Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ನ್ಯಾನೋ ಪ್ಲಾಸ್ಟಿಕ್–ಮಾದಕ ದ್ರವ್ಯಗಳ ಅಪಾಯ: ಯುವಕರಿಗೆ ಕ್ರೀಡೆ–ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಕರೆ

---Advertisement---

ಚಿತ್ರದುರ್ಗ, ಮಾ. 27 : ಮುಂಬರುವ ದಿನಗಳಲ್ಲಿ ನ್ಯಾನೋ ಪ್ಲಾಸ್ಟಿಕ್ ಮತ್ತು ಮಾದಕ ದ್ರವ್ಯಗಳು ಜನರನ್ನು ಅನಾರೋಗ್ಯದ ಕಡೆಗೆ ಒಯ್ಯುತ್ತವೆ. ಮೊಬೈಲ್ ಏಕಾಂತದಲ್ಲಿ ಸಮಯ ಕಳೆಯುವುದನ್ನು ನಿಲ್ಲಿಸಿ ಯುವಕರು ಕ್ರೀಡೆ ಹಾಗೂ ಸಮಾಜದ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಚಿತ್ರದುರ್ಗ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಯುವರಾಜ್ ಬಿ.ವೈ. ಅವರು ಕರೆ ನೀಡಿದರು.

 

ನಗರದ ಎಸ್.ಜೆ.ಎಂ. ಔಷಧ ಮಹಾವಿದ್ಯಾಲಯದಲ್ಲಿ ನಡೆದ ಐ-ಕ್ಲಾಪ್ ಎರಡುದಿನದ ಅಂತಾರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

 

ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಹಿಂದಿನ ಕಾಲದಲ್ಲಿ ಹಿರಿಯರು ಅಡುಗೆ ಮನೆಯನ್ನೆ ಔಷಧಾಲಯವನ್ನಾಗಿ ಮಾಡಿಕೊಂಡಿದ್ದರು. ಯಾವುದೇ ತೊಂದರೆಗೆ ಮನೆಮದ್ದನ್ನೇ ಅವಲಂಬಿಸಿದ್ದರು. ಮುರುಘಾ ಪರಂಪರೆಯ ಸ್ವಾಮಿಗಳು ಮೈಸೂರು ರಾಣಿಗೆ ಅನಾರೋಗ್ಯದ ಸ್ಥಿತಿಯಲ್ಲಿ ಯಾರು ಗುಣಪಡಿಸದ ಕಾಯಿಲೆಯನ್ನು ಔಷಧೋಪಚಾರ ಮಾಡಿ ನಿವಾರಿಸಿ. ಕೊಡಗಿನಲ್ಲಿ ಕಾಫಿತೋಟವನ್ನು ಮೈಸೂರು ಮಹಾರಾಜರಿಂದ ಬಳುವಳಿಯಾಗಿ ಪಡೆದ ಕಟ್ಟಿಗೆಹಳ್ಳಿ ಸ್ವಾಮಿಗಳನ್ನು ನೆನೆಸಿಕೊಂಡರು. ಭಾರತ ದೇಶವು ಕರೋನಾ ಸಮಯದಲ್ಲಿ ತಂತ್ರe್ಞÁನ ಬಳಸಿ ಪರಿಹಾರದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದು ಔಷಧಿ ತಜ್ಞರ ಸಹಾಯದಿಂದ ಎಂದು ಹೇಳಿದರು.

 

ಎಸ್.ಜೆ.ಎಂ. ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಬಿ. ಗುಡಸಿ ಮಾತನಾಡಿ, ಹಿಂದಿನ ಕಾಲದಲ್ಲಿ ಔಷಧೀಯ ಸಂಶೋಧನೆಗೆ ವರ್ಷಗಳೇ ಕಳೆಯುತ್ತಿದ್ದವು. ಈಗ ಎಐ ತಂತ್ರe್ಞÁನ ಬಂದು ಕೆಲವೇ ದಿನಗಳಲ್ಲಿ ಔಷಧಿಯನ್ನು ಕಂಡುಹಿಡಿಯಲಾಗುತ್ತಿದೆ. ಇಂತಹ ಹೊಸ ವಿಚಾರಗಳ ವಿನಿಮಯ ಸಂಕಿರಣದಲ್ಲಿ ವಿದ್ಯಾರ್ಥಿಗಳಿಗೆ ಆಗಲಿದೆ ಅದರ ಉಪಯೋಗ ಪಡೆದುಕೊಳ್ಳದಿದ್ದರೆ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಕಷ್ಟ ಇದೆ. ಔಷಧೀಯ ಬಳಕೆ ವ್ಯಕ್ತಿಯಿಂದ ವ್ಯಕ್ತಿಗೆ ಪ್ರಮಾಣ ಹೆಚ್ಚು ಕಡಿಮೆ ಇರುತ್ತದೆ ಮತ್ತು ಆಗುತ್ತದೆ ಅದರ ಅರಿವು ಜಾಗೃತಿ ಮೂಡಿಸುವುದು ಮುಖ್ಯ ಎಂದು ತಿಳಿಸಿದರು.

