Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಿದ್ದರಾಮಯ್ಯ ಅವರೇ ಉತ್ತಮ : ಮುಖ್ಯಮಂತ್ರಿಗಳ ಬಗ್ಗೆ ಪ್ರತಾಪ್ ಸಿಂಹ ಮಾತು

---Advertisement---

ಮೈಸೂರು: ಚುನಾವಣಾ ಪ್ರಚಾರ ಸಭೆಯಲ್ಲಿ ಎಐಸಿಸಿ ಅಧ್ಯಕ್ಷರು ಅಥವಾ ಆಲ್ ಇಂಡಿಯಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಕೊಟ್ಟಿರುವಂತ ಹೇಳಿಕೆಯನ್ನ ನೋಡಿದೆ. ಕುರಾನ್ ನಲ್ಲಿಯೇ ಹೇಳಿದೆ, ಒಂದು ವೇಳೆ ನೀವೂ ನಮಾಜ್ ಮಾಡ್ತಾ ಇದ್ದರೆ, ಅಲ್ಲೊಂದು ವಿಷ ಸರ್ಪ ಹೋಗ್ತಾ ಇದೆ ಅಂದ್ರೆ ನಮಾಜ್ ನ ಅರ್ಧಕ್ಕೆ ನಿಲ್ಲಿಸಿದರು ಪರವಾಗಿಲ್ಲ. ಆ ವಿಷ ಸರ್ಪವನ್ನ ಹೊಡೆಯಿರಿ ಅಂತ ಹೇಳಿದೆ ಎಂಬ ಖರ್ಗೆ ಅವರ ಮಾತಿಗೆ ಪ್ರತಾಪ್ ಸಿಂಹ ಹರಿಹಾಯ್ದಿದ್ದಾರೆ.

ಆರ್ ಎಸ್ ಎಸ್ ಮತ್ತು ಬಿಜೆಪಿ ಅನ್ನೋದು ಕೂಡ ವಿಷಸರ್ಪ ಇದ್ದ ಹಾಗೇ, ಅದನ್ನ ಕೊಲ್ಲಲಿಲ್ಲ ಅಂದ್ರೆ ನಿಮಗೆ ಉಳಿಗಾಲ ಇಲ್ಲ ಅಂತ ಮಾತನ್ನಾಡಿದ್ದಾರೆ. ನಾವೂ ಇದುವರೆಗೂ ಈ ಮರಿ ಖರ್ಗೆ ಅಂದ್ರೆ ಪ್ರಿಯಾಂಕ್ ಖರ್ಗೆಗೆ ಮಾತ್ರ ಆರ್ ಎಸ್ ಎಸ್ ನ ಹುಚ್ಚು ಹಿಡಿದಿದೆ ಅಂದುಕೊಂಡಿದ್ದೆ. ಮಗನಿಗೆ ಹಿಡಿದಿರುವ ಹುಚ್ಚು ಇಂದು ಅಪ್ಪನಿಗೂ ಅಂಟಿಕೊಂಡಿದೆ ಅನ್ನಿಸ್ತಾ ಇದೆ.

ಆರ್ ಎಸ್ ಎಸ್ ಅನ್ನ ಬೈಲಿಲ್ಲ ಅಂದ್ರೆ ಇವರಿಗೆ ತಿಂದ ಅನ್ನ ಅರಗಲ್ಲ. ಖರ್ಗೆ ಅವರನ್ನ ನಾನು ಕೇಳೋದು ಇಷ್ಟೆ, ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿ ಇಷ್ಟೊಂದು ಪ್ರಚೋದನಕಾರಿಯಾಗಿ ಮಾತನ್ನಾಡ್ತಾ ಇದ್ದೀರಲ್ಲಾ, ಖರ್ಗೆ ಅವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಸಮಯ ಹತ್ತಿರವಾಗಿರಬೇಕು. ಉಳಿಸಿಕೊಳ್ಳೋದಕ್ಕೆ ಈ ರೀತಿಯ ಮಾತುಗಳನ್ನ ಆಡಿರಬಹುದು ಎಂದೇ ಭಾವಿಸ್ತೀನಿ. ಆದರೆ ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿ, ಬಿಜೆಪಿ ಹಾಗೂ ಆರ್ ಎಸ್ ಎಸ್ ಅನ್ನ ವಿಷ ಸರ್ಪಕ್ಕೆ ಹೋಲಿಕೆ ಮಾಡಿ, ಅವರನ್ನ ಕೊಲ್ಲಿ ಅಂತ ಹೇಳಿ ಬಿಟ್ಟು, ಮುಸಲ್ಮಾನರನ್ನ ನೀವೂ ಪ್ರಚೋದನೆ ಮಾಡ್ತಾ ಇದ್ದೀರಲ್ಲ ಏನು ಅರ್ಥ ಸರ್ ಇದು. ಮುಸ್ಲಿಮರನ್ನ ಒಲೈಸೋಕೆ ಸಿದ್ದರಾಮಯ್ಯ ಅವರಷ್ಟೇ ಏನು ಬೇಕಾದರೂ ಮಾಡ್ತಾರೆ ಎಂದುಕೊಂಡಿದ್ದೋ, ಆದರೆ ನಿಮಗೆ ಹೋಲಿಕೆ ಮಾಡಿದರೆ ಸಿದ್ದರಾಮಯ್ಯ ಅವರೆ ಉತ್ತಮ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...