಸಬೇಕು. ಪದಾಧಿಕಾರಿಗಳು ಪರಸ್ಪರ ಟೀಕೆ-ಟಿಪ್ಪಣಿಗಳಿಗೆ ಒಳಗಾಗದೆ ಸ್ಥಿತಪ್ರಜ್ಞತೆಯನ್ನು ಕಾಯ್ದುಕೊಂಡು, ಒಗ್ಗಟ್ಟಿನಿಂದ ಶ್ರಮಿಸಬೇಕೆಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಭೋವಿ ಸಂಘದ ನೂತನ ಅಧ್ಯಕ್ಷರಾದ ಸೂರಗೊಂಡನಹಳ್ಳಿ ಕೃಷ್ಣಮೂರ್ತಿ.ಟಿ, ಗೌರವಾಧ್ಯಕ್ಷರಾದ ಟಿ.ತಿಪ್ಪೇಸ್ವಾಮಿ, ಡಿ.ತಿಮ್ಮಣ್ಣ, ಕಾರ್ಯಧ್ಯಕ್ಷರಾದ ಡಿ.ಸಿ.ಮೋಹನ, ಉಪಾಧ್ಯಕ್ಷರಾದ ಲಕ್ಷಣ ಹೆಚ್, ಅನ್ನೆಹಾಳ ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಈ, ಸಹಕಾರ್ಯದರ್ಶಿ ಪಿ.ದೇವರಾಜ, ಖಂಜಾಚಿ ವಿ.ಹನುಮಂತಪ್ಪ, ಸಂಚಾಲಕ ರಾಮಚಂದ್ರಪ್ಪ, ಸಂಘಟನಾ ಕಾರ್ಯದರ್ಶಿ ಆಂಜನೇಯ ಹೆಚ್, ನಿರ್ದೇಶಕರುಗಳಾದ ಟಿ.ಚಂದ್ರಶೇಖರ್, ಹೆಚ್.ನಟೇಶ್, ನಿರಂಜನ.ಆರ್, ವೆಂಕಟೇಶ ಎಲ್.ಬಿ, ನಾಗರಾಜ.ಹೆಚ್, ಅಣ್ಣಪ್ಪ ಸಿ.ಜೆ, ಪಿ.ಅಂಜಿನಯ್ಯ, ಆರ್.ಈರಣ್ಣ, ಎಮ್.ರಾಮು, ಹೆಚ್.ಭೀಮರಾಜು, ಭೋವಿಗುರುಪೀಠದ ಸಿಇಒ ಗೋವಿಂದಪ್ಪ ಹಾಗೂ ಇನ್ನಿತರರು ಉಪಸ್ಥಿತಿಯಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...