ದಾವಣಗೆರೆ : ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಗೆಲ್ಲಿಸೋದಕ್ಕೆ ಕಾಂಗ್ರೆಸ್ ಪಣ ತೊಟ್ಟಿದೆ. ಹೀಗಾಗಿಯೇ ಕಾಂಗ್ರೆಸ್ ನ ಪ್ರಮುಖರು ಕೂಡ ದಾವಣಗೆರೆಗೆ ಭೇಟಿ ನೀಡಿ, ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಕೂಡ ಭೇಟಿ ನೀಡಿದ್ದು, ಈ ವೇಳೆ ಬಿಜೆಪಿ ಅಭ್ಯರ್ಥಿ ಬಗ್ಗೆ ಮಾತನ್ನಾಡಿದ್ದಾರೆ.
ಒಳ್ಳೆಯ ವಾತಾವರಣವೇ ಇದೆ. ಎರಡು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲುತ್ತದೆ. ಸಿಟ್ಟಿಂಗ್ ಪಾರ್ಟಿ ಇದ್ಕಂಡು, ಸರ್ಕಾರ ಇದ್ದು ಎಲ್ಲಾದರೂ ಸೋಲೋದುಂಟೆ. ಬಿಜೆಪಿಯವರು ಸುಮ್ಮನೆ ಕುತಂತ್ರದಿಂದ ಮಾಧ್ಯಮದವರ ಮೂಲಕ ದಿಕ್ಕು ತಪ್ಪಿಸುವ ಕೆಲಸವನ್ನ ಮಾಡ್ತಾ ಇದ್ದಾರೆ. ಅಷ್ಟೇ ಅದು ಬಿಟ್ಟರೆ ಬೇರೆ ಏನು ಇಲ್ಲ. ಬಿಜೆಪಿಯವರಿಗೆ ಬದ್ಧತೆ ಇದ್ದರೆ, ಕಳೆದ ಸಲ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಯಾರು ನಿಂತು, ಗೆದ್ದದ್ದು..? ಅವರಿಗ್ಯಾಕೆ ಟಿಕೆಟ್ ಕೊಡ್ಲಿಲ್ಲ. ಅವರಿಗ್ಯಾಕೆ ಟಿಕೆಟ್ ಕೊಡ್ಲಿಲ್ಲ ಅನ್ನೋದನ್ನ ಸ್ಪಷ್ಟ ಪಡಿಸಲಿ. ಇವರನ್ನ ಯಾಕೆ ತೆಗೆದುಕೊಂಡು ಬಂದ್ರು ಅನ್ನೋದನ್ನ ಹೇಳಲಿ.
ಬಲಿಕಾ ಬಕ್ರಾ ಮಾಡುವುದಕ್ಕಾ ಇವರನ್ನ ನಿಲ್ಲಿಸಿರುವುದು. ಶಾಮನೂರು ಶಿವಶಂಕರಪ್ಪ ಅವರ ಕೊಡುಗೆ ಏನು..? ದಾವಣಗೆರೆ ಜಿಲ್ಲೆಗೆ, ಅವರ ಕುಟುಂಬದವರು ಪ್ರತಿಯೊಬ್ಬರು ಎಲ್ಲಾ ಸೌಕರ್ಯವನ್ನ ಮಾಡಿಕೊಟ್ಟಿರೋದನ್ನ ಕಾಣ್ತಾ ಇದ್ದೀವಿ. ಜನ ಸಾಮಾನ್ಯರು ಕೂಡ ನೋಡ್ತಾರೆ. ಗ್ಯಾರಂಟಿ ಯೋಜನೆಗಳಲ್ಲಿ 80-90% ಹೋಗ್ತಾ ಇರೋದು ಇವರಿಗೆ. ಹಿಂದುಳಿದ, ಮೈನಾರಿಟಿ, ಎಸ್ಸಿ, ಎಸ್ಟಿಗೆ ಹೋಗ್ತಾ ಇರೋದು. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮೋಸ ಮಾಡುತ್ತಾರೆಯೇ. ಬಿಜೆಪಿಯಲ್ಲಿಯೇ ನಾಲ್ಕು ಬಣಗಳಿವೆ. ಅವರಲ್ಲಿಯೇ ಒಬ್ಬರಿಗೊಬ್ಬರು ಸೋಲಿಸುವ ಪ್ರಯತ್ನ ನಡೀತಾ ಇದೆ. ಯತ್ನಾಳ್ ಅವರನ್ನ ಉಚ್ಛಾಟನೆ ಮಾಡಿದ್ದಾರೆ ಅಲ್ವಾ. ಅವರು ಪ್ರಚಾರ ಮಾಡಬಾರದು ಅಂತ ಹೇಳಲಿ ನೋಡೋಣಾ ಎಂದು ಸವಾಲು ಹಾಕಿದ್ದಾರೆ.





















