ಧಾರವಾಡ: ಬೆಂಗಳೂರು ಲೋಕಾಯುಕ್ತ ಅಧಿಕಾರಿಗಳು ಭರ್ಜರಿಯಾಗಿನೇ ಟ್ರ್ಯಾಪ್ ಮಾಡಿದ್ದಾರೆ. ಲಂಚ ಪಡೆಯುವಾಗಲೇ ಲೋಕಾಯುಕ್ತ ಬಲೆಗೆ ಕಮರ್ಷಿಯಲ್ ಟ್ಯಾಕ್ಸ್ ಡಿಸಿ ಬಿದ್ದಿದ್ದಾರೆ. ಭರತ್ ಹೆಗ್ಗಡೆ ಹೀಗೆ ಲೋಕಾಯುಕ್ತ ಅಧಿಕಾರಿಗಳ ಕೈಗೆ ತಗಲಾಕಿಕೊಂಡ ಕಮರ್ಷಿಯಲ್ ಟ್ಯಾಕ್ಸ್ ಡಿಸಿ.
ಸುಮಾರು 6 ಲಕ್ಷ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ಈ ಭರತ್ ವಿರುದ್ಧ ಒಂದಷ್ಟು ದೂರುಗಳು ಇದ್ದವು. ವಿಪರೀತ ಹಣದ ಆಸೆಗೆ ಬಿದ್ದಿದ್ದಾರೆ ಅನ್ನೋದು. ಆ ಸಂಬಂಧ ರೆಡ್ ಹ್ಯಾಂಡ್ ಆಗಿ ಹಿಡಿಯಲು ಸಾಕ್ಷಿಯನ್ನು ನೀಡುತ್ತೇವೆ ಎಂದು ಲೋಕಾಯುಕ್ತ ಅಧಿಕಾರಿಗಳಿಗೆ ವ್ಯಕ್ತಿಯೊಬ್ಬರು ದೂರನ್ನ ನೀಡಿದ್ದರು. ಆ ದೂರುದಾರನಿಗೆ ಈ ಕಮರ್ಷಿಯಲ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ಡಿಸಿ ಈ ಮೊದಲು 60 ಲಕ್ಷ ಹಣವನ್ನ ಕೇಳಿದ್ದರಂತೆ. ಆ ಸಂಬಂಧ ನೋಟೀಸ್ ಕೂಡ ನೀಡಿದ್ದರಂತೆ. ಈ ಸಂಬಂಧ 60 ಬೇಡ 6 ಲಕ್ಷ ಹಣವನ್ನ ನೀಡುವಂತೆ ಬೇಡಿಕೆ ಇಟ್ಟಿದ್ದರಂತೆ. ಅದರ ಪರಿಣಾಮ ಲೋಕಾಯುಕ್ತರ ಗಮನಕ್ಕೆ ತಂದಿದ್ದ ಆ ವ್ಯಕ್ತಿ ಲಂಚ ನೀಡಲು ಹೋಗಿದ್ದಾರೆ. ಇದೇ ವೇಳೆ ಡಿಸಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.
ಈ ಮೂಲಕ ದೊಡ್ಡ ಭ್ರಷ್ಟಾಚಾರವನ್ನ ಬೇಧಿಸುವಲ್ಲಿ ಲೋಕಾಯುಕ್ತ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಅಂಕೋಲ ಮೂಲದ ಉದ್ಯಮಿಗೆ ಲಂಚದ ಬೇಡಿಕೆಯನ್ನ ಇಟ್ಟಿದ್ದರಂತೆ. ಆ ಉದ್ಯಮಿ 8 ಟಿಪ್ಪರ್ ಗಳನ್ನ 2008 ರಲ್ಲಿ ಖರೀದಿ ಮಾಡಿದ್ದರಂತೆ. ಅದರ ಟ್ಯಾಕ್ಸ್ 60 ಲಕ್ಷ ಆಗಿರುತ್ತೆ. ಆ ಟ್ಯಾಕ್ಸ್ ನ ವಿಶೆರಷ ಯೋಜನೆಯಡಿ ವಾಪಾಸ್ ಪಡೆದಿರುತ್ತಾರೆ. ಇದು ಟ್ಯಾಕ್ಸ್ ಎಇಸಿ ಗಮನಕ್ಕೆ ಬಂದಿರುತ್ತೆ. ಸುಳ್ಳು ದಾಖಲೆಗಳನ್ನ ನೀಡಿ ಹಣ ಪಡೆದಿದ್ದೀರಿ ಎಂದು ನೋಟೀಸ್ ನೀಡಿರುತ್ತಾರೆ. ಸುಮಾರು ಬಾರಿ ಆ ಉದ್ಯಮಿ ವಿಚಾರಣೆಗೆ ಹಾಜರಾಗಿರುತ್ತಾರೆ. ಕೇಸ್ ವಾಪಾಸ್ ಪಡೆಯಲು ಆರು ಲಕ್ಷ ಲಂಚ ಕೊಡಿ ಎಂದು ಬೇಡಿಕೆ ಇಟ್ಟಿರುತ್ತಾರೆ. ಈ ಸಂಬಂಧ ಆ ಉದ್ಯಮಿ ಲೋಕಾಯುಕ್ತ ಪೊಲೀಸರ ಮೊರೆ ಹೋಗಿದ್ದು, ಈಗ ಡಿಸಿ ಲಾಕ್ ಆಗಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.









