ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಮಾ. 23 : ಚಿತ್ರದುರ್ಗವು ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳಿಗಾಗಿ ಪ್ರಸಿದ್ಧಿ ಪಡೆದ ನಗರವಾಗಿದೆ. ನಗರಕ್ಕೆ ದಿನನಿತ್ಯ ಪ್ರವಾಸಿಗರು ಮತ್ತು ಸಾರ್ವಜನಿಕರು ಭೇಟಿ ನೀಡುತ್ತಿರುವುದರಿಂದ ನಗರ ಸೌಂದರ್ಯ ಹಾಗೂ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪ್ರಮುಖ ಸ್ಥಳಗಳಲ್ಲಿ “ಐ ಲವ್ ಚಿತ್ರದುರ್ಗ” ಎಂಬ ಆಕರ್ಷಕ ಶೀರ್ಷಿಕೆಯ ಫಲಕ ಅಳವಡಿಕೆ ಹಾಗೂ ಪಿಂಕ್ ಟ್ರಂಪೆಟ್ ಟ್ರೀ ಗಿಡಗಳನ್ನ ನಗರದ ಮುಖ್ಯ ಬೀದಿಗಳಲ್ಲಿ ನೆಡಬೇಕೆಂದು ಪಪ್ಪಿಸ್ ಸ್ಟೂಡೆಂಟ್ ವಿಂಗ್ ಅಧ್ಯಕ್ಷ ರವಿ ಚಿನ್ನು ಅವರು ಸೋಮವಾರ ಚಿತ್ರದುರ್ಗ ನಗರ ಸಭೆ ಪೌರಾಯುಕ್ತೆ ಲಕ್ಷ್ಮೀ ರವರೆಗೆ ಮನವಿ ಸಲ್ಲಿಸಿದರು.
ಚಿತ್ರದುರ್ಗ ನಗರದಲ್ಲಿ ಮುಖ್ಯ ರಸ್ತೆಗಳಲ್ಲಿ ಐ ಲವ್ ಚಿತ್ರದುರ್ಗ ಎಂಬುವ ನಾಮ ಫಲಕಗಳು ನಿರ್ಮಾಣವಾದಲ್ಲಿ ನಗರಕ್ಕೆ ಬರುವ ಪ್ರವಾಸಿಗರು ಹಾಗೂ ಸಾರ್ವಜನಿಕರು ಫೋಟೋ ತೆಗೆಯಲು ಆಕರ್ಷಿತರಾಗಿ, ಸಾಮಾಜಿಕ ಜಾಲತಾಣಗಳ ಮೂಲಕ ಚಿತ್ರದುರ್ಗ ನಗರದ ಪ್ರಸಿದ್ದಿ ಮತ್ತಷ್ಟು ಹೆಚ್ಚಾಗುತ್ತದೆ. ಇದರಿಂದ ನಗರದ ಸೌಂದರ್ಯ ವೃದ್ಧಿಯಾಗುವುದರ ಜೊತೆಗೆ ಪ್ರವಾಸೋದ್ಯಮಕ್ಕೂ ಸಹಕಾರವಾಗುತ್ತದೆ. ಆದ್ದರಿಂದ ಚಿತ್ರದುರ್ಗ ನಗರದ ಪ್ರಮುಖ ವೃತ್ತಗಳು, ಉದ್ಯಾನವನಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ “ಐ ಲವ್ ಚಿತ್ರದುರ್ಗ” ಎಂಬ ಶೀರ್ಷಿಕೆಯ ಫಲಕಗಳನ್ನು ನಿರ್ಮಿಸಬೇಕು ಹಾಗೂ ನಗರದ ಸೌಂದರ್ಯವರ್ಧನೆ ಹಾಗೂ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಪಿಂಕ್ ಟ್ರಂಪೆಟ್ ಟ್ರೀ ಗಿಡಗಳನ್ನ ನೆಡುವುದು ಅತ್ಯಂತ ಉಪಯುಕ್ತವಾಗಿದೆ. ಈ ಮರವು ಸುಂದರವಾದ ಗುಲಾಬಿ ಬಣ್ಣದ ಹೂವುಗಳನ್ನು ನೀಡುವುದರಿಂದ ನಗರದ ಸೌಂದರ್ಯ ಹೆಚ್ಚುವುದಲ್ಲದೆ, ಪರಿಸರಕ್ಕೂ ಸಹಕಾರಿ ಆಗುತ್ತದೆ, ಚಿತ್ರದುರ್ಗ ನಗರದ ಮುಖ್ಯ ರಸ್ತೆ ಬದಿಗಳಲ್ಲಿ ಹಾಗೂ ಖಾಲಿ ಇರುವ ಸಾರ್ವಜನಿಕ ಸ್ಥಳಗಳಲ್ಲಿ ಪಿಂಕ್ ಟ್ರಂಪೆಟ್ ಟ್ರೀ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ನಗರಸಭೆಯ ವತಿಯಿಂದ ಕೈಕೊಳ್ಳಬೇಕೆಂದು ಪಪ್ಪಿ ಸ್ ಪಪ್ಪಿ’ಸ್ ಸ್ಟೂಡೆಂಟ್ ವಿಂಗ್ ಅಧ್ಯಕ್ಷ ರವಿ ಚಿನ್ನು ಅವರು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಪ್ಪಿ ಸ್ ಪಪ್ಪಿ’ಸ್ ಸ್ಟೂಡೆಂಟ್ ವಿಂಗ್ ಉಪಾಧ್ಯಕ್ಷ ಸಂದೀಪ್ , ಕಾರ್ಯದರ್ಶಿ ಸಲೀಂ ಇದ್ದರು.



