 

ಗಿರೀಶ್ ಸಿ.ಎಚ್. ಸಹಾಯಕ ಔಷಧ ನಿಯಂತ್ರಕರು ಮಾತನಾಡಿ, ಔಷಧ ತಂತ್ರe್ಞÁನ ಮತ್ತು ತಯಾರಿಕೆ ಅತ್ಯವಶ್ಯಕ ಮತ್ತು ಅತಿ ವೇಗದಲ್ಲಿ ಬೆಳೆಯುತ್ತಿರುವ ಕ್ಷೇತ್ರವಾಗಿದೆ. ವಿಶ್ವಕ್ಕೆ ಬೇಕಾಗುವ ಔಷಧಿಗಳನ್ನು ಭಾರತವು ತಯಾರು ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ನಿಮ್ಮ ಪಾತ್ರ ದೊಡ್ಡದಿದೆ ಎಂದು ತಿಳಿಸಿದರು.

 

ಎಸ್.ಜೆ.ಎಂ. ವಿಶ್ವವಿದ್ಯಾಲಯದ ಕುಲಸಚಿವ ಡಾ. ಗಣಾಚಾರಿ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿP್ಷÀಣ ಮುಗಿಸಿದ ನಂತರ ಮುಂದೆ ಏನು ಎಂಬುವ ಚಿಂತೆ ಬಹಳ ಕಾಡುತ್ತದೆ. ಅದಕ್ಕಾಗಿ ಅವರು ಕೌಶಲ್ಯತೆಯನ್ನು ತಂತ್ರe್ಞÁನದೊಂದಿಗೆ ಹೊಂದಿಸಿಕೊಂಡು ಮಾರುಕಟ್ಟೆಯ ಅನುಗುಣವಾಗಿ ತಮ್ಮ ಬಯೋಡೇಟಾವನ್ನು ವಿಭಿನ್ನ ರೀತಿಯಲ್ಲಿ ಗುರುತಿಸುವಂತೆ ಮಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.

 

ಡಾ|| ಯೋಗೇಂದ್ರ ಮಾತನಾಡಿದರು. ಸಮ್ಮೇಳನದಲ್ಲಿ ರಾಜ್ಯ ಹಾಗೂ ಹೊರರಾಜ್ಯದ 450ಕ್ಕೂ ಹೆಚ್ಚು ಔಷಧಿ ತಜ್ಞರು ಭಾಗವಹಿಸಿದ್ದರು. ಎರಡು ದಿನದ ಕಾರ್ಯಕ್ರಮದಲ್ಲಿ ಏಳು ನುರಿತ ಅಂತಾರಾಷ್ಟ್ರೀಯ (ಮಲೇಶಿಯಾ ಹಾಗೂ ಐಲ್ರ್ಯಾಂಡ್) ಔಷಧ ತಜ್ಞರು ಹೊರರಾಜ್ಯದ (ಹೈದರಾಬಾದ್ ಹಾಗೂ ಆಂಧ್ರಪ್ರದೇಶ್) ಔಷಧ ತಜ್ಞರು ಹಾಗೂ ಬೆಂಗಳೂರಿನ ಸಂಶೋಧಕರು ಔಷಧಿಯ ಉಪಚಾರ ಮತ್ತು ಬಳಕೆಯಲ್ಲಿ ಗಮನಿಸಬೇಕಾದ ವಿಚಾರಗಳು, ಆಧುನಿಕ ಔಷಧೀಯ ಚಿಕಿತ್ಸಾ ಪದ್ಧತಿಯ ಅಧ್ಯಯನ ಮತ್ತು ಸಂಶೋಧನೆ ವಿಚಾರಗಳನ್ನು ಹಾಗೂ ಫಾರ್ಮಸಿ ವಿಭಾಗದ ಸುಮಾರು 60 ಔಷಧೀಯ ಸಂಶೋಧನಾಕಾರರು ತಮ್ಮವಿಷಯಗಳ ವಿಷಯ ಮಂಡನೆ ಮಾಡಲಿದ್ದಾರೆ.

 

ಸ್ವಾಗತವನ್ನು ಕೋರಿದ ಡಾ ಕಾಲೇಜಿನ ಪ್ರಾಚಾರ್ಯ ಡಾ. ಟಿ.ಎಸ್. ನಾಗರಾಜï, ಔಷದ ವಿದ್ಯಾಲಯವು ಔಷಧೀಯ ಶಿಕ್ಷಣದ ಜೊತೆಗೆ ವಿಚಾರ ಸಂಕೀರ್ಣಗಳನ್ನು ನಡೆಸುತ್ತಾ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಮತ್ತು ಆಧುನಿಕ ತಂತ್ರಜ್ಞಾನದ ಅರಿವು ವಿದ್ಯಾರ್ಥಿಗಳಿಗೆ ಆಗುತ್ತದೆ. ಇಂತಹ ಕಾರ್ಯಕ್ರಮಗಳ ಆಯೋಜನೆಗೆ ಸ್ಪಂದಿಸಿದ ವಿದ್ಯಾಪೀಠಕ್ಕೆ ವಂದನೆಗಳನ್ನು ಸಲ್ಲಿಸಿದರು.

 

ಕಾರ್ಯಕ್ರಮದ ನಿರ್ವಹಣೆಯನ್ನು ಪೂಜಾ ಬಿ.ಸಿ., ಡಾ ಯಶೋಧ, ವಂದನಾರ್ಪಣೆಯನ್ನು ಡಾ. ಸ್ನೇಹಲತಾ ನೆರವೇರಿಸಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...